More

    ಜನರ ಮನದಲ್ಲಿ ಬಿತ್ತಿ ಬಸವಣ್ಣ ನ ಚಿಂತನೆ : ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಸಲಹೆ

    ಚಳ್ಳಕೆರೆ: ಬಸವಣ್ಣನ ಸಾಮಾಜಿಕ ಚಿಂತನೆ ಮತ್ತು ಅವರ ಆದರ್ಶ ಕುರಿತು ವೀರಶೈವ ಸಮಾಜ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

    ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಸಚಿವರು ಮತ್ತು ಶಾಸಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಚಳ್ಳಕೆರೆಯಿಂದ ರಾಜಕೀಯ ಆರಂಭ ಮಾಡಿ ಹಿರಿಯೂರು ಕ್ಷೇತ್ರದಲ್ಲೂ ಶಾಸಕನಾಗಿ, ಸಚಿವನಾಗಿದ್ದೇನೆ. ನನ್ನ ರಾಜಕೀಯ ಸೇವಾ ಕಾರ್ಯದಲ್ಲಿ ಲಿಂಗಾಯತ ಸಮುದಾಯ ಯಾವುದೇ ರೀತಿ ನೆರವು ಮತ್ತು ಸಹಾಯ ಪಡೆದುಕೊಂಡಿಲ್ಲ. ಬೇರೆಯವರಿಗೆ ತೊಂದರೆ ಕೊಡದ ವೀರಶೈವ ಸಮಾಜ ಸದಾ ಸಮಾಜಮುಖಿಯಾಗಿರಬೇಕು ಎಂದರು.

    ಶಾಸಕ ಟಿ.ರಘುಮೂರ್ತಿ ಮಾತನಾಡಿ, ವೀರಶೈವ ಸಮಾಜದವರು ಇದುವರೆಗೂ ಯಾವುದೇ ಅನುದಾನದ ಸಹಕಾರ ಪಡೆದುಕೊಂಡಿಲ್ಲ. ಜಯಂತಿ ಮತ್ತು ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ನಿರೀಕ್ಷೆ ಮಾಡುವುದಿಲ್ಲ ಎಂದು ಹೇಳಿದರು.

    ಸಮಾಜದ ಮುಖಂಡ ಬಿ.ಟಿ.ಕಿರಣ್ ಮಾತನಾಡಿ, ತಾಲೂಕಿನಲ್ಲಿ ಸಮಾಜದ ಜನಸಂಖ್ಯೆ 20 ಸಾವಿರ ಇದೆ. ಬಹುಪಾಲು ಕುಟುಂಬಗಳು ಸಂಕಷ್ಟದಲ್ಲಿವೆ. ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ನೀಡಲು ಕ್ರಮ ಕೈಗೊಳ್ಳಬೇಕು.

    ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ರಸ್ತೆಯಲ್ಲಿನ ಬೈಪಾಸ್ ಸಮೀಪ ಬಸವಣ್ಣನ ಕಂಚಿನ ಪ್ರತಿಮೆ ನಿರ್ಮಾಣ ಮಾಡುವ ಸಮಾಜದ ಚಿಂತನೆ ಇದೆ. ಇದಕ್ಕೆ ಸಚಿವರು ಮತ್ತು ಶಾಸಕರ ಸಹಕಾರ ಇರಬೇಕು ಎಂದು ಮನವಿ ಮಾಡಿದರು.

    ವೀರಶೈವ ಸಮಾಜದ ಉಪಾಧ್ಯಕ್ಷ ಕೆ.ಎಂ.ಜಗದೀಶ್, ಗೌರವಾಧ್ಯಕ್ಷ ವಂದನಾರಾಜು, ಕಾರ್ಯದರ್ಶಿ ಎಚ್.ವಿ.ಪ್ರಸನ್ನಕುಮಾರ್, ನಿರ್ದೇಶಕರಾದ ಲೋಕೇಶ್, ಮಾತೃಶ್ರೀ ಮಂಜುನಾಥ, ಎನ್.ಸತೀಶ್‌ಬಾಬು, ಡಾ.ಜಿ.ವಿ.ರಾಜಣ್ಣ, ಪಿ.ಜಗದೀಶ್, ಸಿ.ಗುರುಸಿದ್ದಮೂರ್ತಿ, ಕೊಟ್ರೇಶ್ ಇತರರಿದ್ದರು.

    ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ವೀರಶೈವ ಸಮಾಜವಿದೆ. ವೀರಶೈವ ಸಮಾಜ ಬೆಂಬಲಿಸುವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವುದಕ್ಕೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಸಾಕ್ಷಿಯಾಗಿದೆ. ಚಿತ್ರದುರ್ಗ ಸೇರಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಮಾಜದ ಬೆಂಬಲ ಇದೆ.
    ಕೆ.ಸಿ.ವೀರೇಂದ್ರ ಪಪ್ಪಿ ಶಾಸಕ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts