More

    ಕರೊನಾ ವೈರಸ್​ ಪರಿಸ್ಥಿತಿ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ವಿಫಲವಾಗಿದ್ದಾರೆ ಎಂದ ಕಾಂಗ್ರೆಸ್ ನಾಯಕರು; ಮೊದಲು ಅಡಚಣೆ ನಿವಾರಿಸಿ ಎಂದ್ರು ರಾಹುಲ್​ ಗಾಂಧಿ

    ನವದೆಹಲಿ: ದೇಶದಲ್ಲಿ ಕರೊನಾ ಬಿಕ್ಕಟ್ಟನ್ನು ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ರಾಹುಲ್​ ಗಾಂಧಿ ಸೇರಿ ಕಾಂಗ್ರೆಸ್​ನ ಹಲವು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಲಾಕ್​ಡೌನ್​ನಿಂದ ಕರೊನಾ ನಿಯಂತ್ರಣ ಸಾಧ್ಯವಿಲ್ಲ. ಟೆಸ್ಟಿಂಗ್​ ಪ್ರಮಾಣ ಅಧಿಕ ಆಗಬೇಕು. ಕ್ಷಿಪ್ರ ತಪಾಸಣೆ ನಡೆಸಬೇಕು ಎಂದು ಈ ಹಿಂದೆ ರಾಹುಲ್​ ಗಾಂಧಿ ಆನ್​ಲೈನ್​ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಟ್ವೀಟ್​ಗಳ ಮೂಲಕವೂ ಮೋದಿಯವರಿಗೆ ಕೆಲವು ಸಲಹೆ ನೀಡಿದ್ದರು.

    ಇಂದು ಮತ್ತೆ ಟ್ವೀಟ್​ ಮಾಡಿ ಕರೊನಾ ತಪಾಸಣೆಯ ವೇಗ ಹೆಚ್ಚಬೇಕು ಎಂದು ಹೇಳಿದ್ದಾರೆ. ಕರೊನಾ ನಿಯಂತ್ರಣಕ್ಕೆ ಸಾಮೂಹಿಕ ಯಾದ್ರಿಚ್ಛಿಕ ತಪಾಸಣೆ ನಡೆಯಬೇಕು ಎಂದು ತಜ್ಞರೇ ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಸದ್ಯ ಒಂದು ದಿನಕ್ಕೆ 40,000 ಕರೊನಾ ತಪಾಸಣೆ ಆಗುತ್ತಿದೆ. ದಿನವೊಂದಕ್ಕೆ 1 ಲಕ್ಷ ಮಂದಿಗೆ ಕರೊನಾ ತಪಾಸಣೆ ಮಾಡುವಂತಾಗಲು ಕೆಲವು ಅಡಚಣೆಗಳು ಉಂಟಾಗಿವೆ. ಟೆಸ್ಟಿಂಗ್​ ಕಿಟ್​ಗಳು ಸಂಗ್ರಹ ಇದ್ದರೂ ಕೂಡ ಅದು ಆಗುತ್ತಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ತಪಾಸಣಾ ಪ್ರಕ್ರಿಯೆಗೆ ಉಂಟಾಗಿರುವ ಅಡ್ಡಿಯನ್ನು ಸರಿಪಡಿಸಬೇಕು ಎಂದು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ.

    ರಾಹುಲ್​ ಗಾಂಧಿಯಷ್ಟೇ ಅಲ್ಲದೆ ಕಾಂಗ್ರೆಸ್​ನ ಮನಮೋಹನ್​ಸಿಂಗ್​, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರ ನಾಯಕರೂ ಸಹ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈಗ ತೆಗೆದುಕೊಳ್ಳುತ್ತಿರುವ ಕ್ರಮ ತೃಪ್ತಿದಾಯಕವಾಗಿಲ್ಲ ಎಂದಿದ್ದಾರೆ.

    ಕಾಂಗ್ರೆಸ್​ ನಾಯಕರು ಮಾತನಾಡಿರುವ ವಿಡಿಯೋವೊಂದನ್ನು ಪಕ್ಷದ ಟ್ವಿಟರ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ತಪಾಸಣೆ ಮತ್ತು ಟ್ರೇಸಿಂಗ್​ ಇವೆರಡು ಕರೊನಾ ವಿರುದ್ಧ ಹೋರಾಟಕ್ಕೆ ಪ್ರಮುಖ ಮಾರ್ಗಗಳು. ಹಾಗೇ ಅತಂತ್ರವಾಗಿರುವ ವಲಸೆ ಕಾರ್ಮಿಕರೊಂದಿಗೆ ಮಾನವೀಯತೆಯಿಂದ ವರ್ತಿಸಬೇಕು. ಅವರಿಗೆ ರಕ್ಷಣೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಬೇಕು ಎಂದು ಈ ವಿಡಿಯೋಕ್ಕೆ ಕ್ಯಾಪ್ಷನ್​ ಬರೆಯಲಾಗಿದೆ. (ಏಜೆನ್ಸೀಸ್​)

    ಅನಂತ್‌ ಕುಮಾರ ಹೆಗಡೆ ಖಾತೆ ಕ್ಲೋಸ್‌ ಮಾಡಿದ ಟ್ವಿಟರ್‌! ಅಬ್ಬಾ… ಟ್ವಿಟರ್‌ ಬೇಡಿಕೆ ಏನಿದೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts