More

    ‘ಹೀಗಾದರೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ರನ್ನೂ ಉಗ್ರನೆಂದು ಕರೆಯುತ್ತಾರೆ’ ರಾಹುಲ್​ ಗಾಂಧಿ ಆರೋಪ

    ನವದೆಹಲಿ: ಕೃಷಿ ಕಾಯ್ದೆಯ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವೇ ಉಳಿದಿಲ್ಲ ಎಂದು ಅವರು ಆರೋಪಿಸಿರುವ ಅವರು, ಒಂದು ವೇಳೆ ಮೋಹನ್​ ಭಾಗವತ್​ ಅವರು ಪ್ರಧಾನಿಯನ್ನು ವಿರೋಧಿಸಿದರೆ ಅವರಿಗೂ ಉಗ್ರನೆಂದು ಹಣೆಪಟ್ಟಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಬಸ್​ ಚಾಲಕನ ತಪ್ಪಿಗೆ ಬಲಿಯಾದ ಮಾಜಿ ಮಿಸ್​ ವರ್ಲ್ಡ್​! 60ರ ಹರೆಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ಅಪರೂಪದ ಮಾಡೆಲ್​ ಇವರು

    ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರನ್ನು ಇಂದು ಸೇರಿಕೊಂಡಿರುವ ರಾಹುಲ್​ ಗಾಂಧಿ ಅವರು, “ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಂಡವಾಳಶಾಹಿಗಳಿಗೆ ಹಣ ಮಾಡಿಕೊಡುವುದರಲ್ಲಿ ನಿರತರಾಗಿದ್ದಾರೆ. ಅವರ ಕಾನೂನುಗಳನ್ನು ವಿರೋಧಿಸುವವರನ್ನು, ಅವರ ನಿಲುವನ್ನು ಪ್ರಶ್ನಿಸುವವರನ್ನು ಇಲ್ಲಿ ಭಯೋತ್ಪಾದಕರು ಎಂದು ಕರೆಯಲಾಗುತ್ತದೆ. ಅದು ರೈತರೇ ಆಗಿರಬಹುದು, ಕಾರ್ಮಿಕರೇ ಆಗಿರಬಹುದು ಅಥವಾ ಆರ್​ಎಸ್​ಎಸ್​ ಮುಖ್ಯಸ್ ಮೋಹನ್​ ಭಾಗವತ್​ ಅವರೇ ಆಗಿರಬಹುದು.” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲಸಿಕೆಯಲ್ಲಿ ಹಂದಿಮಾಂಸ: ಅಲ್ಲಿಯವರು ಓಕೆ ಎಂದರು, ಇಲ್ಲಿಯವರು ಇದು ‘ಹರಾಂ’ ಎಂದರು

    ದೇಶದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಒಂದು ವೇಳೆ ಪ್ರಜಾಪ್ರಭುತ್ವ ಇದೆ ಎಂದು ನಿಮಗೆನಿಸಿದರೆ ಅದು ನಿಮ್ಮ ಕಲ್ಪನೆಯಷ್ಟೇ. ಕೇವಲ ನಾಲ್ಕೈದು ಉದ್ಯಮಿಗಳಿಗೆ ಅನುಕೂಲ ಮಾಡುವ ಸಲುವಾಗಿ ಈ ಕೃಷಿ ಕಾಯ್ದೆಗಳನ್ನು ಮಾಡಲಾಗಿದೆ. ಪ್ರಧಾನಿಯವರು ಅನರ್ಹರು ಮತ್ತು ಅವರಿಗೆ ಏನೇನೂ ತಿಳಿದಿಲ್ಲ ಎನ್ನುವುದನ್ನು ನಮ್ಮ ದೇಶದ ಯುವಜನತೆ ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿಯವರು ಕೇವಲ ಬಂಡವಾಳಶಾಹಿಗಳಿಗೆ ಕಿವಿಗೊಡುತ್ತಾರೆ. ಅವರು ಏನು ಹೇಳಿದರೂ ಅದನ್ನು ಮಾಡುತ್ತಾರೆ ಎಂದು ಅವರು ದೂರಿದ್ದಾರೆ. (ಏಜೆನ್ಸೀಸ್)

    ಪತಿಗೆ ನನ್ನಲ್ಲಿ ಆಸಕ್ತಿಯಿಲ್ಲ- ಮಕ್ಕಳಾಗದ್ದಕ್ಕೆ ಅತ್ತೆ ನನ್ನನ್ನು ಹೀಯಾಳಿಸುತ್ತಿದ್ದಾರೆ… ಕುಗ್ಗಿ ಹೋಗಿದ್ದೇನೆ…

    ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts