More

    ಉಜ್ವಲ ಭವಿಷ್ಯಕ್ಕೆ ಉನ್ನತ ಶಿಕ್ಷಣ ಪಡೆಯಿರಿ

    ಯಲಬುರ್ಗಾ: ಉಜ್ವಲ ಭವಿಷ್ಯಕ್ಕಾಗಿ ಪ್ರತಿ ವಿದ್ಯಾರ್ಥಿಯೂ ಉನ್ನತ ಶಿಕ್ಷಣ ಪಡೆಯಬೇಕು ಎಂದು ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು.

    ಪ್ರಾಚಾರ್ಯ ಎಸ್.ಜಿ.ಗುರಿಕಾರ ರಚಿಸಿದ ‘ಬೆಳಕು ಮೂಡಿದ ಘಳಿಗೆ’ ಕವನ ಸಂಕಲನ ಬಿಡುಗಡೆಗೊಳಿಸಿದ ಸಿಂಡಿಕೇಟ್ ಸದಸ್ಯ ಬಸವರಾಜ ಪೂಜಾರ್ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು. ಸಾಹಿತ್ಯ ಚಿಂತನೆಗಳಿಂದ ಉತ್ತಮ ಸಮಾಜ ಕಟ್ಟಬಹುದು ಎಂದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಸಾಹಿತಿ ರವಿತೇಜ ಅಬ್ಬಿಗೇರಿ, ಪ್ರಾಚಾರ್ಯ ನಿಂಗಪ್ಪ ಮಾತನಾಡಿದರು.

    ಪ್ರಾಚಾರ್ಯ ಎಸ್.ಜಿ.ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ್, ಪ್ರಮುಖರಾದ ರಾಮಣ್ಣ ಪ್ರಭಣ್ಣನವರ, ಕಳಕಪ್ಪ ಕುರಿ, ಪ್ರಾಧ್ಯಾಪಕರಾದ ಎಚ್.ಎಂ.ಗುಡಿಹಿಂದಿನ, ವೈ.ಬಿ.ಅಂಗಡಿ, ವೀರೇಶ ಗಡಾದ, ಬಿ.ಶಶಿಕುಮಾರ, ನಿರ್ಮಲಾ, ಮಂಜುಳಾ ಮಡಿವಾಳರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts