More

    ಟೆಡ್ಡಿ ಬೇರಲ್ಲೂ ಡ್ರಗ್ಸು, ಚಾಕೊಲೇಟಲ್ಲೂ ಡ್ರಗ್ಸು; ಪೆಡ್ಲರ್ಸ್​ಗೆ ಈಗ ಕೇಸ್ ಫಿಕ್ಸು..

    ಬೆಂಗಳೂರು: ಸದ್ಯ ಯಾರಾದರೂ ಟೆಡ್ಡಿ ಬೇರ್ ಹಿಡಿದುಕೊಂಡು ಹೋಗುತ್ತಿದ್ದರೂ ಅನುಮಾನದಿಂದ ನೋಡುವಂತಹ ಸಾಧ್ಯತೆಗಳೂ ಇವೆ. ಏಕೆಂದರೆ ಟೆಡ್ಡಿ ಬೇರ್​ ಮೂಲಕವೂ ಡ್ರಗ್ಸ್​ ಸಾಗಿಸುತ್ತಿದ್ದ ಪೆಡ್ಲರ್ಸ್​ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

    ಅಂದಹಾಗೆ ಈ ಡ್ರಗ್ಸ್​ ಮಾರಾಟ ಮಾಫಿಯಾದವರು ಬರೀ ಟೆಡ್ಡಿ ಬೇರ್ ಮಾತ್ರವಲ್ಲ, ಚಾಕೊಲೇಟ್, ಮೆಡಿಕಲ್ ಕಿಟ್​ಗಳಲ್ಲೂ ಡ್ರಗ್ಸ್​ ತುಂಬಿ ರಾಜಾರೋಷವಾಗಿ ಸಾಗಿಸಲು ಅನುಕೂಲವಾಗುವಂಥ ಟ್ರಿಕ್ಸ್​ ಕಂಡುಕೊಂಡಿದ್ದರು. ಅದಾಗ್ಯೂ ಈಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

    ಈ ರೀತಿ ಟೆಡ್ಡಿ ಬೇರ್​, ಚಾಕೊಲೇಟ್​, ಮೆಡಿಕಲ್ ಕಿಟ್​ ಮೂಲಕ ಡ್ರಗ್ಸ್ ಮಾರಾಟ ದಂಧೆ ನಡೆಸುತ್ತಿದ್ದ ಹೊರರಾಜ್ಯದ ಮೂವರನ್ನು ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ರಾಜ್ಯದ ಆಯುಷ್ ಪಾಂಡೆ ಅಲಿಯಾಸ್​ ಪ್ರದೀಪ್ ಪಾಂಡೆ, ರೋಹಿತ್ ರಾಮ್​ ಅಲಿಯಾಸ್​ ಅರುಣ್​ ರಾಮ್​ ಮತ್ತು ಅಸ್ಸಾಮ್​ನ ನೂರ್ ಅಲಿ ಅಲಿಯಾಸ್​ ಮೊಮಿನ್​ ಅಲಿ ಬಂಧಿತರು. ಬಂಧಿತರಿಂದ 23.80 ಲಕ್ಷ ರೂ. ಮೌಲ್ಯದ 8 ಬೇರೆ ಬೇರೆ ಥರದ ಮಾದಕ ವಸ್ತುಗಳು, 2 ದ್ವಿಚಕ್ರ ವಾಹನ ಮತ್ತು ಮೂರು ಮೊಬೈಲ್​ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಟೆಡ್ಡಿ ಬೇರಲ್ಲೂ ಡ್ರಗ್ಸು, ಚಾಕೊಲೇಟಲ್ಲೂ ಡ್ರಗ್ಸು; ಪೆಡ್ಲರ್ಸ್​ಗೆ ಈಗ ಕೇಸ್ ಫಿಕ್ಸು..
    ವಶ ಪಡಿಸಿಕೊಂಡಿರುವ ಮಾದಕ ವಸ್ತುಗಳು

    ಆರೋಪಿಗಳಲ್ಲಿ ರೋಹಿತ್ ಹಾಗೂ ಆಯುಷ್​ ಕೊರಿಯರ್ ಮೂಲಕ ರಾಜಸ್ಥಾನ, ಪಶ್ಚಿಮ ಬಂಗಾಳ, ರಾಜಸ್ಥಾನ, ಡಾರ್ಜಿಲಿಂಗ್​ ಮತ್ತು ಆಂಧ್ರಪ್ರದೇಶಗಳಿಂದ ಸ್ಪೀಕರ್ ಬಾಕ್ಸ್​, ಟೆಡ್ಡಿ ಬೇರ್​, ಮೆಡಿಕಲ್ ಕಿಟ್​ ಬಾಕ್ಸ್​ಗಳಲ್ಲಿ ಡ್ರಗ್ಸ್ ತುಂಬಿ ಕಳುಹಿಸುತ್ತಿದ್ದರು. ಅದನ್ನು ನೂರ್ ಸ್ವೀಕರಿಸಿ ಗ್ರಾಹಕರ ಲೊಕೇಷನ್ ಪಡೆದು ತಲುಪಿಸುತ್ತಿದ್ದ. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts