More

    ಅಸೂಯೆ ಪಡುವುದರಲ್ಲೇ ಮುಳುಗಿ ಜೀವನ ಮರೆತಿರುವ ಜನರು

    ವಿರಾಜಪೇಟೆ : ಧರ್ಮ ಎಂದರೆ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಂಡು ನಮ್ಮೊಳಗೆ ಬೆಳಕು ತರುವಂತಹದ್ದು, ಇದನ್ನು ಪರಿವರ್ತನೆಯ ಸಮಯ ಅಂತ ನಾವು ಭಾವಿಸಬೇಕು ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಅಭಿಪ್ರಾಯಪಟ್ಟರು.

    ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 88ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವದ ಪ್ರಯುಕ್ತ ವಿರಾಜಪೇಟೆ ತಾಲೂಕು ಕ್ರೀಡಾಂಗಣದಲ್ಲಿ ದ್ವಾದಶ ಜ್ಯೋರ್ತಿಲಿಂಗ ಪುಣ್ಯದರ್ಶನ ಮತ್ತು ಆದ್ಯಾತ್ಮಿಕ ಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ಇತ್ತೇಚೆಗೆ ಉದ್ಘಾಟಿಸಿ ಮಾತನಾಡಿದರು.

    ಅಂತರಂಗದಲ್ಲಿರುವ ಅಜ್ಞಾನ ತೊಲಗಿಸಿ ಜ್ಞಾನದ ಬೆಳಕು ಬೀರಬೇಕು. ಜ್ಞಾನದ ಬೆಳಕು ಇಲ್ಲದೆ ಸಿರಿಸಂಪತ್ತು, ಸಾಮ್ರಾಜ್ಯ ತಂದಿಟ್ಟರೂ ಅದನ್ನು ಅನುಭವಿಸಲು ಹೊರಟಾಗ ನಮಗೆ ಶೂನ್ಯವೇ ಲಭಿಸುತ್ತದೆ. ಇಂದು ಎಲ್ಲ ಕಡೆ ಹಿಂಸೆ, ಕ್ರೋಧ, ಆಕ್ರೋಶ, ಅಸೂಯೆಗಳಲ್ಲಿ ತೊಡಗಿಸಿಕೊಂಡು ಜೀವನ ಏನು ಎಂಬುವುದನ್ನು ಮರೆತಿದ್ದಾರೆ. ತಾನು ಬದುಕುವುದರ ಜತೆಗೆ ಎಲ್ಲರನ್ನೂ ಪ್ರೀತಿಸುವಂತಾಗಬೇಕು. ದ್ವೇಷ ತೊಡೆದು ಹಾಕಬೇಕು ಎಂದು ಸಲಹೆ ನೀಡಿದರು.

    ಬಾಹ್ಯ ಅನ್ವೇಷಣೆಯಿಂದ ಪರಿವರ್ತನೆ ಸಾಧ್ಯವಿಲ್ಲ. ನಮ್ಮೊಳಗೆ ಇರುವ ಅರಿಷಡ್ವರ್ಗಗಳನ್ನು ನಾಶ ಮಾಡಿ ಎತ್ತರಕ್ಕೆ ಏರಿದರೆ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ನಾವು ಓದುತ್ತೇವೆ, ಆದರೆ ಪಾಲಿಸುವುದಿಲ್ಲ. ನಾವು ಅನುಭವಿಸುವುದಕ್ಕಿಂತ ಅನುಸಂಧಾನ ಮಾಡಿಕೊಂಡು ನಮ್ಮ ಮೂಲ ಉದ್ದೇಶ ಓಂ ಶಾಂತಿ ಆಗಬೇಕು, ಮಾತು ಜ್ಯೋತಿರ್ಲಿಂಗವಾಗಬೇಕು ಎಂದರು.

    ಮೈಸೂರು ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನಸ್ಸನ್ನು ಬಲಶಾಲಿ ಮಾಡಿಕೊಳ್ಳಲು ರಾಜಯೋಗ (ಮೆಡಿಟೇಶನ್) ಅಭ್ಯಾಸ ಮಾಡಬೇಕು. ಶಾರೀರಿಕ ವೀರತ್ವ ಎಲ್ಲರಿಗೂ ಇರುತ್ತದೆ. ಆದರೆ ಮಾನಸಿಕ ವೀರತ್ವ ಎಲ್ಲರಿಗೂ ಬೇಕು. ಸ್ಥಿತಿಯನ್ನು ಸಮತೋಲನ ಮಾಡಿಕೊಂಡು ಸ್ಥಿರತೆ ಕಾಪಾಡಿಕೊಳ್ಳಬೇಕು. ಮಾನವ ಜೀವನವನ್ನು ದಾನವ ಜೀವನವನ್ನಾಗಿ ಮಾಡಿಕೊಳ್ಳಬಾರದು. ಅರಿಷಡ್ವರ್ಗಗಳೇ ನಮ್ಮ ಶತ್ರು. ಜೀವನದಲ್ಲಿ, ಪ್ರವೃತ್ತಿಯಲ್ಲಿ ಯೋಗಿಗಳಾಗಬೇಕು, ತ್ಯಾಗಮಯ ಜೀವನದಿಂದ ಮನೆಗೂ ಸಮಾಜಕ್ಕೂ ಆದರ್ಶರಾಗಿರಬೇಕು, ಮನಸ್ಸಿನಲ್ಲಿ ಭಗವಂತನ ಸ್ಮರಣೆ ಮಾಡಿ ಎಂದು ಹೇಳಿದರು.

    ಸೇವಾದಾರಿ ಮೈಸೂರು ಪ್ರಾಣೇಶ್, ಹಾಕಿ ತರಬೇತುದಾರ ಹಾಗೂ ನಿವೃತ್ತ ಸೈನಿಕ ಪ್ರಿನ್ಸ್ ಗಣಪತಿ, ಮಡಿಕೇರಿ ಶಾಖೆಯ ಧನಲಕ್ಷ್ಮೀ, ಜ್ಞಾನಗಂಗಾ ಭವನದ ಮುಖ್ಯಸ್ಥರಾದ ಕೋಮಲಾ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts