More

    ‘ರಾಜ್ಯದ ಜನತೆ ಸಂಕಷ್ಟದಲ್ಲಿದಾರೆ, ದಿಕ್ಕು ತಪ್ಪಿಸಬೇಡಿ’ : ಸಿಡಿ ಲೇಡಿಗೆ ಎಚ್​ಡಿಕೆ ಸಲಹೆ

    ಬೀದರ್ : ರಾಜ್ಯದ ಜನರು ಕರೋನಾ ಸೇರಿದಂತೆ ನಾನಾ ಸಮಸ್ಯೆಯಲ್ಲಿರುವಾಗ ಹೀಗೆ ಎಲ್ಲೋ ಗುಪ್ತ ಸ್ಥಳದಿಂದ ಯಾರದೋ ಬಲವಂತದಿಂದ ವಿಡಿಯೋ ಹೇಳಿಕೆ ನೀಡುವುದು ಸರಿ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಡಿ ಲೇಡಿಗೆ ಕಿವಿಮಾತು ಹೇಳಿದ್ದಾರೆ. ಜೊತೆಗೆ ಈ ಸಿಡಿ ಕೇಸ್​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನೆರವು ತೆಗೆದುಕೊಳ್ಳುವದು ಒಳ್ಳೆಯದು ಎಂದಿದ್ದಾರೆ.

    ಸಿಡಿ ಯುವತಿಯ ಮತ್ತೊಂದು ವಿಡಿಯೋ ತುಣುಕು ಹೊರಬಿದ್ದಿರುವ ಬಗ್ಗೆ ಬೀದರ್​ನ ಬಸವಕಲ್ಯಾಣದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಆ ಯುವತಿ ಹಾಗೂ ಆಕೆಯ ಕುಟುಂಬಸ್ಥರಿಗೆ ರಕ್ಷಣೆ ನೀಡುವದು ಸರ್ಕಾರದ ಜವಾಬ್ದಾರಿ ಆಗಿದೆ. ಇನ್ನೂ ಆ ಯುವತಿ ಯಾರದೋ ಕುತಂತ್ರಕ್ಕೆ ಬಲಿಯಾಗುವದು ಸರಿ ಅಲ್ಲ ಎಂದರು. “ಆ ಯುವತಿಯನ್ನು ಒಂದು ಅಜ್ಞಾತ ಸ್ಥಳದಲ್ಲಿ ಬಿಜೆಪಿಯವರು ಇಟ್ಟುಕೊಂಡಿದ್ದಾರೋ ಅಥವಾ ಕಾಂಗ್ರೆಸ್​ನವರು ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ… ಯಾರದೋ ಕುತಂತ್ರಕ್ಕೆ ಆ ಯುವತಿ ಬಲಿಯಾಗಬಾರದು. ಇದರಿಂದ ಆ ಯುವತಿಯ ಕುಟುಂಬಕ್ಕೆ ಹಾಗೂ ಯುವತಿಗೆ ಸಮಸ್ಯೆಯಾಗಬಹುದು” ಎಂದರು.

    ಇದನ್ನೂ ಓದಿ: ‘ಸಿಡಿ ಲೇಡಿ’ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್​ ಶಾಸಕಿಯರು!

    “ಆ ಯುವತಿಗೆ ನಾನು ಮನವಿ ಮಾಡುತ್ತೇನೆ. ನಿಮಗೆ ಯಾರ ಮೇಲೆ ನಂಬಿಕೆ ಇದೆ ಅವರಿಗೆ ಭೇಟಿಯಾಗಿ ರಕ್ಷಣೆ ಪಡೆದುಕೊಳ್ಳಿ, ಸರ್ಕಾರದ ಮೇಲೆ ನಂಬಿಕೆ ಇಲ್ಲಾಂದ್ರೆ ಮುಖ್ಯನ್ಯಾಯಮೂರ್ತಿಗೆ ಭೇಟಿಯಾಗಿ. ಇಲ್ಲವೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇದ್ದರೆ ಅವರಿಗೆ ಭೇಟಿಯಾಗಿ ರಕ್ಷಣೆ ಪಡೆದುಕೊಳ್ಳಿ. ಅವರ ಯಾರ ಮೇಲೂ ನಂಬಿಕೆ ಇಲ್ಲಾಂದ್ರೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಅವರ ನೆರವು ಪಡೆದುಕೊಳ್ಳಿ” ಎಂದು ಎಚ್​ಡಿಕೆ ಹೇಳಿದರು.

    “ರಾಜ್ಯದ ಜನತೆ ಹಲವಾರು ಸಮಸ್ಯೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಬೇಡಿ” ಎಂದು ಯುವತಿಗೆ ಎಚ್.ಡಿ.ಕೆ. ಮನವಿ ಮಾಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೋಳಿ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ “ನಾನು ಏನೂ ಹೇಳುವದಿಲ್ಲ. ಇಡೀ ರಾಜ್ಯ ಸಂಕಷ್ಟದಲ್ಲಿದೆ. ಈ ಸಿಡಿ ಕೇಸ್​​ನ ನಾನು ಕಾಂಗ್ರೆಸ್ ಮತ್ತು ಬಿಜೆಪಿಗೆ ಬಿಟ್ಟಿದೇನೆ. ನನಗೆ ಆಸಕ್ತಿ ಇಲ್ಲ” ಎಂದರು.

    ‘ಸದನದ ಘನತೆ ಹರಾಜು ಹಾಕುವುದು ತಪ್ಪು’ : ಸುಧಾಕರ್ ಹೇಳಿಕೆಗೆ ಶಾಸಕಿಯರ ಅಸಮಾಧಾನ

    ‘ಪಾಕಿಸ್ತಾನ ಮುರ್ದಾಬಾದ್ ಅನ್ನು’ ಎಂದು ಥಳಿಸಿದ ವ್ಯಕ್ತಿಯ ಬಂಧನ

    ಐಐಎಂಗಳಲ್ಲಿ ಮಹಾತ್ಮ ಗಾಂಧಿ ನಾಷನಲ್ ಫೆಲೋಶಿಪ್​ಗೆ ಅರ್ಜಿ ಆಹ್ವಾನ; ಮಾರ್ಚ್ 27 ಕೊನೆಯ ದಿನಾಂಕ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts