More

    ಚಿರತೆಗಳೊಂದಿಗೆ ಫೋಟೋಶೂಟ್​… ಆಸ್ಪತ್ರೆ ಸೇರಿದ ಮಾಡೆಲ್!

    ಬರ್ಲಿನ್​: ಚಿರತೆಗಳೊಂದಿಗೆ ಫೋಟೋಶೂಟ್​ ಮಾಡುವ ಪ್ರಯತ್ನದಲ್ಲಿ ಮಾಡೆಲ್​​ ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಪ್ರಸಂಗ ಜರ್ಮನಿಯಲ್ಲಿ ನಡೆದಿದೆ. ಜೆಸ್ಸಿಕಾ ಲೈಡಾಲ್ಫ್​ ಎಂಬ 36 ವರ್ಷದ ರೂಪದರ್ಶಿಯು ದೇಶದ ಪೂರ್ವಪ್ರಾಂತ್ಯದಲ್ಲಿನ ಪ್ರಾಣಿ ಆಶ್ರಯ ತಾಣದಲ್ಲಿ ಎರಡು ಚಿರತೆಗಳಿಂದ ದಾಳಿಗೊಳಗಾದರು ಎನ್ನಲಾಗಿದೆ.

    ಸ್ಯಾಕ್ಸೊನಿ-ಅನ್ಹಾಲ್ಟ್ ರಾಜ್ಯದ ನೆಬ್ರಾದಲ್ಲಿ ಬಿರ್ಗಿಟ್ ಸ್ಟಾಚೆ ಎಂಬುವರು ಜಾಹೀರಾತುಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ಉಪಯೋಗಿಸಲ್ಪಡುವ ಪ್ರಾಣಿಗಳಿಗಾಗಿ ನಡೆಸುತ್ತಿರುವ ರಿಟೈರ್​​ಮೆಂಟ್​​ ಹೋಂನಲ್ಲಿ ಈ ಘಟನೆ ಸಂಭವಿಸಿದೆ. ಒಂದು ಕಾಲದಲ್ಲಿ ಪಾನಾಸಾನಿಕ್​ ಟಿವಿ ಜಾಹೀರಾತಿನಲ್ಲಿ ಪಾತ್ರ ವಹಿಸಿದ್ದ ಟ್ರಾಯ್ ಮತ್ತು ಪ್ಯಾರಿಸ್ ಎಂಬ ಹೆಸರಿನ ಚಿರತೆಗಳನ್ನಿರಿಸಲಾಗಿದ್ದ ಆವರಣದೊಳಕ್ಕೆ ಜೆಸ್ಸಿಕಾ ಸ್ವಯಂಪ್ರೇರಣೆಯಿಂದ ಪ್ರವೇಶಿಸಿದ್ದರು. ಆಗ ಆ ಚಿರತೆಗಳು ದಾಳಿ ನಡೆಸಿದ್ದು, ಅವರ ಕೆನ್ನೆ, ಕಿವಿ ಮತ್ತು ತಲೆಗಳನ್ನು ಕಚ್ಚಿದವು ಎನ್ನಲಾಗಿದೆ.

    ಇದನ್ನೂ ಓದಿ: ಕಾಬುಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ: ಐಸಿಸ್​-ಕೆ ವಿರುದ್ಧ ಗುಡುಗಿದ ಜೋ ಬೈಡೆನ್​

    ಜೆಸ್ಸಿಕಾರನ್ನು ಕೂಡಲೇ ಹೆಲಿಕಾಪ್ಟರ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆ ಫಲಕಾರಿಯಾಗಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಗಾಯದ ಕಲೆಗಳು ಹಾಗೇ ಉಳಿಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಣಿಪ್ರಿಯರಾದ ಜೆಸ್ಸಿಕಾ, ಒಂದು ಕುದುರೆ, ಬೆಕ್ಕುಗಳು, ಪಾರಿವಾಳಗಳು ಮತ್ತು ಗಿಣಿಗಳ ಒಡತಿಯಾಗಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    44,658 ಹೊಸ ಕರೊನಾ ಪ್ರಕರಣ ದಾಖಲು

    ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್​ ಇನ್ನಿಲ್ಲ

    ಕೋಟ್ಯಂತರ ಬೆಲೆ ಬಾಳುವ ‘ಕ್ಯಾಲಿಫೋರ್ನಿಯಂ’ ಮಾರಾಟ! ಇಬ್ಬರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts