More

    ಶುದ್ದ ಸಸ್ಯಾಹಾರ; ಮೈಸೂರಿನಲ್ಲಿ ಪಿಎಂ ಮೋದಿ ಊಟದ ಮೆನು ಹೇಗಿದೆ ನೋಡಿ

    ಮೈಸೂರು: ಯೋಗ ಕಾರ್ಯಕ್ರಮ ನಿಮಿತ್ತ ಮೈಸೂರು ನಗರಕ್ಕೆ ಆಗಮಿಸಲಿರುವ ಪಿಎಂ ನರೇಂದ್ರ ಮೋದಿ ಅವರ ಊಟ-ಉಪಹಾರದ ಮೆನು ಸಿದ್ದವಾಗಿದೆ. ಶುದ್ದ ಸಸ್ಯಹಾರಿ ಊಟ ಸೇವಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಎಸ್​​ಪಿಜಿಯಿಂದ ವೇದಿಕೆ ಭದ್ರತೆ ಪರಿಶೀಲನೆ ನಡೆಸಲಾಗಿದೆ. ಮಹಾರಾಜ ಕಾಲೇಜು ಮೈದಾನದ ಸುತ್ತ ಪೊಲೀಸರ ಬಿಗಿ ಭದ್ರತೆ, ವೇದಿಕೆ ಹಿಂಬಾಗದಲ್ಲಿ ಬೃಹತ್ ಎಲ್ಇಡಿ ಅಳವಡಿಕೆ ಮಾಡಲಾಗಿದೆ.

    ಅದೇ ರೀತಿ ಮೈಸೂರಿಗೆ ಬರಲಿರುವ ಪಿಎಂ, ರ್ಯಾಡಿಸನ್ ಹೋಟೆಲ್​ನಲ್ಲಿ ತಂಗಲಿದ್ದಾರೆ. ಊಟದ ಮೆನುವಿನಲ್ಲಿ ಶುದ್ದ ಸಸ್ಯಹಾರಿ ಊಟ ಇದೆ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬರ್ ಸಿದ್ದಪಡಿಸಲಾಗುತ್ತದೆ.
    ಬ್ರೆಡ್ ಬಟರ್, ಮಿಕ್ಸ್ ಫ್ರೂಟ್, ಟೀ ಹಾಗೂ ಮಾರಿ ಬಿಸ್ಕಟ್ ಇದೆ. ರಾತ್ರಿಯ ಊಟಕ್ಕೆ ಕಿಚಡಿ/ಗುಜರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ ಫ್ರೂಟ್ ಒಳಗೊಂಡ ಮೆನು ತಯಾರಿಸಲಾಗುತ್ತದೆ.

    ಮೈಸೂರಿಗೆ ಆಗಮಿಸುತ್ತಿರುವ ಪಿಎಂ ಮೋದಿಗೆ ವಿಶೇಷ ಉಡುಗೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts