More

    ವೈದ್ಯರು ಹೇಳುವುದನ್ನು ಕೇಳಿ, ಗುಂಪುಗೂಡಬೇಡಿ: ಜಮಾತ್​ ಮುಖ್ಯಸ್ಥನ ಸಂದೇಶ

    ನವದೆಹಲಿ: ದೇಶದಲ್ಲಿ ಕರೊನಾ ವೈರಸ್​ ಸೋಂಕಿನ ಹರಡುವಿಕೆಯ ಕೇಂದ್ರಬಿಂದು ಎನಿಸಿಕೊಂಡಿರುವ ನವದೆಹಲಿಯ ನಿಜಾಮುದ್ದೀನ್​ನ ಧಾರ್ಮಿಕ ಸಂಸ್ಥೆ ತಬ್ಲಿಘಿ ಜಮಾತ್​ನ ಮುಖ್ಯಸ್ಥ ಮೌಲಾನಾ ಸಾದ್​ ಖಾಂಡಲ್ವಿ, ಕೋವಿಡ್​ 19 ಸೋಂಕಿನ ಬಗ್ಗೆ ವೈದ್ಯರು ನೀಡುವ ಸಲಹೆಗಳನ್ನು ಪಾಲಿಸುವಂತೆ ತಮ್ಮ ಹಿಂಬಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಕರೊನಾ ವೈರಸ್​ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಹಕರಿಸಿ. ಅವರು ಹೇಳುವ ಮಾತುಗಳನ್ನು ಕೇಳಿ ಎಂದು ತಬ್ಲಿಘಿ ಜಮಾನ್​ನ ಯೂಟ್ಯೂಬ್​ ಚಾನಲ್​ನಲ್ಲಿ ನೀಡಿರುವ ಸಂದೇಶದಲ್ಲಿ ಹೇಳಿದ್ದಾರೆ.

    ಸೋಂಕು ತಡೆಗಟ್ಟಲು ಅಧಿಕಾರಿಗಳು ನೀಡುವ ನಿರ್ದೇಶನಗಳನ್ನು ಪಾಲಿಸಬೇಕು. ವೈದ್ಯರ ಸಲಹೆಯನ್ನು ಕೇಳಬೇಕು. ಉದಾಹರಣೆಗೆ ಗುಂಪುಗೂಡುವನ್ನು ಮೊದಲು ನಿಲ್ಲಿಸಬೇಕು. ಮತ್ತು ಸಂಕಷ್ಟದ ಈ ಸಮಯದಲ್ಲಿ ಸರ್ಕಾರದೊಂದಿಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಕಾನೂನಿನ ವಿರುದ್ಧ ನಡೆದುಕೊಳ್ಳಬಾರದು. ಅದು ನಮ್ಮ ಧರ್ಮಕ್ಕೆ ವಿರುದ್ಧವಾಗುತ್ತದೆ ಎಂದು ತಿಳಿಸಿದ್ದಾರೆ.

    ನಿಷೇಧಾಜ್ಞೆಯ ಹೊರತಾಗಿಯೂ ನಿಜಾಮುದ್ದೀನ್​ ಧಾರ್ಮಿಕ ಕೇಂದ್ರದಲ್ಲಿ ಸಭೆ ನಡೆಸಿದ ಆರೋಪದಲ್ಲಿ ಖಾಂಡಲ್ವಿ ಅವರನ್ನು ಬಂಧಿಸಲು ಪೊಲೀಸರು ದೆಹಲಿ ಮತ್ತು ಉತ್ತರಪ್ರದೇಶದಾದ್ಯಂತ ಶೋಧಿಸುತ್ತಿದ್ದಾರೆ. ಗುಪ್ತ ಸ್ಥಳದಲ್ಲಿ ಅಡಗಿಕೊಂಡಿರುವ ಅವರು ಇದಕ್ಕೂ ಮೊದಲು ಧ್ವನಿಮುದ್ರಿತ ಸಂದೇಶ ಬಿಡುಗಡೆ ಮಾಡಿ, ತಾವು ಸ್ವತಃ ಕ್ವಾರಂಟೇನ್​ನಲ್ಲಿ ಇರುವುದಾಗಿ ಹೇಳಿದ್ದರು.

    ಈ ನಡುವೆ ಖಾಂಡಲ್ವಿ ಪರ ವಕೀಲರು ಕೂಡ ಖಾಂಡಲ್ವಿ ಅವರ ವಿಡಿಯೋ ಸಂದೇಶದ ತುಣಕನ್ನು ಬಿಡುಗಡೆ ಮಾಡಿದ್ದು, ಕರೊನಾ ವೈರಸ್​ ಸೋಂಕನ್ನು ಗಂಭೀರವಾಗಿ ಪರಿಗಣಿಸುವಂತೆ ತಮ್ಮ ಹಿಂಬಾಲಕರಿಗೆ ಖಾಂಡಲ್ವಿ ಸೂಚಿಸಿದ್ದಾರೆ.

    ತಬ್ಲಿಘಿ ಜಮಾತ್ ಮತ್ತು COVID19 ವಿವಾದದ ವಿಚಾರಗಳು ಏನೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts