More

    ಕರೊನಾ ನಡುವೆಯೂ ದೇಶಾದ್ಯಂತ ಬಡವರಿಗಾಗಿ 18 ಲಕ್ಷ ಮನೆಗಳ ನಿರ್ಮಾಣ

    ನವದೆಹಲಿ: ಕರೊನಾ ಮಹಾಮಾರಿ ನಡುವೆಯೂ ದೇಶಾದ್ಯಂತ ಬಡವರಿಗಾಗಿ 18 ಲಕ್ಷ ಮನೆಗಳು ನಿರ್ಮಾಣಗೊಂಡಿವೆ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ತಿಳಿಸಿದ್ದಾರೆ.

    ಮಧ್ಯಪ್ರದೇಶದಲ್ಲಿ ‘ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ’ಯಡಿ ನಿರ್ಮಾಣ ಮಾಡಲಾದ 1.75 ಕೋಟಿ ಮನೆಗಳನ್ನು ರಾಜ್ಯದ ಬಡ ಲಾನುಭವಿಗಳಿಗೆ ಶನಿವಾರ ಹಂಚಿಕೆ ಮಾಡಿ ಮಾತನಾಡಿದ ಅವರು, ಸಾಮಾನ್ಯ ದಿನಗಳಲ್ಲಿ ಒಂದು ಮನೆ ನಿರ್ಮಾಣ ಮಾಡಲು ಕನಿಷ್ಠ 125 ದಿನಗಳು ಬೇಕಾಗುತ್ತವೆ. ಆದರೆ, ಕರೊನಾ ಅವಧಿಯಲ್ಲಿ ಮನೆ ನಿರ್ಮಾಣ ಕಾರ್ಯ ಕೇವಲ 45-60 ದಿನಗಳಲ್ಲಿ ಪೂರ್ಣಗೊಂಡಿತು. ಕರೊನಾದಿಂದ ನಗರ ಬಿಟ್ಟು ಹಳ್ಳಿಗಳಿಗೆ ಬಂದಿದ್ದ ವಲಸೆ ಕಾರ್ಮಿಕರನ್ನೇ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಕರೊನಾ ತಂದಿಟ್ಟಿದ್ದ ಸವಾಲನ್ನೇ ಅವಕಾಶವನ್ನಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಇದು ಒಳ್ಳೆಯ ನಿದರ್ಶನ ಎಂದು ಹೇಳಿದರು.

    ಇದನ್ನೂ ಓದಿ: ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧ ಮತ್ತು ಇಬ್ಬರು ಬಾಲಕಿಯರು ಪೊಲೀಸ್ ವಶಕ್ಕೆ

    ರಾಜ್ಯ ಸರ್ಕಾರದ ಸಹಕಾರದೊಂದಿಗೆ ಏರ್ಪಡಿಸಲಾಗಿದ್ದ ಗಹಪ್ರವೇಶ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡ ಪ್ರಧಾನಿ, ಬಾಡಿಗೆಮನೆಯ ಹಂಗಿಲ್ಲದೆ, ತಮ್ಮದೇ ಸ್ವಂತ ಮನೆಯಲ್ಲಿ ಬದುಕಬೇಕೆಂಬ ರಾಜ್ಯದ 1.75 ಕುಟುಂಬಗಳ ಕನಸು ಇಂದು ನನಸಾಗಿದೆ. ಕಳೆದ 6 ವರ್ಷಗಳಲ್ಲಿ ದೇಶದ 2.25 ಕೋಟಿ ಕುಟುಂಬಗಳಿಗೆ ಕೇಂದ್ರದ ಯೋಜನೆಯಿಂದ ಮನೆ ನಿರ್ಮಾಣ ಮಾಡಿಕೊಡಲಾಗಿದೆ ಎಂದು ಸಂತಸ ಹಂಚಿಕೊಂಡರು.

    ಇದನ್ನೂ ಓದಿ: ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ

    ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಮಧ್ಯಪ್ರದೇಶ ಈವರೆಗೆ 23 ಕೋಟಿ ರೂ. ಖರ್ಚು ಮಾಡಿದ್ದು, ಇದರಿಂದ ವಲಸೆ ಕಾರ್ಮಿಕರಿಗೆ 2 ರೀತಿಯಲ್ಲಿ ಲಾಭವಾಗಿದೆ. ವಾಪಸಾದ ಕಾರ್ಮಿಕರಿಗೆ ಉದ್ಯೋಗ ಸಿಕ್ಕಿರುವುದಲ್ಲದೆ, ಇಟ್ಟಿಗೆ, ಸಿಮೆಂಟು, ಮರಳು ಸೇರಿ ಕಾಮಗಾರಿ ಚಟುವಟಿಕೆಗಳಿಗೆ ಬೇಕಿರುವ ಸಾಮಗ್ರಿಗಳೂ ಮಾರಾಟಗೊಂಡಿವೆ. ಕಷ್ಟಕಾಲದಲ್ಲಿ ಗ್ರಾಮೀಣ ಆರ್ಥಿಕತೆ ನಿರ್ವಹಣೆ ಸಾಧ್ಯವಾಗುತ್ತಿದೆ ಎಂದು ಪ್ರಧಾನಿ ವಿವರಿಸಿದರು.

    ಇದನ್ನೂ ಓದಿ: ತೆರಿಗೆ ವಂಚನೆ ಕೇಸ್ – ಎ.ಆರ್.ರೆಹಮಾನ್​ಗೆ ಮದ್ರಾಸ್ ಹೈಕೋರ್ಟ್ ನೋಟಿಸ್​

    ಲಾಕ್‌ಡೌನ್ ಹಿಂಪಡೆದ ಬಳಿಕ ಜನಜೀವನ ಸಹಜ ಸ್ಥಿತಿಗೆ ಬಂದಿದ್ದರೂ, ಲಸಿಕೆ ಇನ್ನೂ ಬಂದಿಲ್ಲ. ಹೀಗಾಗಿ, ಕರೊನಾ ಬಗ್ಗೆ ನಿರ್ಲಕ್ಷ್ಯ ಬೇಡ. ಲಸಿಕೆ ಬರುವ ತನಕವೂ ನಾವು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು. ಸಿಎಂ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್)

    ಜ್ಯೂಸಿ ಗಾಸಿಪ್​, ಅಪಪ್ರಚಾರಗಳ ಸಂತ್ರಸ್ತರಾಗುತ್ತಿದ್ದಾರೆ ಜಡ್ಜ್​ಗಳು: ನ್ಯಾಯಮೂರ್ತಿ ಎನ್​.ವಿ.ರಮಣ ಕಳವಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts