More

    ಬಿಜೆಪಿ ಮುಖಂಡನ ಆಪ್ತನ ಕ್ಲಬ್​ಗೆ ಖಾಕಿ ದಾಳಿ

    ಬೆಂಗಳೂರು:  ಅಕ್ರಮ ಚಟುವಟಿಕೆ ಆರೋಪದ ಮೇಲೆ ಬಿಎಸ್​ವೈ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂದು ಹೇಳಲಾಗುತ್ತಿರುವ ಬಿಜೆಪಿ ಮುಖಂಡನ ಆಪ್ತನ ಮಾಲೀಕತ್ವದ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿ 17 ಮಂದಿಯನ್ನು ಬಂಧಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

    ಅರಮನೆ ಮೈದಾನದಲ್ಲಿರುವ ಬಿಬಿಎಂಪಿ ಗುತ್ತಿಗೆದಾರ ಉದಯ್ ಗೌಡ ಮಾಲೀಕತ್ವದ ಕಂಟ್ರಾಕ್ಟರ್ಸ್ ಕ್ಲಬ್ ಮೇಲೆ ಮಾರ್ಚ್ 3ರಂದು ದಾಳಿ ನಡೆದಿದೆ. ಕ್ಲಬ್ ವ್ಯವಸ್ಥಾಪಕ, ಕ್ಯಾಶಿಯರ್, ಗ್ರಾಹಕರು ಸೇರಿ 17 ಮಂದಿಯನ್ನು ಬಂಧಿಸಿ, 22 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆದರೆ, ಪೊಲೀಸರ ದಾಳಿ ವೇಳೆ ಉದಯ್ ಗೌಡ ಇರಲಿಲ್ಲ. ಈಗ ತಲೆಮರೆಸಿಕೊಂಡು ಜಾಮೀನು ಪಡೆಯಲು ಯತ್ನಿಸುತ್ತಿರಬಹುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಉದಯ್ ಗೌಡನ ಮನೆ ಮೇಲೆ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಆಗ ತಪ್ಪಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಬಿಜೆಪಿ ನಾಯಕರ ಜತೆ ಸೇರಿ ಮೈತ್ರಿ ಸರ್ಕಾರ ಕೆಡವಲು ಯತ್ನಿಸಿದ್ದ ಕಿಂಗ್​ಪಿನ್​ಗಳಲ್ಲಿ ಈತ ಕೂಡ ಇದ್ದ ಎಂಬ ಆರೋಪ ಸಹ ಕೇಳಿ ಬಂದಿದ್ದವು.

    ಮೂಲತಃ ಮದ್ದೂರು ತಾಲೂಕಿನ ಉದಯ್ ಗೌಡ, ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುವುದಲ್ಲದೆ, ಬೆಂಗಳೂರು ಸೇರಿ ದೇಶದ ವಿವಿಧೆೆಡೆಯಿಂದ ಜೂಜುಕೋರರನ್ನು ವಿದೇಶಕ್ಕೆ ಕರೆದೊಯ್ದು ದಂಧೆ ನಡೆಸುತ್ತಾನೆ ಎಂಬ ಆರೋಪವೂ ಇದೆ. ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ಅರಮನೆ ಮೈದಾನದಲ್ಲಿ ಗುತ್ತಿಗೆದಾರರ ಜತೆ ಸೇರಿ ಕಂಟ್ರಾಕ್ಟರ್ಸ್ ಕ್ಲಬ್ ಕಟ್ಟಿದ್ದ. ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.

    ಇದೀಗ ಮತ್ತೆ ಯಡಿಯೂರಪ್ಪ ಸರ್ಕಾರ ಉರುಳಿಸಲು ರಾಜಕೀಯ ಮುಖಂಡರ ಜತೆ ಸೇರಿ ಉದಯ್ ಗೌಡ ಪ್ರಯತ್ನ ನಡೆಸುತ್ತಿದಾನೆ ಎಂಬ ಆರೋಪ ಕೇಳಿಬರುತ್ತಿವೆ. ಬಿಜೆಪಿಯ ಕೆಲ ಶಾಸಕರನ್ನು ಸಂಪರ್ಕ ಮಾಡಿ ಆಮಿಷವೊಡ್ಡಿ ತನ್ನತ್ತ ಸೆಳೆಯುವ ಸರ್ಕಸ್ ಮಾಡುತ್ತಿದ್ದಾನೆೆ. ಇದರ ಬೆನ್ನಲ್ಲೇ ಪೊಲೀಸರು ಕ್ಲಬ್ ಮೇಲೆ ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts