More

    ಹಳಿಯಾಳದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ತಯಾರಿಸುತ್ತಿದ್ದ ಇಂಡಸ್ಟ್ರಿ ಸೀಜ್‌

    ಕಾರವಾರ:ನಿಷೇಧಿತ ಪ್ಲಾಸ್ಟಿಕ್ ತಯಾರಿಸುತ್ತಿದ್ದ ಹಳಿಯಾಳದ ಕಾರ್ಖಾನೆಯೊಂದನ್ನು ಮಾಲಿನ್ಯ ನಿಯಂತ್ರಣ ಮಂಡಳಿ,ಪುರಸಭೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಸೀಜ್‌ ಮಾಡಿದ್ದಾರೆ.
    ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರವಾರ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ.ಸಂತೋಷ, ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಅಶೋಕ, ಪರಿಸರ ಇಂಜಿನಿಯರ್‌ ದರ್ಶಿತಾ ಬಿ.ಎಸ್. ಹಾಗೂ ಸಿಬ್ಬಂದಿ ಹಳಿಯಾಳ ಗುಡ್ನಾಪುರ ಕೈಗಾರಿಕಾ ಪ್ರದೇಶದಲ್ಲಿ ದಾಳಿ ನಡೆಸಿದ್ದರು.

    ಇದನ್ನೂ ಓದಿ:ವಂಶಿಕಾ ಹೆಸರಿನಲ್ಲಿ ವಂಚನೆ; ನಿಶಾ ನರಸಪ್ಪಗೆ 14 ದಿನಗಳ ನ್ಯಾಯಾಂಗ ಬಂಧನ
    ಸಂಜಯ ಯಲ್ಲಪ್ಪ ಹಲಗೇಕರ್ ಎಂಬುವವರು ನಡೆಸುತ್ತಿದ್ದ ಮಂಜುನಾಥ ಇಂಡಸ್ಟ್ರೀಸ್‌ ಕಾರ್ಖಾನೆಯಲ್ಲಿ ಕಿರಾಣಿ ಸಾಮಗ್ರಿಗಳನ್ನು ಕಟ್ಟುವ ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ತಯಾರಿಸುತ್ತಿರುವುದು ಪತ್ತೆಯಾಗಿದೆ.

    400 ಕೆಜಿ ಪ್ಲಾಸ್ಟಿಕ್ ಕವರ್‌ಗಳನ್ನು ಹಾಗೂ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆದು, 10 ಸಾವಿರ ರೂ. ದಂಡ ವಿಽಸಲಾಗಿದೆ. ಕಾರ್ಖಾನೆಯ ಶೆಡ್‌ನ್ನು ಸೀಜ್ ಮಾಡಲಾಗಿದ್ದು, ಇನ್ನು ಮುಂದೆ ನಿಷೇಽತ ಪ್ಲಾಸ್ಟಿಕ್ ತಯಾರಿಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts