More

    ‘ಈ ದೀಪಾವಳಿಗೆ…’ ಪ್ರಧಾನಿ ನರೇಂದ್ರ ಮೋದಿಯವರಿಂದ ಒಂದು ವಿಶೇಷ ಮನವಿ

    ನವದೆಹಲಿ: ಕರೊನಾ ಸೋಂಕು ಕಾಲಿಟ್ಟ ಮೇಲೆ ಭಾರತ ಆತ್ಮನಿರ್ಭರತೆಯೆಡೆಗೆ ಸಾಗುತ್ತಿದೆ. ಸ್ಥಳೀಯ ಉತ್ಪನ್ನಗಳಿಗೆ ಖರೀದಿ, ಬಳಕೆಗೆ ಆದ್ಯತೆ ನೀಡಲು ಪ್ರಧಾನಿ ನರೇಂದ್ರ ಮೋದಿ ಪದೇಪದೆ ಕರೆ ನೀಡುತ್ತಿದ್ದಾರೆ. ಇದೀಗ ದೀಪಾವಳಿಯನ್ನೂ ಸ್ಥಳೀಯ ವಸ್ತುಗಳೊಂದಿಗೇ ಆಚರಿಸಿ ಎಂದು ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.

    ಈ ದೀಪಾವಳಿಯ ಸಮಯಲ್ಲಿ ನಮ್ಮ ‘ವೋಕಲ್​ ಫಾರ್​ ಲೋಕಲ್​’ ಅಭಿಯಾನವನ್ನು ಉತ್ತೇಜಿಸಿ. ಸ್ಥಳೀಯವಾಗಿ ಸಿಗುವ ಉತ್ಪನ್ನಗಳನ್ನೇ ಖರೀದಿಸಿ ಎಂದಿದ್ದಾರೆ.ವಾರಾಣಸಿಯ ವಿವಿಧ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿಯವರು, ದೇಶದ ಜನರಿಗೆ ದೀಪಾವಳಿ ಶುಭಾಶಯವನ್ನೂ ಕೋರಿದರು.

    ಪ್ರತಿಯೊಬ್ಬರೂ ಸ್ಥಳೀಯ ಉತ್ಪನ್ನಗಳನ್ನು ಹೆಮ್ಮೆಯಿಂದ ಖರೀದಿಸಬೇಕು. ಅದರ ಬಗ್ಗೆ ಹೆಚ್ಚೆಚ್ಚು ಪ್ರಚಾರ ಕೊಡಬೇಕು. ಉಳಿದವರೂ ಸ್ಥಳೀಯ ವಸ್ತುಗಳನ್ನು ಖರೀದಿಸುವಂತೆ ಪ್ರೇರೇಪಿಸಬೇಕು. ಆಗ ಈ ವಸ್ತುಗಳೂ ಬಹುಬೇಗನೇ ಪ್ರಸಿದ್ಧಿ ಪಡೆಯುತ್ತವೆ ಎಂದು ಹೇಳಿದರು.

    ದೀಪಾವಳಿಗೆ ಸ್ಥಳೀಯ ವಸ್ತುಗಳನ್ನು ಕೊಳ್ಳುವುದರಿಂದ ಅದನ್ನು ತಯಾರಿಸಿದವರಿಗೂ ದೀಪಾವಳಿ ವಿಶೇಷವಾಗಿ ಇರುತ್ತದೆ. ಸ್ಥಳೀಯ ವಸ್ತುಗಳನ್ನು ಖರೀದಿಸುವುದು ಎಂದರೆ ಕೇವಲ ಹಣತೆಗಳನ್ನು ಮಾತ್ರ ಖರೀದಿಸುವುದು ಎಂದಲ್ಲ. ದೀಪಾವಳಿ ಹಬ್ಬದಲ್ಲಿ ಬಳಸುವ ಪ್ರತಿಯೊಂದು ವಸ್ತುಗಳೂ ಸ್ಥಳೀಯವಾಗಿ ತಯಾರಾಗಿದ್ದೇ ಆಗಿರಲಿ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts