More

    ವಿಚಿತ್ರ ಅಡಕೆ ರೋಗ ಪತ್ತೆಗೆ ಪ್ರಯೋಗಾಲಯಕ್ಕೆ ಸ್ಯಾಂಪಲ್

    ಕಳಸ: ಸಂಸೆ, ಮರಸಣಿಗೆ ಗ್ರಾಪಂ ವ್ಯಾಪ್ತಿಯಲ್ಲಿ ರೋಗಕ್ಕೆ ತುತ್ತಾದ ಅಡಕೆ ಗರಿಗಳನ್ನು ಸಂಗ್ರಹಿಸಿರುವ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು, ಪ್ರಯೋಗಾಲಯದ ಪರೀಕ್ಷೆ ಫಲಿತಾಂಶದಿಂದ ಕಾರಣ ತಿಳಿದು ಬರಲಿದೆ ಎಂದು ಹೇಳಿದರು.

    ಸಂಸೆ, ಮರಸಣಿಗೆ ಭಾಗದಲ್ಲಿ ವಿಚಿತ್ರ ರೋಗಕ್ಕೆ ತುತ್ತಾದ ಅಡಕೆ ತೋಟಗಳನ್ನು ಮಂಗಳವಾರ ಪರಿಶೀಲಿಸಿದರು. ಅಡಕೆ ತೋಟಗಳಲ್ಲಿ ಕಂಡು ಬಂದ ರೋಗ, ಎಲೆ ಚುಕ್ಕಿ ರೋಗ ಅಥವಾ ಬೆಂಕಿ ರೋಗದ ಲಕ್ಷಣಗಳನ್ನು ಹೊಂದಿದೆ ಎಂದು ಶೃಂಗೇರಿ ಅಡಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ನಾರಾಯಣ ಸ್ವಾಮಿ ಹೇಳಿದರು.

    ರೋಗದ ಬಗ್ಗೆ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ನಿರ್ಲಕ್ಷ್ಯಹಿಸುವುದು ಸರಿಯಲ್ಲ. ಇದು ಎಲೆ ಚುಕ್ಕಿ ರೋಗ ಅಥವಾ ಬೆಂಕಿ ರೋಗದ ಲಕ್ಷಣ ಹೊಂದಿದ್ದು, ವಾತಾವರಣದಲ್ಲಿ ತೇವಾಂಶ ಉಂಟಾದಾಗ ಈ ರೋಗ ಹೆಚ್ಚಾಗುತ್ತಿದೆ. ಇದು ಗಾಳಿಯಿಂದ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಹರಡುತ್ತದೆ. ಬೇಸಿಗೆ ಬಂದಾಗ ರೋಗ ಲಕ್ಷಣ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts