More

    ‘ನಮ್ಮ ಜತೆ ದೇವರಿದ್ದಾನೆ’ ಎನ್ನುತ್ತ ಸಾಮಾಜಿಕ ಅಂತರ ನಿರ್ಲಕ್ಷಿಸುತ್ತಿರುವ ಪಾಕಿಸ್ತಾನೀಯರು!

    ಇಸ್ಲಾಮಾಬಾದ್​: ನಾವು ಐದು ಬಾರಿ ನಮ್ಮ ಮುಖ ತೊಳೆಯುತ್ತೇವೆ, ಐದು ಬಾರಿ ನಮ್ಮ ಕೈಗಳನ್ನು ತೊಳೆಯುತ್ತೇವೆ. ಹೀಗಾಗಿ ಪಾಶ್ಚಾತ್ಯರಂತೆ ಕರೊನಾ ವೈರಸ್​ ನಮ್ಮನ್ನು ಕಾಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮಾಜ್​ ಮಾಡುತ್ತೇವೆ. ಆದರೆ, ಧರ್ಮ ನಿಂದಕರಿಗೆ ಇದರ ಅಭ್ಯಾಸವೇ ಇಲ್ಲ….

    ಪಾಕಿಸ್ತಾನದಲ್ಲಿ ಜನಸಾಮಾನ್ಯರಿಗೆ ಧರ್ಮ ಬೋಧಕರು ಹೇಳುತ್ತಿರುವ ಮಾತುಗಳಿವು…
    ಮುಲ್ತಾನ್​ ನಗರದ ಸಬೀರ್​ ದುರ್ರಾನಿ ದಿನವೂ ಐದು ಹೊತ್ತು ಸಮೀಪದ ಮಸೀದಿಯಲ್ಲಿ ನಮಾಜ್​ ಮಾಡುತ್ತಾರೆ. ಅವರಂತೆ ಹಲವರು ಅಲ್ಲಿಗೆ ಬರುತ್ತಾರೆ. ಅವರಲ್ಲಿ ಯಾರೂ ಮಾಸ್ಕ್​ಗಳನ್ನು ಧರಿಸಿರುವುದಿಲ್ಲ. ನಿಮಗೆ ಕರೊನಾ ವೈರಸ್​ ಎನೂ ಮಾಡುವುದಿಲ್ಲ ಎಂದೇ ಅವರಿಗೆ ಪ್ರಾರ್ಥನೆಯನ್ನು ಬೋಧಿಸುವರು ಹೇಳುತ್ತಾರೆ.

    ಪಾಕಿಸ್ತಾನದಲ್ಲಿ ಮೊದಲೇ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ತನಗೆ ನೀಡಿರುವ ಸಾಲಗಳನ್ನು ಮನ್ನಾ ಮಾಡಬೇಕೆಂದು ಅಂತಾರಾಷ್ಟ್ರೀಯ ಸಮುದಾಯಗಳೆದುರು ಮಂಡಿಯೂರುತ್ತಿದೆ. ಅಂಥದ್ದರಲ್ಲಿ ಕರೊನಾಘಾತ ಪಾರಾಗಲು ಇನ್ನಷ್ಟು ಕಷ್ಟಪಡುತ್ತಿದೆ. ಸದ್ಯ ಪಾಕಿಸ್ತಾನದಲ್ಲಿ 5,500ಕ್ಕೂ ಅಧಿಕ ಜನರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ನೂರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಸೇರುವುದನ್ನು ಸರ್ಕಾರ ನಿಷೇಧಿಸಿದೆ.
    ಸೋಂಕಿತರ ಪೈಕಿ ಶೇ.60ಕ್ಕೂ ಅಧಿಕ ಜನರು ಕೊಲ್ಲಿ ರಾಷ್ಟ್ರಗಳಿಂದ ಮರಳಿದವರು ಹಾಗೂ ತಬ್ಲಿಘ್​ ಜಮಾತ್​ನಲ್ಲಿ ಪಾಲ್ಗೊಂಡವರಾಗಿದ್ದಾರೆ. ಆದರೆ, ಶುಕ್ರವಾರದ ನಮಾಜ್​ಗಳಲ್ಲಿ ಪಾಲ್ಗೊಂಡು ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮುಂದಿನ ಎರಡು ವಾರಗಳಲ್ಲಿ ರಮಜಾನ್​ ತಿಂಗಳು ಆರಂಭವಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮಾಜ್​ಗಳಲ್ಲಿ ಭಾಗವಹಿಸುತ್ತಾರೆ. ಇದು ಪಾಕ್​ ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

    ಧರ್ಮ ಹಾಗೂ ಪ್ರಾರ್ಥನೆ ಅತ್ಯಂತ ಸೂಕ್ಷ್ಮ ವಿಷಯಗಳಾಗಿದ್ದು, ಈ ಬಗ್ಗೆ ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ವಿಶೇಷ ಸಹಾಯಕರಾಗಿರುವ ಮಿರ್ಜಾ ಸಹಜಾದ್​ ಅಕ್ಬರ್​ ರಾಯ್ಟರ್ಸ್​​ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

    ಮಸೀದಿಯಿಂದ ದೂರ ಉಳಿಯಲ್ಲ: ಕಳೆದ ವಾರ ಅಂತ್ಯಸಂಸ್ಕಾರವೊಂದರಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಧಾರ್ಮಿಕ ಸಭೆಗಳಿಂದ ದೂರ ಉಳಿಯಬೇಕೆಂಬ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದೆಂದರೆ ಅಮೆರಿಕದ ನಿರ್ದೇಶನದ ಮೇರೆಗೆ ಮಸೀದಿಗಳನ್ನು ಪಾಳುಗೆಡಲು ಬಿಟ್ಟಂತೆ. ನಾವು ಜೀವ ಬಿಡಲು ತಯಾರಿದ್ದೇವೆ, ಆದರೆ, ಮಸೀದಿಗಳನ್ನು ಬಿಡಲು ತಯಾರಿಲ್ಲ ಎಂದು ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಜನರು ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ.

    ಯುರೋಪಿಯನ್​ ರಾಷ್ಟ್ರಗಳಲ್ಲಿ ಲಾಕ್​ಡೌನ್​ ‘ಔಟ್​’ ಆಗಿದ್ದೇಕೆ? ಬೀದಿಗಿಳಿದು ವ್ಯಾಪಾರ- ವಹಿವಾಟು ನಡೆಸುತ್ತಿರುವ ಜನರು

    Fe

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts