More

    ಪ್ಲಾಸ್ಟಿಕ್ ಮುಕ್ತ ಚಿಕ್ಕೋಡಿಗೆ ಕೈ ಜೋಡಿಸಿ

    ಚಿಕ್ಕೋಡಿ: ಪ್ಲಾಸ್ಟಿಕ್ ಮುಕ್ತ ಚಿಕ್ಕೋಡಿಯನ್ನಾಗಿ ಮಾಡಲು ಪಟ್ಟಣದ ರಹವಾಸಿಗಳಿಗೆ ಸಾಯಿ ಸೇವಾ ಪರಿವಾರ ಮಂದಿರದ ವಾರ್ಷಿಕೋತ್ಸವ ಅಂಗವಾಗಿ ಹತ್ತಿ ಬಟ್ಟೆ ಕೈ ಚೀಲಗಳನ್ನು ನೀಡಲಾಗುವುದು ಎಂದು ಸಾಯಿ ಸೇವಾ ಪರಿವಾರದ ಅಧ್ಯಕ್ಷ ಜಗದೀಶ ಕವಟಗಿಮಠ ಹೇಳಿದ್ದಾರೆ.

    ಪಟ್ಟಣದ ಬಸವೇಶ್ವರ ನಗರದಲ್ಲಿ ಶುಕ್ರವಾರ ಶ್ರೀ ಶಿರಡಿ ಸಾಯಿ ಮಂದಿರದ 13ನೇ ವಾರ್ಷಿಕೋತ್ಸವ ಅಂಗವಾಗಿ ಸಾಯಿ ಪರಿವಾರ,ಪುರಸಭೆ ಹಾಗೂ ಸಿಎಲ್‌ಇ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಚ್ಛ ಚಿಕ್ಕೋಡಿ ಅಭಿಯಾನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪಟ್ಟಣದ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಮುಖ್ಯಸ್ಥರು ಸ್ವಚ್ಛತೆಗೆ ಕೈ ಜೋಡಿಸಬೇಕು ಎಂದರು.

    ತಹಸೀಲ್ದಾರ್ ಎಸ್.ಎಸ್.ಸಂಪಗಾಂವೆ ಸ್ವಚ್ಛ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಚಿಕ್ಕೋಡಿ ಪಟ್ಟಣದ ಜನತೆ ಸ್ವಚ್ಛ ಚಿಕ್ಕೋಡಿ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ಡಾ.ಎಸ್.ಎಸ್.ರೋಗಿ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಗೆ ಬರುವ ಕಸ ವಿಲೇವಾರಿ ವಾಹನಗಳಿಗೆ ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡಬೇಕು ಎಂದರು.

    ಶ್ರೀ ಸಾಯಿ ಸೇವಾ ಪರಿವಾರದ ಆದಿನಾಥ ಶೆಟ್ಟಿ, ಕಿರಣ ಗುಂಡೆ, ಮಡಿವಾಳಪ್ಪ ಬಸರಗಿ, ರಾಜಶೇಖರ ಹಿರೇಮಠ, ಶೇಖರ ಚಿತ್ತವಡಗಿ, ಸಿದ್ಧಪ್ಪ ಡಂಗೇರ, ವರ್ಧಮಾನ ಸದಲಗೆ, ನಾಗರಾಜ ಬುರುಡ, ಪ್ರವೀಣ ಕಾಂಬಳೆ, ತಾನಾಜಿ ಕದಂ, ಅಶೋಕ ಪಾಟಕ, ಸಂಜಯ ಕವಟಗಿಮಠ, ಬಾಬು ಮಿರ್ಜಿ, ಸಾಗರ ಬಿಸ್ಕೋಪ್, ಎಸ್.ಎಸ್.ಮೆಟಗುಡ್ಡ, ದೀಪಕ ಪಾಟೀಲ ಇತರರು ಇದ್ದರು. ಜೆ.ಬಿ.ಕಾಂಬಳೆ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts