More

    ಗೆಹ್ಲೋಟ್ ವಿರುದ್ಧ ವಾಗ್ದಾಳಿ; ಪೇಪರ್ ಲೀಕ್​ನಿಂದ ಯುವಕರ ಭವಿಷ್ಯ ಹಾಳು

    ಜೋಧಪುರ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರ್ಕಾರದ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ರಾಜ್ಯದ ಪೇಪರ್ ಲೀಕ್ ಮಾಫಿಯಾ ಲಕ್ಷಾಂತರ ಯುವಕರ ಭವಿಷ್ಯವನ್ನು ಹಾಳುಮಾಡಿದೆ ಎಂದು ಆರೋಪಿಸಿದ್ದಾರೆ.

    ರಾಜ್ಯದಲ್ಲಿ ಏರ್ಪಡಿಸಿದ್ದ ರಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಕೆಂಪು ಡೈರಿ ಉಲ್ಲೇಖಿಸಿದರು. ಕಾಂಗ್ರೆಸ್ ಸರ್ಕಾರದ ಪ್ರತಿ ಭ್ರಷ್ಟಾಚಾರದ ಕರಾಳತೆ ಇದರಲ್ಲಡಗಿದೆ. ಅದನ್ನು ಅದನ್ನು ಬಯಲಿಗೆಳೆಯಲು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು. ರಾಜಸ್ಥಾನದಲ್ಲಿ ಸಚಿವ ಸ್ಥಾನದಿಂದ ವಜಾಗೊಂಡ ಮಾಜಿ ಸಚಿವ ರಾಜೇಂದ್ರ ಗುಧಾ ಅವರ ಬಳಿ ಇರುವ ಕೆಂಪು ಡೈರಿ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಈ ಡೈರಿಯಲ್ಲಿ ಮುಖ್ಯಮಂತ್ರಿ ಗೆಹ್ಲೋಟರ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿಯಿದೆ ಎಂದು ಗುಧಾ ತಿಳಿಸಿದ್ದರು.

    ಕಾಂಗ್ರೆಸ್​ಗೆ ರೈತರ ಅಥವಾ ಸೈನಿಕರ ಬಗ್ಗೆ ಕಾಳಜಿ ಇಲ್ಲ. ಆ ಪಕ್ಷಕ್ಕೆ ಕುರ್ಚಿ ಬಿಟ್ಟು ಬೇರೇನೂ ಕಾಣಿಸುವುದಿಲ್ಲ. ಕಾಂಗ್ರೆಸ್ ತನ್ನ ಮತ ಬ್ಯಾಂಕನ್ನು ಜನರ ಹಿತಾಸಕ್ತಿಗಿಂತ ಹೆಚ್ಚು ಪ್ರೀತಿಸುತ್ತದೆ. ರಾಜಸ್ಥಾನವನ್ನು ಪ್ರವಾಸೋದ್ಯಮದಲ್ಲಿ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಬಿಜೆಪಿಯದ್ದು. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಯನ್ನು ರಾಜ್ಯದ ಮೂಲೆ ಮೂಲೆಗೆ ಕೊಂಡೊಯ್ಯಲಿದೆ ಎಂದು ಪಿಎಂ ಭರವಸೆ ನೀಡಿದರು.

    ಚುನಾವಣೆ ಹೊಸ್ತಿಲಲ್ಲಿ ಅಭಿವೃದ್ಧಿ ಮಂತ್ರ: ರಾಜ್ಯದಲ್ಲಿ ರೂ 5,000 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪಿಎಂ ಮೋದಿ ಚಾಲನೆ ನೀಡಿದ್ದು, ರಸ್ತೆ, ರೈಲು, ವಿಮಾನಯಾನ, ಆರೋಗ್ಯ ಮತ್ತು ಉನ್ನತ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

    ರೂ.12,000 ಕೋಟಿ ಯೋಜನೆ

    ಜಬಲ್​ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿ -ಠಿ; 100 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗಲಿರುವ ‘ವೀರಾಂಗಣೆ ರಾಣಿ ದುರ್ಗಾವತಿ ಸ್ಮಾರಕ ಮತ್ತು ಉದ್ಯಾನ’ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ, ರಸ್ತೆ, ರೈಲು, ಇಂಧನ, ವಸತಿ ಮತ್ತು ಕುಡಿಯುವ ನೀರಿನಂತಹ ಕ್ಷೇತ್ರಗಳಲ್ಲಿ -ಠಿ; 12,000 ಕೋಟಿ ರೂಪಾಯಿ ಅಧಿಕ ಮೊತ್ತದ ಯೋಜನೆಗಳನ್ನು ಅನಾವರಣಗೊಳಿಸಿದರು. ರಾಣಿ ದುರ್ಗಾವತಿ ಅವರ 500ನೇ ಜನ್ಮಶತಮಾನೋತ್ಸವವನ್ನು ಕೇಂದ್ರವು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಈ ವರ್ಷದ ಜುಲೈನಲ್ಲಿ ಮಧ್ಯಪ್ರದೇಶದ ಶಹದೋಲ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರು ಈ ಆಚರಣೆಯ ಬಗ್ಗೆ ಘೊಷಣೆ ಮಾಡಿದ್ದರು.

    ಆರ್ಥಿಕ ಸಂಕಷ್ಟ ಕಾಂಗ್ರೆಸ್ ಟೀಕೆ

    ಬಹುಪಾಲು ಭಾರತೀಯ ಕುಟುಂಬಗಳು ಹಣದುಬ್ಬರ, ಸಾಲದ ಹೆಚ್ಚಳ ಹಾಗೂ ಮನೆ ಉಳಿತಾಯದ ಕುಸಿತದಿಂದಾಗಿ ಮೋದಿ ನಿರ್ವಿುತ ಆರ್ಥಿಕ ಸಂಕಷ್ಟದ ತೀವ್ರ ಮಟ್ಟವನ್ನು ಎದುರಿಸುತ್ತಿವೆ ಎಂದು ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಲೇಖನವೊಂದನ್ನು ಹಂಚಿಕೊಂಡ ಅವರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಚಿಗೆ ಗೃಹ ಹಣಕಾಸು ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಕುರಿತು ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಆದಾಯದ ಕುಸಿತ, ಉಳಿತಾಯ ತಗ್ಗಿರುವ ಆತಂಕಕಾರಿ ಚಿತ್ರಣ ನೀಡಿದೆ. ಮೋದಿ ಸರ್ಕಾರ 2022-23ರ ಬಳಕೆ ಕುರಿತ ವೆಚ್ಚ ಸಮೀಕ್ಷೆಯನ್ನು ಏಕೆ ಮರೆ ಮಾಚುತ್ತಿದೆ ಎಂಬುದನ್ನು ಈ ದತ್ತಾಂಶ ವಿವರಿಸುತ್ತದೆ. ಹೆಚ್ಚಿನ ಭಾರತೀಯರು ಹೇಗೆ ಬಡವರಾಗುತ್ತಿದ್ದಾರೆ ಎಂಬುದನ್ನು ಇದು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts