More

    ದೈಹಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿ

    ಅರಟಾಳ: ಗ್ರಾಮದಲ್ಲಿ ರೈತರ ಜಮೀನಿನಲ್ಲಿ ವೈಯಕ್ತಿಕವಾಗಿ ನಿರ್ಮಿಸುತ್ತಿರುವ ಬದು ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕೆಲಸದ ವೇಳೆ ಕೂಲಿ ಕಾರ್ಮಿಕರು ಮಾಸ್ಕ್ ಧರಿಸಿಕೊಳ್ಳಬೇಕು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅಥಣಿ ಕೃಷಿ ಅಧಿಕಾರಿ ಎನ್.ಜಿ. ಲಮಾಣಿ ಸೂಚಿಸಿದರು.

    ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ನಡೆಯುತ್ತಿರುವ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು, ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಕೃಷಿ ಇಲಾಖೆ ಕೂಲಿ ಕೆಲಸ ಪ್ರಾರಂಭಿಸಿದೆ. ಒಬ್ಬ ಕಾರ್ಮಿಕರಿಗೆ ಪ್ರತಿ ದಿನ 275 ರೂ. ಕೂಲಿ ನೀಡಲಾಗುತ್ತಿದೆ. ಕೂಲಿ ಕಾರ್ಮಿಕರು ಜಮೀನು ಹೊಂದಿದ್ದರೆ ಅವರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ಬದು ನಿರ್ಮಾಣ ಕಾಮಗಾರಿಯಲ್ಲಿ 290 ಕೂಲಿ ಕಾರ್ಮಿಕರು ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕೊಡುವುದರಿಂದ ಅವರ ಆದಾಯವು ಹೆಚ್ಚಲಿದೆ. ಜತೆಗೆ ಬದು ನಿರ್ಮಾಣದಿಂದ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣವು ಹೆಚ್ಚುತ್ತದೆ ಎಂದರು. ಕೃಷಿ ಅಧಿಕಾರಿ ಕೆ.ಕೆ. ಹುಣಸಿಕಟ್ಟಿ, ನಾಗರಾಜ ಮೋಕಾಶಿ, ಕೃಷಿ ಇಲಾಖೆ ಸಿಬ್ಬಂದಿ ವಿಜಯ ಉಪ್ಪಾರ, ಎಂ.ವಿ. ಕಡಪಟ್ಟಿ, ಶ್ರೀಶೈಲ ಪೂಜಾರಿ, ಮಲ್ಲಿಕಾರ್ಜುನ ತೆಲಸಂಗ, ಪರಶುರಾಮ ಮಾದರ, ವಿಠ್ಠಲ ಹಟ್ಟಿ, ಹನುಮಂತ ಹಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts