More

    LIVE| ಮಂಡ್ಯದಲ್ಲಿ ಮೋದಿ ಮೇನಿಯಾ: ಸಾರ್ವಜನಿಕ ಸಭೆಯ ನೇರಪ್ರಸಾರ

    ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ, ಚುನಾವಣೆ ಸಮೀಪಿಸುತ್ತಿದ್ದಂತೆ ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಸಕ್ಕರೆ ನಾಡು ಮಂಡ್ಯಕ್ಕೆ ಬಂದಿಳಿದಿರುವ ಪ್ರಧಾನಿ ಮೋದಿ ಒಕ್ಕಲಿಗರ ಕೋಟೆಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸುತ್ತಿದ್ದಾರೆ. 1.8 ಕಿ.ಮೀ ರೋಡ್​ ಶೋ ಮೂಲಕ ಹೋಗಿ ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟನೆ ಮಾಡಿದ್ದು, ಇದೀಗ ಗೆಜ್ಜಲೆಗೆರೆಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಜನತೆಯನ್ನು ಉದ್ದೇಶಿಸಿ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಕಾರ್ಯಕ್ರಮದ ನೇರಪ್ರಸಾರವನ್ನು ಈ ಮೇಲಿನ ದಿಗ್ವಿಜಯ ನ್ಯೂಸ್​ ಯೂಟ್ಯೂಬ್​ ಚಾನೆಲ್​ ಲೈವ್​ನಲ್ಲಿ ವೀಕ್ಷಣೆ ಮಾಡಬಹುದು.

    ಸುಮಾರು 1.8 ಕಿ.ಮೀ ರೋಡ್​ ಶೋ ಮೂಲಕ ಹನಕೆರೆ ಹೆದ್ದಾರಿಯ ಸೇತುವೆಗೆ ತೆರಳಿ ದಶಪಥ ಹೆದ್ದಾರಿಯನ್ನು ಮೋದಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಪ್ರಧಾನಿಗೆ ರೆಡ್ ಕಾರ್ಪಟ್ ಹಾಕಿ ಸ್ವಾಗತಿಸಲಾಯಿತು. ಜಾನಪದ ಕಲಾತಂಡವು ಮೋದಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡವು. ಈ ವೇಳೆ ಜಾನಪದ ಕಲಾತಂಡದತ್ತ ಪ್ರಧಾನಿ ಮೋದಿ ಕೈ ಬೀಸಿದರು. ಕೆಲ ಹೊತ್ತು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಒಂಟಿಯಾಗಿ ಹೆಜ್ಜೆ ಹಾಕಿದರು. ಸಿಎಂ ಬಸವರಾಜ ಬೊಮ್ಮಾಯಿಯನ್ನು ಬಿಟ್ಟು ಒಬ್ಬರೆ ಕೈ ಬೀಸುತ್ತಾ ಸಾಗಿದರು.

    ಎಕ್ಸ್‌ಪ್ರೆಸ್ ವೇ ವಿಶೇಷತೆ ಏನು?
    ಈ ಎಕ್ಸ್‌ಪ್ರೆಸ್ ವೇ ರಾಜ್ಯದಲ್ಲೇ ಮೊದಲು. 118 ಕಿ.ಮೀ. ಉದ್ದದ ರಸ್ತೆ ಇದಾಗಿದೆ. 8,480 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಪ್ರಯಾಣ ಅವಧಿ 3 ತಾಸಿನಿಂದ 75 ನಿಮಿಷಕ್ಕೆ ಇಳಿಕೆಯಾಗಲಿದೆ. 4 ರೈಲ್ವೆ ಸೇತುವೆಗಳು, 49 ಅಂಡರ್​ಪಾಸ್​ ಮತ್ತು 13 ಮೇಲ್ಸುತುವೆ, 69 ಬಸ್​ ಬೇ ಗಳು ಇವೆ.

    ಲೋಕಾರ್ಪಣೆ ಬಳಿಕ ವೇದಿಕೆ ಕಾರ್ಯಕ್ರಮದತ್ತ ಪ್ರಧಾನಿ ತೆರಳಿದರು. ಮದ್ದೂರಿನ ಗೆಜ್ಜಲಗೆರೆ ಕಾಲನಿ ಬಳಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮ ಮುಗಿಸಿ ಗಜ್ಜಲೆಗೆರೆ ಬಳಿ‌ ನಿರ್ಮಾಣವಾಗಿರುವ ಹೆಲಿಪ್ಯಾಡ್​ನಿಂದ ಧಾರವಾಡಕ್ಕೆ ಪ್ರಧಾನಿ ಮೋದಿ ತೆರಳಲಿದ್ದಾರೆ.

    ಮಂಡ್ಯಕ್ಕೆ ಭೇಟಿ ಕೊಟ್ಟ ಮೊದಲ ಪ್ರಧಾನಿ ನೆಹರು: ಮೋದಿ 4ನೇ ಪ್ರಧಾನಿ, ರಾಜಕೀಯವಾಗಿ 2ನೇ ಭೇಟಿ

    ಮೈ-ಬೆಂ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಪಾಲಿಟಿಕ್ಸ್ ವಿಚಾರ: ಜ್ಯೋತಿಷಿ ಕತೆ ಹೇಳಿ ಸುಮಲತಾ ತಿರುಗೇಟು

    2ನೇ ಬಾರಿ ಚಿಕ್ಕ ಮಧುರೆ ಶನಿಮಹಾತ್ಮನ ಸನ್ನಿಧಿಗೆ ಮಾಂಸದ ಹಾರ ತಂದು ಸಿಕ್ಕಿಬಿದ್ದ ಕಿಡಿಗೇಡಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts