More

    ಆರೋಗ್ಯ, ಮನಸ್ಥಿತಿ ಸದೃಢವಾಗಿದ್ದಾಗ ಪರಿಪೂರ್ಣತೆ

    ರಾಯಚೂರು: ಆರೋಗ್ಯ ಮತ್ತು ಮನಸ್ಥಿತಿ ಸದೃಢವಾಗಿದ್ದಾಗ ಮಾತ್ರ ಪರಿಪೂರ್ಣ ಮಹಿಳೆಯಾಗಲೂ ಸಾಧ್ಯವಾಗಿದ್ದು, ಹೀಗಿದ್ದಾಗ ಮಾತ್ರ ಸಮಾಜ ಮತ್ತು ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ ಹೇಳಿದರು.
    ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಮಹಿಳಾ ಒಕ್ಕೂಟದಿಂದ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಹ ಸದೃಢವಾಗಲು ಯೋಗ್ಯ ಆಹಾರ ಸೇವನೆ ಮುಖ್ಯವಾಗಿದೆ ಎಂದರು.
    ಅಶಾಂತಿ, ಅಸಂತೋಷಗಳಿಂದ ಹೊರಬಂದು ಶಾಂತತೆಯ ಮತ್ತು ಸಂತೋಷದ ಜೀವನ ರೂಪಿಸಿಕೊಂಡಾಗ ಪರಿಪೂರ್ಣ ಮಹಿಳೆಯಾಗಲು ಸಾಧ್ಯವಿದೆ. ಶರಣ ಸಂಸ್ಕೃತಿಯ ತಳಹದಿಯ ಮೇಲೆ ಮಹಿಳೆಯರು ಮನ ಪರಿವರ್ತನೆ ಮಾಡಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
    ಸ್ಟಾರ್ಕಿೈನ್ ಕೆಮಿಕಲ್ಸ್ ನಿರ್ದೇಶಕಿ ಸ್ಮೀತಾ ಮಾತನಾಡಿ, ಕಲಿಕೆ ಮತ್ತು ಗಳಿಕೆಗೆ ಮಹಿಳೆ ಮುಂದಾದಾಗ ಸಮಾನ ಅವಕಾಶಗಳು ಒದಗಿ ಬರಲು ಸಾಧ್ಯವಿದೆ. ಮಹಿಳೆಯರ ಕುರಿತು ಸಮಾಜ ತನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದಾರೆ. ಅವಕಾಶ ಬಳಸಿಕೊಂಡು ಮುಂದಡಿಯಿಡಬೇಕಿದೆ ಎಂದರು.
    ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಪರಿವರ್ತನೆಯ ದಾರಿಯಲ್ಲಿ ಮಹಿಳೆಯರು ಕಾರ್ಯನಿರ್ವಹಿಸಬೇಕಾಗಿದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮಹಿಳೆಯರು ಮುಂದೆ ಬರಬೇಕಾಗಿದೆ. ನಮ್ಮ ಜವಾಬ್ದಾರಿಗಳೊಂದಿಗೆ ಕಾರ್ಯನಿರ್ವಹಿಸಿದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
    ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಜಿಲ್ಲಾ ಶಿಕ್ಷಣಾಕಾರಿ ಆರ್.ಇಂದಿರಾ ವಿಶೇಷ ಉಪನ್ಯಾಸ ನೀಡಿದರು. ಇಂದುಮತಿ ಸಾಲಿಮಠರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.
    ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಖಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲಲಿತಾ ಕಡಗೋಳ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗವೇಣಿ ಪಾಟೀಲ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಾತಿಮಾ ಹುಸೇನ್, ಮುಖಂಡರಾದ ಕೆ.ದೇವಣ್ಣ ನಾಯಕ, ಖಾಜನಗೌಡ ಏಗನೂರು, ಶ್ರೀಕಾಂತರಾವ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts