More

    ಸೊಳ್ಳೆ ಕಾಟಕ್ಕೆ ಜನ ಹೈರಾಣ

    ಮುಳಗುಂದ: ಪಟ್ಟಣದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಂಜೆಯಾದೊಡನೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿರುವುದರಿಂದ ಜನರು ಬೇಸತ್ತಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಾಗಲೀ, ಆರೋಗ್ಯ ಇಲಾಖೆಯವರಾಗಲೀ ಸೊಳ್ಳೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

    ಪಟ್ಟಣದ ಕೆಲವೆಡೆ ಚರಂಡಿಗಳು ಅಲ್ಲಲ್ಲಿ ಹೂಳು ತುಂಬಿಕೊಂಡಿವೆ. ಹೊಲಸು ನೀರು ನಿಂತು ಸೊಳ್ಳೆಗಳ ಕಾಟ ಹೇಳತೀರದಾಗಿದೆ. ಇದನ್ನು ನಿಯಂತ್ರಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲವಾಗಿದ್ದಾರೆ.

    ಈ ಬಗ್ಗೆ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಟಿಸಿಎಲ್ ಪೌಡರನ್ನು ಚರಂಡಿಗಳಿಗೆ ಹಾಕುವುದಾಗಲೀ, ಫಾಗಿಂಗ್ ಮಾಡುವ ಕಾರ್ಯವಾಗಲೀ ಇನ್ನೂವರೆಗೂ ಮಾಡುತ್ತಿಲ್ಲ.

    ಸಾಂಕ್ರಾಮಿಕ ರೋಗಗಳ ಭೀತಿ: ಸೊಳ್ಳೆಗಳ ಕಾಟದಿಂದ ಚಿಕೂನ್ ಗುನ್ಯಾದಂತಹ ಅನೇಕ ಸಾಂಕ್ರಾಮಿಕ ರೋಗಗಳು ಯಾವಾಗ ಜನರಿಗೆ ಬಂದು ಆವರಿಸುತ್ತವೆಯೋ ಎಂಬ ಆತಂಕದಲ್ಲಿ ಜನತೆ ಜೀವನ ಸಾಗಿಸುವಂತಾಗಿದೆ.

    ಅವೈಜ್ಞಾನಿಕ ಚರಂಡಿಗಳು: ಇತ್ತೀಚೆಗೆ ನಿರ್ವಣವಾಗುತ್ತಿರುವ ಎಲ್ಲ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಸರಿಯಾಗಿ ನೀರು ಮುಂದೆ ಸಾಗದೇ ಅಲ್ಲಿಯೇ ನಿಲ್ಲುತ್ತವೆ. ಆದರೆ, ಅವುಗಳ ನಿರ್ವಹಣೆ ಮೂರು ತಿಂಗಳಿಗೋ ಆರು ತಿಂಗಳಿಗೋ ನಡೆಯತ್ತವೆ. ಆದರೆ, ಕಾಮಗಾರಿ ನಡೆಯುವಾಗಲೇ ಪಟ್ಟಣ ಪಂಚಾಯಿತಿಯ ಪ್ರತಿನಿಧಿಯೊಬ್ಬನನ್ನು ನಿಲ್ಲಿಸಿ ಕಾಮಗಾರಿ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಇಲ್ಲಿ ಗುತ್ತಿಗೆದಾರರು ಆಡಿದ್ದೇ ಆಟ ಎನ್ನುವಂತಾಗಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

    ಈಗಾಗಲೇ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಈ ಬಗ್ಗೆ ಕ್ರೀಮಿನಾಶಕ ಸಿಂಪರಣೆ ಮಾಡಲು ಕ್ರಮ ಕೈಗೊಂಡಿದ್ದೇವೆ ಹಾಗೂ ಇನ್ನೆರಡು ದಿನಗಳಲ್ಲಿ ಫಾಗಿಂಗ್ ಮಾಡಿಸುತ್ತೇವೆ.

    | ಮಂಜುನಾಥ ಗುಳೇದ ಮುಖ್ಯಾಧಿಕಾರಿ ಪಪಂ ಮುಳಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts