More

    ಪಿಎಚ್‌ಸಿಗಳಲ್ಲೂ 24 ಗಂಟೆ ಚಿಕಿತ್ಸೆ ; ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ; ಶಿರಾದಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ಲೋಕಾರ್ಪಣೆ

    ಶಿರಾ: ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದಿನದ 24 ಗಂಟೆಯೂ ಚಿಕಿತ್ಸೆ, ಸೇವೆ ನೀಡುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

    ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ವಾತನಾಡಿದರು. ಬಡವರಿಗೆ ಉತ್ಕ ೃಷ್ಟ ಸೇವೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ವೈದ್ಯರು ರೋಗಿಯನ್ನು ಕುಟುಂಬದ ಸದಸ್ಯರಂತೆ ಭಾವಿಸಿ ಚಿಕಿತ್ಸೆ ನೀಡಿದಲ್ಲಿ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಲಿದೆ ಎಂದರು.

    ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯುವ ಯೋಜನೆಯಿದ್ದು, ತುಮಕೂರಿನಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ 33 ಕೋಟಿ ರೂ. ಮೀಸಲಿಟ್ಟು, ಪ್ರಾಥಮಿಕ ಚಿಕಿತ್ಸೆ ನೀಡುವ ಯೋಚನೆ ವಾಡಿದ್ದೇವೆ. ಹೃದಯ, ಮೂತ್ರಪಿಂಡದ ಸಮಸ್ಯೆಗಳಿಗೆ ನಾಲ್ಕೈದು ಪ್ರಾದೇಶಿಕ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡುವ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ವಾಧುಸ್ವಾಮಿ ಮಾತನಾಡಿ, ಗರ್ಭಿಣಿಯರಿಗೆ ಆಯಾ ತಾಲೂಕಿನಲ್ಲಿ ಸ್ಥಳೀಯವಾಗಿ ಶುಶ್ರೂಷೆ ದೊರಕಬೇಕು ಎನ್ನುವ ಆಶಯದೊಂದಿಗೆ ಅತಿ ಕಡಿಮೆ ಸಮಯದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ನೆಪಕ್ಕೆ ವಾತ್ರ ಆಸ್ಪತ್ರೆ ಆಗಬಾರದು. ರಿಜಿಸ್ಟ್ರೇಷನ್ ಆಗಿರುವ ಗರ್ಭಿಣಿಯರಲ್ಲಿ ಸ್ಥಳೀಯವಾಗಿ ಹೆಚ್ಚಿಗೆ ಹೆರಿಗೆ ಆಗಬೇಕಾಗಿದೆ ಎಂದರು.

    ಶಾಸಕ ಸಿ.ಎಂ.ರಾಜೇಶ್‌ಗೌಡ, ಜಿಪಂ ಅಧ್ಯಕ್ಷೆ ಲತಾ ರವಿಕುವಾರ್, ಸಂಸದ ಎ.ನಾರಾಯಣಸ್ವಾಮಿ, ಎಂಎಲ್‌ಸಿ ಚಿದಾನಂದ ಎಂ.ಗೌಡ, ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ತಾಪಂ ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥಗೌಡ, ಜಿಪಂ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಚೌಡಪ್ಪ, ಸರ್ಕಾರಿ ನೌಕರರ ಸಂದ ಅಧ್ಯಕ್ಷ ಬಿ.ಎಂ.ಲಕ್ಷ್ಮೀಶ, ಡಿಸಿ ವೈ.ಎಸ್.ಪಾಟೀಲ್, ಎಸ್‌ಪಿ ಡಾ. ವಂಶಿಕೃಷ್ಣ, ತಹಸೀಲ್ದಾರ್ ಮಮತಾ, ಡಿಎಚ್‌ಒ ನಾಗೇಂದ್ರಪ್ಪ, ಟಿಎಚ್‌ಒ ಅಫ್ಜಲ್ ಉರ್ ರೆಹವಾನ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಆರ್.ಶ್ರೀನಾಥ್, ವೈದ್ಯರಾದ ಡಾ. ಡಿ.ಎಂ.ಗೌಡ, ಡಾ. ಜವಾಹರ್ ಬಾಬು, ಡಾ. ಮಂಜುನಾಥ್, ಡಾ. ಭಾರತಿ, ಡಾ. ರಂಗನಾಥ್, ಡಾ. ಸಿದ್ದೇಶ್ವರ, ಸಹಾಯಕ ಆಡಳಿತಾಧಿಕಾರಿ ರವಿ, ತಾಲೂಕು ವೈದ್ಯ ಸಂದ ಅಧ್ಯಕ್ಷ ಡಾ. ಕೆ.ರಾಮಕೃಷ್ಣ, ಮುಖಂಡ ರಮೇಶ್ ಮತ್ತಿತರರು ಇದ್ದರು.

    ವಾರ್ಚ್‌ನಲ್ಲಿ ಸಾರ್ವಜನಿಕರಿಗೆ ಲಸಿಕೆ: ಶಿಶು ಮತ್ತು ಬಾಣಂತಿಯರ ಸಾವಿನ ಪ್ರವಾಣ ನಮ್ಮಲ್ಲಿ ದೇಶದ ಸರಾಸರಿಗಿಂತ ಕಡಿಮೆ ಇದ್ದರೂ, ಅದನ್ನು ಶೂನ್ಯಕ್ಕಿಳಿಸುವ ಗುರಿ ಹೊಂದಿದ್ದೇವೆ. ಸದ್ಯ ಕರೊನಾ 2ನೇ ಅಲೆ ಬಗ್ಗೆ ವಾತುಗಳು ಕೇಳಿಬರುತ್ತಿವೆ. ಇದರಿಂದ ನಾಗರಿಕರ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಕರೊನಾ ಸೇನಾನಿಗಳು ಅನುವಾನಪಡುವುದನ್ನು ಬಿಟ್ಟು, ಎಲ್ಲರೂ ಲಸಿಕೆ ತೆಗೆದುಕೊಂಡು ಸಾರ್ವಜನಿಕರಿಗೆ ವಾದರಿಯಾಗಬೇಕು. ವಾರ್ಚ್ ತಿಂಗಳಲ್ಲಿ ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವ ಯೋಜನೆಯಿದೆ ಎಂದು ತಿಳಿಸಿದರು.

    ತಾಲೂಕಿಗೆ ಮೆಡಿಕಲ್ ಕಾಲೇಜು?: ಶಿರಾದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಸಚಿವ ಸುಧಾಕರ್‌ಗೆ ಎಂಎಲ್‌ಸಿ ಚಿದಾನಂದ ಎಂ.ಗೌಡ ಮನವಿ ಸಲ್ಲಿಸಿದರು. ಈ ವೇಳೆ ಸಚಿವ ಸುಧಾಕರ್, ಸಿಎಂ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರಿಂದ ರೈತ ಮುಖಂಡ ಪರಮಶಿವಯ್ಯ, ನೀವು ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ತರುವ ಕಾರಣದಿಂದಲೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿರಿ. ಈಗ ಶಿರಾಕ್ಕೆ ವಾತ್ರ ಚರ್ಚಿಸಬೇಕು ಎನ್ನುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬಹುತೇಕ ಖಚಿತ. ಖಾಸಗಿ ವೈದ್ಯಕೀಯ ಕಾಲೇಜು ಇರುವ ಕಡೆ ಸರ್ಕಾರಿ ಕಾಲೇಜಿಗೆ ಅವಕಾಶವಿಲ್ಲ. ಅದರಂತೆ ಜಿಲ್ಲಾ ಕೇಂದ್ರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿದ್ದು, ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಕಾಲೇಜು ಶಿರಾಕ್ಕೂ ಬರಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts