More

    ಕುಕ್ಕರಹಳ್ಳಿ ಕೆರೆಯ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ

    ಮೈಸೂರು: ನಗರದ ಕುಕ್ಕರಹಳ್ಳಿ ಕೆರೆ ಬಳಿ ಇರುವ ಸರಸ್ವತಿಪುರಂನ ಹೆರಿಟೇಜ್ ಹೌಸ್‌ನಲ್ಲಿ ಮಾ.31ರವರೆಗೆ ಹಮ್ಮಿಕೊಂಡಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಬೆಳಗ್ಗೆ 10.30 ರಿಂದ ಸಂಜೆ 7ರ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಕ್ಯಾಮರಾದಲ್ಲಿ ಸೆರೆಯಾಗಿರುವ ಕುಕ್ಕರಹಳ್ಳಿಯ ಸುಂದರ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು.

    ಛಾಯಾಗ್ರಾಹಕ ಸುನಿಲ್ ರಾಜು ಸೆರೆ ಹಿಡಿದಿರುವ ಕುಕ್ಕರಹಳ್ಳಿ ಕೆರೆಯ ಅಪರೂಪದ 20 ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕಳೆದ 9 ತಿಂಗಳ ಅವಧಿಯಲ್ಲಿ ಸೆರೆ ಹಿಡಿದಿರುವ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಕಂಡುಬರುವ ಕುಕ್ಕರಹಳ್ಳಿ ಕೆರೆಯ ವಾತಾವರಣದ ಚಿತ್ರಣಗಳು, ಕೆರೆಯಲ್ಲಿ ಆಶ್ರಯ ಪಡೆದಿರುವ ಪಕ್ಷಿಗಳ ಸುಂದರ ಚಿತ್ರಗಳನ್ನು ಇಲ್ಲಿ ಕಾಣಬಹುದು.

    ಕೆರೆಗಳ ಮಹತ್ವವನ್ನು ಜನರಿಗೆ ತಿಳಿಸುವ ಸಲುವಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ನಗರವೊಂದರ ಮಧ್ಯ ಭಾಗದಲ್ಲಿ ಇಷ್ಟೊಂದು ವಿಶಾಲವಾದ ಕೆರೆ ಇರುವುದು ಅಪರೂಪ. ಕೆರೆಗೆ ಭೇಟಿ ನೀಡಿದರೆ ಮನಸ್ಸಿನ ದುಗುಡವನ್ನು ದೂರ ಮಾಡಿಕೊಳ್ಳಬಹುದು. ಅಷ್ಟೊಂದು ಸುಂದರವಾಗಿದೆ ಕುಕ್ಕರಹಳ್ಳಿ ಕೆರೆ. ಹಾಗಾಗಿ ಕುಕ್ಕರಹಳ್ಳಿ ಸೇರಿದಂತೆ ನಗರದ ಎಲ್ಲ ಕೆರೆಗಳನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಪ್ರಯತ್ನಿಸಬೇಕು ಎಂದು ಸುನಿಲ್ ರಾಜು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts