More

    ಕರೊನಾ ಕಂಟ್ರೋಲ್​ ಮಾಡಿ: ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಸೂಚನೆ

    ನವದೆಹಲಿ: ಮಹಾಮಾರಿ ಕರೊನಾ ಪ್ರಕರಣಗಳು ದೇಶಾದ್ಯಂತ ಮತ್ತೆ ಹೆಚ್ಚಳವಾಗುತ್ತಿರು ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ಪ್ರಧಾನಿ ಮೋದಿ ಕರೊನಾ ನಿಯಂತ್ರಣಕ್ಕೆ ತರುವಂತೆ ಸೂಚನೆ ನೀಡಿದ್ದಾರೆ.

    ವಿಡಿಯೋ ಕಾನ್ಫರೆನ್ಸ್​ ಮೂಲಕ ಮುಖ್ಯಮಂತ್ರಿಗಳ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ರಾಜ್ಯಗಳಲ್ಲಿ ಸದ್ಯದ ವಸ್ತು ಪರಿಸ್ಥಿತಿ ಮತ್ತು ಲಸಿಕೆ ವಿತರಣೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ, ಲಸಿಕೆ ನೀಡುವ ಪ್ರಮಾಣ ಮತ್ತು ಕರೊನಾ ಟೆಸ್ಟ್​ಗಳನ್ನು ಹೆಚ್ಚಿಸಿ ಎಂದು ಹೇಳಿದ್ದಾರೆ.

    ಇದನ್ನೂ ಓದಿರಿ: ಪತ್ನಿ ಇರುವಾಗಲೇ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಕಾನೂನು ಏನು ಹೇಳುತ್ತದೆ?

    ಇನ್ನು ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸುವುದು ಕಡ್ಡಾಯಗೊಳಿಸಲು ಪ್ರಧಾನಿ ಸೂಚಿಸಿದ್ದು, ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹೇಳಿದ್ದಾರೆ. ಕರೊನಾ ನಿಯಂತ್ರಿಸಲು ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳುವಂತೆ ಸಲಹೆ ಇದೇ ವೇಳೆ ಪ್ರಧಾನಿ ನೀಡಿದರು.

    ವಿಧಾನ ಸೌಧ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಸಂವಾದದಲ್ಲಿ ಭಾಗಿಯಾದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

    ಕರೊನಾ ಸೋಂಕಿನಿಂದ ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ದಿಲೀಪ್​ ಗಾಂಧಿ ನಿಧನ

    ದೆಹಲಿ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬಿಜೆಪಿ ಸಂಸದ ರಾಮ್​ ಸ್ವರೂಪ್​ ಶರ್ಮಾ ಶವ ಪತ್ತೆ

    ಲಾರಿ ಡಿಕ್ಕಿಯ ರಭಸಕ್ಕೆ ಕುಸಿದ ಹೋಟೆಲ್ ಕಟ್ಟಡ: ಅದೃಷ್ಟವಶಾತ್​ ತಪ್ಪಿತು ಭಾರೀ ಅನಾಹುತ! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts