More

    ಪ್ರಿಯ ಬೆಂಗಳೂರಿಗರೇ.. ಮನೆಯ ಹೆಂಗಸರ ಮಾತು ಕೇಳಿ: ಎಡಿಜಿಪಿ ಭಾಸ್ಕರ್ ರಾವ್

    ಬೆಂಗಳೂರು: ‘ಪ್ರಿಯ ಬೆಂಗಳೂರಿಗರೇ.. ಮನೆಯ ಹೆಂಗಸರ ಮಾತು ಕೇಳಿ..’ ಎನ್ನುವ ಮೂಲಕ ಹಿರಿಯ ಪೊಲೀಸ್ ಅಧಿಕಾರಿ, ರೈಲ್ವೇ ಎಡಿಜಿಪಿ ಭಾಸ್ಕರ್ ರಾವ್ ರಾಜ್ಯ ರಾಜಧಾನಿಯ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಕರೊನಾ ಸೋಂಕಿನ ಪ್ರಕರಣಗಳನ್ನು ತಡೆಗಟ್ಟುವ ಹಾಗೂ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅವರು ಇಂಥದ್ದೊಂದು ಕಾಳಜಿಪೂರ್ವಕ ಮನವಿ ಮಾಡಿಕೊಂಡಿದ್ದಾರೆ.

    ಕೋವಿಡ್-19 ಪಾಸಿಟಿವ್ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವುದನ್ನು ದಯವಿಟ್ಟು ಗಮನಿಸಿ. ಇಂಥ ಸಂದರ್ಭದಲ್ಲಿ ಮನೆಯ ಮಟ್ಟದಲ್ಲೇ ನಾಯಕತ್ವದ ಅಗತ್ಯವಿದೆ. ಅದರಲ್ಲೂ ದಯವಿಟ್ಟು ಮನೆಯ ಹೆಂಗಸರು ಹೇಳುವ ಸೂಚನೆಗಳಿಗೆ ಬದ್ಧರಾಗಿರಿ, ಅವರು ಹೇಳುವ ಮಾತುಗಳನ್ನು ಕೇಳಿ ಪಾಲಿಸಿ. ಏಕೆಂದರೆ ಅವರಿಗೆ ಹೆಚ್ಚಿನ ಕಾಳಜಿ ಇರುತ್ತದೆ. ಮಾತ್ರವಲ್ಲ ಮೂಗು ಮುಚ್ಚುವಂತೆ ಮಾಸ್ಕ್​ ಧರಿಸಿ, ದೈಹಿಕ ಅಂತರ ಪಾಲಿಸಿ ಹಾಗೂ ಅನಗತ್ಯವಾಗಿ ಹೊರಗೆ ಅಲೆದಾಡಬೇಡಿ ಎಂದು ಅವರು ಬೆಂಗಳೂರಿನ ಜನತೆಯನ್ನು ಉದ್ದೇಶಿಸಿ ಟ್ವಿಟರ್ ಮೂಲಕ ಕೋರಿಕೊಂಡಿದ್ದಾರೆ.

    ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ನಂಬರ್​ ಪ್ಲೇಟ್ ಮರೆಮಾಚಿ ಪರಾರಿ!; ದಂಡ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಚಂಡರು..

    ಕಳೆದ ವರ್ಷ ಕರೊನಾ ಮೊದಲ ಬಾರಿ ತೀವ್ರವಾಗಿ ದಾಳಿ ಇಟ್ಟ ಸಂದರ್ಭದಲ್ಲಿ ಬೆಂಗಳೂರಿನ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್, ತಾವು ಕೈಗೊಂಡಿದ್ದ ಕ್ರಮಗಳ ಮೂಲಕ ಬೆಂಗಳೂರಿನ ಹಲವರ ಮನಸ್ಸನ್ನು ಗೆದ್ದಿದ್ದು, ಸಾಕಷ್ಟು ಮೆಚ್ಚುಗೆಗೂ ಪಾತ್ರರಾಗಿದ್ದರು.

    ನಾಳೆಯಿಂದ ಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ; ಯಾವ್ಯಾವ ಜಿಲ್ಲೆಗೆ ಎಷ್ಟು ದಿನ ಅನ್ವಯ? ಇಲ್ಲಿದೆ ಮಾಹಿತಿ..

    ತೂಕಡಿಸಿದ ಚಾಲಕ, ಬಸ್​ ಮರಕ್ಕೆ ಡಿಕ್ಕಿ​; ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಸ್ ಓಡಿಸಿದ್ದ ಬಿಎಂಟಿಸಿ ಮೆಕ್ಯಾನಿಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts