More

    ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಬೇಕೆಂದು ಟವರ್ ಏರಿದ ಕಾರ್ಯಕರ್ತ!

    ಚಿಕ್ಕಮಗಳೂರು: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ, ನನಗೆ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡ ನಾಯಕರು ಪಕ್ಷಾಂತರ ಮಾಡುತ್ತಿದ್ದಾರೆ. ಇನ್ನೊಂದೆಡೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಜನ ಬೆಂಬಲ ಇದೆ, ಪಕ್ಷಕ್ಕಾಗಿ ದುಡಿದಿದ್ದೇನೆ… ಆದರೂ ಚುನಾವಣೆಗೆ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟಿಲ್ಲ ಎಂದು ಕೆಲ ನಾಯಕರು ಅಸಮಾಧಾನ ವ್ಯಕಪಡಿಸುತ್ತಿದ್ದಾರೆ. ಇದು ಸದ್ಯದ ರಾಜಕೀಯ ಚಿತ್ರಣ ಎಂದರೆ ತಪ್ಪಲ್ಲ.

    ಇದನ್ನೂ ಓದಿ: VIDEO | ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ವಿನಂತಿಸಿದ ಪೊಲೀಸ್; ಅಧಿಕಾರಿಯ ಕಾರ್ಯಕ್ಕೆ ಸಿಎಂ ಶ್ಲಾಘನೆ

    ಟವರ್ ಏರಿದ ಕಾರ್ಯಕರ್ತ!

    ಈ ನಡುವೆ ನನಗೆ ಬಿಜೆಪಿ ಟಿಕೆಟ್ ಬೇಕೆಂದು ವ್ಯಕ್ತಿಯೊಬ್ಬ ಬಿಎಸ್​ಎನ್​ಎಲ್ ಟವರ್ ಏರಿ ಕುಳಿತು ಅಸಮಾಧಾನ ಹೊರಹಾಕಿದ್ದಾನೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ಆರ್​ಎಸ್ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಂಗಪ್ಪ ಟವರ್ ಏರಿ ಕುಳಿತ ವ್ಯಕ್ತಿ. ಈತ ಕಳದ 15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಬಿಜೆಪಿ ಎಂದು ಬಂದಾಗ ತನ್ನ ವೈಯಕ್ತಿಕ ಕೆಲಸವನ್ನು ಬದಿಗೊತ್ತಿ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದನಂತೆ. ಹೀಗಾಗಿ ನನಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಟವರ್ ಏರಿ ಆಗ್ರಹಿಸಿದ್ದಾನೆ.

    ಇದನ್ನೂ ಓದಿ: ಕದನ ಕಣದಲ್ಲಿ ತೊಡೆತಟ್ಟಿದ ಕೋಟಿವೀರರು; ಇಲ್ಲಿದೆ ಶತಕೋಟ್ಯಧೀಶ ರಾಜಕಾರಣಿಗಳ ಒಟ್ಟು ಆಸ್ತಿ ವಿವರ…

    ಹರಸಾಹಸ ಪಟ್ಟ ಪೊಲೀಸರು!

    ಗ್ರಾಮದಲ್ಲಿದ್ದ ಬಿಎಸ್​ಎನ್​ಎಲ್ ಟವರ್ ಏರಿ ಬಿಜೆಪಿ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾನೆ. ಘಟನೆ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಮಾಧ್ಯಮದವರು ಬರುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದ ರಂಗಪ್ಪನನ್ನು ಮನವೋಲಿಸಿ ಕೆಳಗಿಳಿಸಲು ಮಾತ್ರ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts