More

    ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: 6.62 ಲಕ್ಷ ಗ್ರಾಮಗಳಿಗೆ ಯೋಜನೆಯ ಲಾಭ

    ನವದೆಹಲಿ: ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮದಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಮ್ಯಾಪಿಂಗ್ (ಸ್ವಾಮಿತ್ವ) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು.

    ಈ ಯೋಜನೆಯಿಂದ 6.62 ಲಕ್ಷ ಗ್ರಾಮಗಳಿಗೆ ಲಾಭವಾಗಲಿದೆ. ಈ ಯೋಜನೆ ಅಡಿಯಲ್ಲಿ ರೈತರ ಜಮೀನುಗಳು ಸಂಪೂರ್ಣ ಡಿಜಿಟಲೀಕರಣವಾಗಲಿದ್ದು, ಜಮೀನು ವ್ಯಾಜ್ಯಗಳ ಪರಿಹಾರಕ್ಕಾಗಿ ಡಿಜಿಟಲ್​ ಸೂತ್ರ ಸಿಗಲಿದೆ.

    ಇಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100, ಮಧ್ಯ ಪ್ರದೇಶದ 44, ಉತ್ತರಾಖಂಡದ 50 ಮತ್ತು ಕರ್ನಾಟಕದ 2 ಗ್ರಾಮಗಳು ಸೇರಿ ಒಟ್ಟು 763 ಗ್ರಾಮಗಳ ಫಲಾನುಭವಿಗಳು ಇಂದು ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳ ಫಲಾನುಭವಿಗಳಿ ಇಂದು ಒಂದೇ ದಿನದಲ್ಲಿ ಪ್ರಾಪರ್ಟಿ ಕಾರ್ಡ್​ಗಳ ಭೌತಿಕ ಪ್ರತಿಗಳನ್ನು ಸ್ವೀಕರಿಸಲಿದ್ದಾರೆ. ಪ್ರಾಪರ್ಟಿ ಕಾರ್ಡ್‌ನ ಅತ್ಯಲ್ಪ ವೆಚ್ಚವನ್ನು ಮರುಪಡೆಯುವ ವ್ಯವಸ್ಥೆಯನ್ನು ಮಹಾರಾಷ್ಟ್ರ ಹೊಂದಿರುವುದರಿಂದ ಅದು ಒಂದು ತಿಂಗಳ ಸಮಯ ತೆಗೆದುಕೊಂಡಿದೆ.

    ಇದನ್ನೂ ಓದಿ: ದೊಡ್ಡ ಕಂಪನಿಗಳಿಗೆ ರೆಡ್​ಕಾರ್ಪೆಟ್: ಅಂಬಾನಿ, ಅದಾನಿ, ಬಿರ್ಲಾ, ಪತಂಜಲಿ ಗ್ರೂಪ್​ಗೆ ಮುಖ್ಯಮಂತ್ರಿ ಆಹ್ವಾನ

    ಈ ಯೋಜನೆಯಿಂದ ರೈತರು ತಮ್ಮ ಪ್ರಾಪರ್ಟಿಯನ್ನು ಆರ್ಥಿಕ ಆಸ್ತಿಯನ್ನಾಗಿ ಬಳಸಿಕೊಂಡು ಸಾಲ ಸೇರಿದಂತೆ ಇನ್ನಿತರ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸುಲಭವಾಗಲಿದೆ. ಸ್ವಾಮಿತ್ವ ಕೇಂದ್ರ ಸರ್ಕಾರದ ಪಂಚಾಯತ್​ ರಾಜ್​ ಇಲಾಖೆಯ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಮನೆ ಮಾಲೀಕರಿಗೆ ‘ಹಕ್ಕುಗಳ ದಾಖಲೆ’ ಒದಗಿಸುವುದು ಮತ್ತು ಆಸ್ತಿ ಕಾರ್ಡ್‌ಗಳನ್ನು ನೀಡುವುದು ಯೋಜನೆಯ ಉದ್ದೇಶವಾಗಿದೆ.

    ಈ ಯೋಜನೆಯನ್ನು ದೇಶಾದ್ಯಂತ ನಾಲ್ಕು ವರ್ಷ (2020-2024)ಗಳ ಸಮಯದವರೆಗೆ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ. ಕೊನೆಯದಾಗಿ ದೇಶದ ಸುಮಾರು 6.62 ಲಕ್ಷ ಗ್ರಾಮಗಳು ಇದರ ಲಾಭವನ್ನು ಪಡೆಯಲಿವೆ.

    ಉತ್ತರ ಪ್ರದೇಶದ, ಹರಿಯಾಣದ, ಮಹಾರಾಷ್ಟ್ರದ, ಮಧ್ಯ ಪ್ರದೇಶದ, ಉತ್ತರಾಖಂಡ ಮತ್ತು ಕರ್ನಾಟಕ ರಾಜ್ಯಗಳು ಯೋಜನೆಯ ಅನುಷ್ಠಾನಕ್ಕೆ ತರಲು ಗ್ರಾಮೀಣ ಭಾಗದಲ್ಲಿ ಡ್ರೋನ್​ ಸರ್ವೇ ನಡೆಸಲು ಸರ್ವೇ ಆಫ್​ ಇಂಡಿಯಾದ ಜ್ಞಾಪಕ ಪತ್ರಕ್ಕೆ ಸಹಿ ಹಾಕಿವೆ. ಈ ರಾಜ್ಯಗಳು ಡಿಜಿಟಲ್ ಪ್ರಾಪರ್ಟಿ ಕಾರ್ಡ್ ಸ್ವರೂಪ ಮತ್ತು ಡ್ರೋನ್ ಆಧಾರಿತ ಸಮೀಕ್ಷೆಗೆ ಒಳಪಡಬೇಕಾದ ಗ್ರಾಮಗಳನ್ನು ಈಗಾಗಲೇ ಅಂತಿಮಗೊಳಿಸಿವೆ. (ಏಜೆನ್ಸೀಸ್​)

    ಮಹೀಂದ್ರಾ ತದ್ರೂಪಿ ಪುಟಾಣಿ ವಾಹನ​ ಉಚಿತವಾಗಿ ಪಡೆಯಲು ಇಲ್ಲಿದೆ ಆಫರ್​, ಕೆಲವೇ ಗಂಟೆ ಬಾಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts