More

    ಮೇ 3 ರಂದು ಪಿಎಂ ನರೇಂದ್ರ ಮೋದಿ ಅಂಕೋಲಾಕ್ಕೆ

    ಕಾರವಾರ : ಪಿಎಂ ನರೇಂದ್ರ ಮೋದಿ ಅವರು ಮೇ 3 ರಂದು ಆಗಮಿಸಿ ಪ್ರಚಾರ ಸಮಾವೇಶ ನಡೆಸುವರು ಎಂದು ಕೇಂದ್ರ ಬಂದರು, ಒಳನಾಡು ಜಲಸಾರಿಗೆ ಹಾಗೂ ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವ ಶ್ರೀಪಾದ ನಾಯ್ಕ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸರ್ಕಾರಿ ಜಾಗದಲ್ಲೂ ಅನುಮತಿ ಪಡೆದು ಪ್ರಚಾರ ಸಭೆಗಳನ್ನು ನಡೆಸಲು ಅವಕಾಶವಿದೆ. ನಿಯಮದಂತೆ ಅನುಮತಿ ಪಡೆದು, ಅಂಕೋಲಾ ತಾಲೂಕಿನ ಹಟ್ಟಿಕೇರಿ ಸಮೀಪ ವಿಮಾನ ನಿಲ್ದಾಣ ಮಾಡಲು ಗುರುತಿಸಿದ ಜಾಗದಲ್ಲಿ ಸಮಾವೇಶ ನಡೆಸಲಾಗುವುದು. ಸುಮಾರು 3 ಲಕ್ಷಕ್ಕೂ ಅಧಿಕ ಜನ ಪಾಳ್ಗೊಳ್ಳುವರು ಎಂದರು.
    ಮೋದಿ ಸರ್ಕಾರ ಬಂದ ಮೇಲೆ ಅಭಿವೃದ್ಧಿಯ ವೇಗ ಹೆಚ್ಚಿದೆ. ಕರ್ನಾಟಕದಲ್ಲೂ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಸಾಕಷ್ಟು ಅಭಿವೃದ್ಧಿಯಾಗಿದೆ. ಮತ್ತೊಮ್ಮೆ ಜನ ಡಬಲ್ ಇಂಜಿನ್ ಸರ್ಕಾರ ಆರಿಸಿ ತರಬೇಕು ಎಂದು ಜನರ ಬಳಿ ಕೇಳುತ್ತಿದ್ದೇವೆ ಎಂದರು.
    ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದು ಪಕ್ಷದ ಪ್ರಮುಖರ ಸಭೆ ನಡೆಸಿದ್ದೇನೆ. ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರಗಳ ಹಂತದಲ್ಲಿ ಪಕ್ಷ ಸಂಘಟನೆಯ ಪರಿಯನ್ನು ನೋಡಿದರೆ ಜಿಲ್ಲೆಯ ಆರೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದು ಖಚಿತವಾಗಿದೆ. ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಶಾಸಕಿ ರೂಪಾಲಿ ನಾಯ್ಕ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಅವರೂ ಮತ್ತೊಮ್ಮೆ ಗೆಲ್ಲುವುದು ಖಚಿತ ಎಂದರು.

    ಇದನ್ನೂ ಓದಿ: ನೌಕಾನೆಲೆ ಜಾಗದಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಅನುಮತಿ ಕೊಟ್ಟರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ: ಬಿ.ಕೆ.ಹರಿಪ್ರಸಾದ್


    ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ವಿಳಂಬವಾದ ಬಗ್ಗೆ ಸ್ಥಳೀಯ ಪ್ರಮುಖರಿಂದ ಮಾಹಿತಿ ಪಡೆದಿದ್ದೇನೆ. ಶೀಘ್ರ ಕಾಮಗಾರಿ ಮುಗಿಸಿಕೊಡುವ ಕುರಿತು ನಿತಿನ್ ಗಡ್ಕರಿ ಅವರ ಜತೆ ಮಾತುಕತೆ ನಡೆಸುತ್ತೇನೆ. ಸೀಬರ್ಡ್, ಕೈಗಾ ಮುಂತಾದ ಯೋಜನೆಗಳಲ್ಲಿ ಸ್ಥಳೀಯರಿಗೆ ಆದ್ಯತೆಯ ಮೇಲೆ ಉದ್ಯೋಗ ನೀಡುವ ಕುರಿತು ಚರ್ಚಿಸಲಾಗುವುದು. ಸೀಬರ್ಡ್ ನೌಕಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಕೆಲವರಿಗೆ ಹೆಚ್ಚುವರಿ ಪರಿಹಾರ ನೀಡುವುದು ಇದುವರೆಗೂ ಬಾಕಿ ಇರುವ ಬಗ್ಗೆ ರಕ್ಷಣಾ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದರು.
    ಮಹಾದಾಯಿ ನದಿ ವಿಚಾರ ನ್ಯಾಯಾಲಯದಲ್ಲಿದೆ. ಗೋವಾ ಮುಕ್ಕಾಲು ಭಾಗ ಜನಜೀವನ ಮಹದಾಯಿ ನದಿಯ ಮೇಲೆ ಅವಲ ಂಬಿತವಾಗಿದೆ. ಗೋವಾ ಹೆಚ್ಚು ನೀರು ಕೇಳುತ್ತಿಲ್ಲ. ತನ್ನ ಪಾಲಿನ ನೀರನ್ನು ಕೇಳುತ್ತಿದೆ. ಈ ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಹೇಳಿದರು.

    ಎಂಎಲ್‌ಸಿ ಗಣಪತಿ ಉಳ್ವೇಕರ್, ಗೋವಾ ಎಂಎಲ್‌ಎ ಪ್ರೇಮೇಂದ್ರ ಶೇಟ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿಲ್ಲಾ ವಕ್ತಾರ ನಾಗರಾಜ ನಾಯಕ, ರಾಜೇಶ ನಾಯಕ ಸಿದ್ದರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts