More

    ಸತತ ಮಳೆಗೆ ಜನಜೀವನ ಅಸ್ತವ್ಯಸ್ತ

    ಲಕ್ಷ್ಮೇಶ್ವರ: ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ಮಳೆ ಸುರಿಯಿತು.

    ಸತತ ಮಳೆಯಿಂದ ಜಮೀನಿನಲ್ಲಿ ಕಾಲಿಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ತಡವಾಗಿದ್ದರಿಂದ ಬಿತ್ತನೆ ಮಾಡಿ 15ರಿಂದ 20 ದಿನದ ಬೆಳೆಗಳೀಗ ತೇವಾಂಶ ಹೆಚ್ಚಳದಿಂದ ಹಳದಿ ರೋಗ, ಕೀಟಬಾಧೆಗೆ ತುತ್ತಾಗುತ್ತಿವೆ. ಜಮೀನಿನಲ್ಲಿ ಬೆಳೆಗಿಂತ ಕಳೆ ಹೆಚ್ಚಾಗುತ್ತಿದ್ದು ಎಡೆ ಹೊಡೆಯಲು, ಕಳೆ ತೆಗೆಯಲು ಅವಕಾಶ ಇಲ್ಲದಂತಾಗಿ ರೈತರು ಚಿಂತೆಗೀಡಾಗಿದ್ದಾರೆ.

    ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಬಿತ್ತನೆಯೇ ಆಗಿಲ್ಲ. ಶೇ. 70ರಷ್ಟು ರೈತರು ಗೋವಿನಜೋಳ ಬಿತ್ತನೆ ಮಾಡಿದ್ದು, ಅದು ಲದ್ದಿಹುಳು ಬಾಧೆ ಮತ್ತು ತೇವಾಂಶ ಹೆಚ್ಚಳದಿಂದ ಹಾಳಾಗುತ್ತಿದೆ. ರೈತರು ಮಳೆರಾಯನ ಬಿಡುವಿಗಾಗಿ ಬೇಡಿಕೊಳ್ಳುವಂತಾಗಿದೆ ಎನ್ನುತ್ತಾರೆ ರೈತ ಪ್ರಕಾಶ ಹುಲಕೋಟಿ.

    ಸೋರುತ್ತಿವೆ ಮನೆಗಳು: ನಿರಂತರ ಮಳೆಯಿಂದ ಮಣ್ಣಿನ ಮತ್ತು ಹಳೆಯ ಕಾಂಕ್ರೀಟ್ ಮನೆ, ಶಾಲೆ, ಸರ್ಕಾರಿ ಕಚೇರಿಗಳೂ ಸೋರುತ್ತಿವೆ. ಸೋರುವ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರಿಂದ ಕತ್ತಲಲ್ಲೇ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ಷಣೆಗಾಗಿ ಸಾವಿರಾರು ಖರ್ಚು ಮಾಡಿ ಪ್ಲಾಸ್ಟಿಕ್, ತಾಡಪತ್ರಿ ಖರೀದಿಸಿ ಮನೆಯ ಮೇಲೆ ಹೊದಿಸಿದ್ದರೂ ಸೋರುವುದು ತಪ್ಪುತ್ತಿಲ್ಲ. ಮಳೆಯೂ ನಿಲ್ಲದಿರುವುದರಿಂದ ಜನತೆ ಯಾತನೆ ಅನುಭವಸುತ್ತಿದ್ದಾರೆ. ರೈತರಿಗೆ ಜಾನುವಾರುಗಳ ಪೋಷಣೆ ಕಷ್ಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts