More

    ಎಲ್ಲ ಶಾಲೆಗಳಿಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗಲಿ

    ನರಗುಂದ: ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿರುವ ದೈಹಿಕ ಚಟುವಟಿಕೆಯಾಗಿದೆ. ಮಕ್ಕಳಲ್ಲಿ ಕ್ರೀಡಾಭಿಮಾನ ಬೆಳೆಸಬೇಕಾದರೆ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಮೈದಾನ ನಿರ್ವಿುಸುವುದರ ಜತೆಗೆ ಕಡ್ಡಾಯವಾಗಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ಕೆ. ಲೋಕೇಶಪ್ಪ ಹೇಳಿದರು.
    ಭಗತ್​ಸಿಂಗ್ ಸ್ಪೋರ್ಟ್ಸ್ ಕ್ಲಬ್ ನರಗುಂದ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಪಟ್ಟಣದ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ರ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನರಗುಂದ ತಾಲೂಕು ಮಟ್ಟದ ಅಂತರ ಇಲಾಖೆ ವಾಲಿಬಾಲ್ ಪಂದ್ಯಾವಳಿಯ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
    ಮಹೇಶಗೌಡ ಪಾಟೀಲ ಮಾತನಾಡಿ, ಯಾವುದೇ ವ್ಯಕ್ತಿಯಲ್ಲಿರುವ ಸ್ವ- ಸಾಮರ್ಥ್ಯವನ್ನು ಗುರುತಿಸಲು ಕ್ರೀಡೆ ಅತ್ಯಂತ ಸಹಕಾರಿಯಾಗಿದೆ. ಸರ್ಕಾರಿ ಇಲಾಖೆ ಅಧಿಕಾರಿಗಳು ಸರ್ಕಾರದ ವಿವಿಧ ಕಾರ್ಯದೊತ್ತಡದ ನಡುವೆಯೂ ವರ್ಷಕ್ಕೆ ಒಮ್ಮೆಯಾದರೂ ಕ್ರೀಡಾ ಸ್ಪರ್ಧೆ ಆಯೋಜಿಸುವ ಮೂಲಕ ದೈಹಿಕ, ಮಾನಸಿಕ ಹಾಗೂ ಶಾರೀರಿಕ ಸಮತೋಲನ ಕಾಪಾಡಿಕೊಳ್ಳಲು ವಿಶೇಷ ನಿಗಾವಹಿಸಬೇಕು ಎಂದು ತಿಳಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ ಮಾತನಾಡಿ, ಕ್ರೀಡೆಯಿಂದ ದೇಹ ಮತ್ತು ಹೃದಯ ಬಡಿತ, ರಕ್ತ ಪರಿಚಲನೆ ಎಲ್ಲವೂ ಸಮತೋಲನದಲ್ಲಿರುತ್ತವೆ ಎಂದು ತಿಳಿಸಿದರು.
    ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು. ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಪಂದ್ಯಾವಳಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ನರಗುಂದ ತಾಲೂಕಿನ 27 ವಿವಿಧ ಇಲಾಖೆಗಳ ವಾಲಿಬಾಲ್ ತಂಡಗಳು ಭಾಗವಹಿಸಿವೆ.

    ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವೈ. ಹೂಗಾರ, ಡಿವೈಎಸ್ಪಿ ಪ್ರಭುಗೌಡ ಕಿರೆದಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಫ್. ಮಜ್ಜಗಿ, ಪುರಸಭೆ ವಿರೋಧ ಪಕ್ಷದ ಮುಖಂಡ ಅಪ್ಪಣಗೌಡ ನಾಯ್ಕರ, ಚನ್ನಯ್ಯ ಸಂಗಳಮಠ, ಎಂ.ಎಸ್.(ರಾಜುಗೌಡ) ಪಾಟೀಲ, ಡಾ. ಮೋಹನ ಕಲಹಾಳ, ರಾಜು ಕಲಾಲ, ಶಿವಾನಂದ ಗುಂಜಾಳ, ಎಸ್.ಎಸ್. ಹಿರೇಮಠ, ಶಿವಾನಂದ ಮುತವಾಡ, ವಿರೇಶ ಚುಳಕಿ, ಚನ್ನಬಸಪ್ಪ ಕಂಠಿ, ಎಚ್.ಎಸ್. ಬೆಳಕೊಪ್ಪದ, ಅನಿಲ ಜಮಖಂಡಿ, ಸಿಕಂದರ್ ಪಠಾಣ, ಎಂ.ಬಿ. ಅರಹುಣಸಿ, ಶಂಕರ ಕಾಂಬಳೆ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಕೆ.ಬಿ. ಕುರಹಟ್ಟಿ, ಎಫ್.ಬಿ. ಧರೆಯಣ್ಣವರ, ಎಸ್.ಬಿ.ದೊಡಮನಿ, ಶಿವಾನಂದ ಕರಿಗಾರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts