More

    ಗುರಿ ನಿರ್ಧಾರದಿಂದ ವ್ಯಕ್ತಿತ್ವ ವಿಕಸನ

    ಬಾಳೆಹೊನ್ನೂರು: ನಾವು ನಮ್ಮ ಗುರಿ ನಿರ್ಧಾರ ಮಾಡಿಕೊಂಡಿರಬೇಕು. ಅದಕ್ಕೆ ಅನುಗುಣವಾಗಿ ಮೈಂಡ್ ಮ್ಯಾಪ್ ಮಾಡಿಕೊಳ್ಳುವ ಮೂಲಕ ಕ್ರಮಬದ್ಧ ಅಭ್ಯಾಸ ಮಾಡಿದರೆ ನಿರ್ದಿಷ್ಟ ಗುರಿಯನ್ನು ತಲುಪಬಹುದು. ಇದರಿಂದ ವ್ಯಕ್ತಿತ್ವ ವಿಕಸನ ಹೊಂದಲು ಸಾಧ್ಯ ಎಂದು ಸೂಪರ್ ಬ್ರೈನ್ ತರಬೇತುದಾರ ಕಾರ್ತಿಕ್ ಸತ್ಯಮೂರ್ತಿ ಹೇಳಿದರು.

    ಸಮೀಪದ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಗುರಿಯನ್ನು ನಿರ್ಧರಿಸುವ, ಕ್ರಮಬದ್ಧವಾಗಿ ವ್ಯಾಸಂಗ ಮಾಡುವ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉನ್ನತ ಸಾಧನೆಯನ್ನು ಮಾಡುವುದರ ಜತೆಗೆ ಪರಿಸರದ ಕಾಳಜಿ, ಉತ್ತಮ ಆರೋಗ್ಯ ನಿರ್ವಹಣೆಯ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತಾನು ವ್ಯಾಸಂಗ ಮಾಡಿದ ಶಾಲೆಯನ್ನು ಮರೆಯದೆ ವರ್ಷಕ್ಕೆ ಒಮ್ಮೆಯಾದರೂ ವಿದ್ಯಾಲಯಕ್ಕೆ ಆಗಮಿಸಿ ಶಿಕ್ಷಕರನ್ನು ಭೇಟಿಯಾಗಬೇಕು ಎಂದು ಕಿವಿಮಾತು ಹೇಳಿದರು.
    ವಿದ್ಯಾರ್ಥಿಗಳಿಗೆ ಸಮಯದ ಹೊಂದಾಣಿಕೆ, ಗುರಿ ನಿರ್ಧಾರ ಮತ್ತು ವ್ಯಾಸಂಗ ಕ್ರಮವನ್ನು ರೂಢಿಸಿಕೊಳ್ಳುವ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು. ಪ್ರಾಚಾರ್ಯ ಆರ್.ಪ್ರೇಮ್‌ಕುಮಾರ್, ಉಪ ಪ್ರಾಚಾರ್ಯೆ ಜೆ.ಶ್ರೀಕಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts