More

    ಸೂರನ್ನೇ ಕಿತ್ತುಕೊಳ್ಳುವಂತೆ ಉಕ್ಕೇರುವ ಜೀವನದಿ, ಮನೆಯನ್ನೇ ಕೆಡವಿಕೊಳ್ಳುತ್ತಿರುವ ಜನ

    ನವದೆಹಲಿ: ಪ್ರಶಾಂತವಾಗಿ ಹರಿಯುವಾಗ ಸಹಸ್ರಾರು ಎಕರೆ ಭೂಮಿಗೆ ನೀರುಣಿಸಿ, ಕೃಷಿಗೆ ಸಹಕರಿಸುವ ಜೀವನದಿ. ಮಳೆಗಾಲ ಬಂತೆಂದರೆ ರೌದ್ರಾವತಾರ ತೆಳೆದು ಬೆಳೆದ ಬೆಳೆ, ತಲೆ ಮೇಲಿನ ಸೂರನ್ನು ಕಿತ್ತುಕೊಳ್ಳುವಂತೆ ಉಕ್ಕೇರಿ ಪ್ರಾಣವನ್ನೇ ಹಿಂಡುತ್ತದೆ. ಇದರಿಂದ ಪಾರಾಗಲು ನದಿ ತಟದಲ್ಲಿ ವಾಸವಾಗಿರುವ ಜನರು ತಮ್ಮ ಮನೆಯನ್ನೇ ಕೆಡವಿಕೊಳ್ಳುತ್ತಾರೆ. ನೆರೆ ಇಳಿದ ಬಳಿಕ ಮರಳಿ ಮನೆ ಕಟ್ಟಿಕೊಳ್ಳುತ್ತಾರೆ.

    ನೆರೆಯ ನೀರಲ್ಲಿ ಮನೆ ಕೊಚ್ಚಿ ಹೋದರೆ, ಹಾಳಾಗುವ ಇಟ್ಟಿಗೆಯನ್ನು ಅಲ್ಪಸ್ವಲ್ಪವಾದರೂ ಉಳಿಸಿಕೊಂಡು, ಮನೆ ಮರುನಿರ್ಮಾಣದ ವೆಚ್ಚವನ್ನು ಸ್ವಲ್ಪ ತಗ್ಗಿಸಿಕೊಳ್ಳುವ ದೂರಾಲೋಚನೆ. ಇದು ಕೋಸಿ ಮತ್ತು ಗಂಗಾ ನದಿಗಳಿಂದ ದ್ವೀಪ ಗ್ರಾಮವಾಗಿರುವ ಬಿಹಾರದ ಭಾಗಲ್ಪುರ ಬಳಿಯ ಗೋವಿಂದಪುರ ಎಂಬ ಕುಗ್ರಾಮದ ನಿವಾಸಿಗಳ ಕತೆ-ವ್ಯಥೆ.

    ಕೋವಿಡ್​ ಪಿಡುಗಿನ ಸಂದರ್ಭದಲ್ಲಿ ಒಂದೆಡೆ ಲಾಕ್​ಡೌನ್​ ಬಾಧೆ, ಹೊರಹೋದರೆ ಸೋಂಕು ತಗಲುವ ಭೀತಿ. ಇಷ್ಟಾದರೂ ಜನರು ಮಾತ್ರ ತಮ್ಮ ಮನೆಯನ್ನು ಕೆಡವಿಕೊಳ್ಳುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

    ಇದನ್ನೂ ಓದಿ: ಅಮಿತಾಬ್​, ಅಭಿಷೇಕ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ; ಐಶ್ವರ್ಯಾ ರೈ, ಆರಾಧ್ಯಾ ಹೋಮ್​ ಕ್ವಾರಂಟೈನ್​

    ಕೋಸಿ ನದಿಯಲ್ಲಿ ನೆರೆ ಉಕ್ಕಿ ದಡಕ್ಕೆ ಸಮೀಪವಾಗಿರುವ ನಮ್ಮ ಮನೆಯನ್ನು ಕೊಚ್ಚಿಕೊಂಡು ಹೋಗುತ್ತದೆ. ಇದರಿಂದ ಇಟ್ಟಿಗೆಗಳು ಕೂಡ ನಷ್ಟವಾಗುತ್ತವೆ. ಈ ನಷ್ಟವನ್ನು ತಡೆಯಲು ನಾವು ಪ್ರತಿಬಾರಿ ಮಳೆಗಾಲದಲ್ಲಿ ನಮ್ಮ ಮನೆಗಳನ್ನು ಕೆಡವಿಕೊಳ್ಳುತ್ತೇವೆ. ಕೈಗೆ ಸಿಗುವ ಇಟ್ಟಿಗೆಗಳನ್ನು ಜತನವಾಗಿ ಸಂಗ್ರಹಿಸಿಕೊಂಡು ಜನ-ಜಾನವಾರುಗಳೊಂದಿಗೆ ಅವನ್ನೂ ಎತ್ತರದ ಪ್ರದೇಶಕ್ಕೆ ಕೊಂಡೊಯ್ಯುತ್ತೇವೆ ಎಂದು ಗ್ರಾಮದ ರೋಹಿತ್​ ಕುಮಾರ್​ ಹೇಳುತ್ತಾರೆ.
    ಅಲ್ಲಿ ಇಟ್ಟಿಗೆಗಳನ್ನು ಬಳಸಿ ಜಾನುವಾರುಗಳಿಗೆ ಆಸರೆ ಕಲ್ಪಿಸುತ್ತೇವೆ. ನೆರೆ ಇಳಿದ ಬಳಿಕ ಮತ್ತೆ ನಮ್ಮ ಮನೆಗಳಿಗೆ ಬಂದು, ಅವನ್ನು ಮರುನಿರ್ಮಿಸಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೆ ಎಂದು ತಿಳಿಸುತ್ತಾರೆ.

    ಹರಿವನ್ನೇ ಬದಲಿಸಿದ ನದಿಗಳು: ಈ ಮೊದಲು ಕೋಸಿ ಮತ್ತು ಗಂಗಾ ನದಿಗಳು ಗ್ರಾಮದಿಂದ ಸಾಕಷ್ಟು ದೂರದಲ್ಲಿ ಹರಿಯುತ್ತಿದ್ದವು. ಆದರೆ, ಸರ್ಕಾರಗಳು ನೆರೆ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡ ಬಳಿಕ 2019ರಿಂದ ಹರಿವನ್ನೇ ಬದಲಿಸಿರುವ ನದಿಗಳು ಗ್ರಾಮದ ಅಂಚಿಗೆ ತಲುಪಿವೆ.
    ಮೊದಲು ನೆರೆ ಬಂದರೆ ಮನೆ ತನಕ ಮಾತ್ರ ನೀರು ಬರುತ್ತಿತ್ತು. ಆದರೆ, ಮನೆಗಳಿಗೆ ಹಾನಿಯಾಗುತ್ತಿರಲಿಲ್ಲ. ಆದರೆ, ಈಗ ನದಿ ನೀರು ಉಕ್ಕೇರಿ ಮನೆಯ ಪಾಯವನ್ನೇ ಅಲ್ಲಾಡಿಸುವ ರೀತಿ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತಿದೆ. ಆದ್ದರಿಂದ ಪ್ರತಿ ಬಾರಿ ನಾವು ನೆರೆಯ ಸಂದರ್ಭದಲ್ಲಿ ಮನೆಯನ್ನು ಕೆಡವಿ, ನೆರೆ ಇಳಿದ ಬಳಿಕ ಮತ್ತೆ ಕಟ್ಟಿಕೊಳ್ಳುವುದಾಗಿ ರೋಹಿತ್​ ವಿವರಿಸುತ್ತಾರೆ.

    ಇದು ಒಬ್ಬ ರೋಹಿತನ ಕತೆ ಮಾತ್ರವಲ್ಲ. ಬದಲಿಗೆ ಇಡೀ ಗ್ರಾಮದವರ ಕತೆ. ಸದ್ಯ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳನ್ನು ಕೆಡವಿಕೊಳ್ಳುತ್ತಿದ್ದಾರೆ. ನೆರೆ ಇಳಿದ ಬಳಿಕ ಮತ್ತು 8ರಿಂದ 10 ಸಾವಿರ ರೂಪಾಯಿ ಖರ್ಚು ಮಾಡಿ ತಾಡಪಾಲು ಮೇಲ್ಛಾವಣಿಯ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ.

    ಥರ್ಡ್ ಅಂಪೈರ್ ಫಲಿತಾಂಶದಲ್ಲಿ ಸಿ.ಟಿ.ರವಿಗೆ ಕೋವಿಡ್ ಪಾಸಿಟಿವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts