More

    ಶೇಂಗಾ ಇಳುವರಿ ಕುಸಿತ; ಆತಂಕದಲ್ಲಿ ಬೆಳೆಗಾರ

    ಮುಳಬಾಗಿಲು: ಸತತ ಮಳೆಯಿಂದ ತೇವಾಂಶ ಹೆಚ್ಚಳವಾಗಿದ್ದು, ಶೇಂಗಾ ಇಳುವರಿ ಕುಸಿತ ಆತಂಕ ವರದಿ ಪ್ರಕಟಗೊಂಡ ತಕ್ಷಣ ತಾಲೂಕು ಆಡಳಿತ ರೈತರ ಶೇಂಗಾ (ನೆಲಗಡಲೆ) ಹೊಲಗಳಿಗೆ ತಾಲೂಕು ಕಂದಾಯ ಮತ್ತು ವಿಮಾ ಕಂಪನಿ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ತಾಲೂಕಿನ ಬೈರಕೂರು ಹೋಬಳಿ ನಗವಾರ ಗ್ರಾಮಕ್ಕೆ ಕಂದಾಯ ಇಲಾಖೆ ಮತ್ತು ವಿಮಾ ಕಂಪನಿ ಪ್ರತಿನಿಧಿಗಳು ಭೇಟಿ ನೀಡಿ ಪರೀಕ್ಷಿಸಿದಾಗ ಕಡಿಮೆ ಇಳುವರಿಯಿಂದ ರೈತ ನಷ್ಟಕ್ಕೆ ಒಳಗಾಗುತ್ತಿರುವುದು ಕಂಡುಬಂದಿದೆ.

    ಬೆಳೆಯ ಸಮೀಕ್ಷೆಯ ಅಂಗವಾಗಿ5X5 ಅಡಿ ಆಯ್ದ ಜಮೀನಿನಲ್ಲಿ ನೆಲಗಡಲೆ ಗಿಡಗಳನ್ನು ಮಣ್ಣಿನಿಂದ ಬೇರ್ಪಡಿಸಿ ತೂಕ ಹಾಕಲಾಯಿತು. ಎರಡು ಸರ್ವೇ ನಂಬರ್‌ನಲ್ಲೂ ನೆಲಗಡಲೆ ತೂಕ 5.700 ಕೆಜಿ ಕಂಡುಬಂತು. ಸಾಮಾನ್ಯವಾಗಿ ಗುರ್ತಿಸಲ್ಪಟ್ಟ ಸ್ಥಳದಲ್ಲಿ 10ರಿಂದ 12 ಕೆಜಿ ಇಳುವರಿ ಸಿಗಬೇಕಾಗಿತ್ತು, ವಿಮೆ ಮಾಡಿಸಿದ ರೈತರು ಇದರ ಆಧಾರದ ಮೇಲೆ ಬೆಳೆನಷ್ಟ ಪರಿಹಾರ ಪಡೆಯಬಹುದಾಗಿದೆ.

    ಸೇರಿದಂತೆ ಕೃಷಿ ಅಧಿಕಾರಿಗಳೊಂದಿಗೆ ನಗವಾರದ ರೈತರ ಹೊಲಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಮತ್ತು ವಿಮಾ ಕಂಪನಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಕೆ.ಎನ್.ರಾಜಶೇಖರ್ ಪ್ರತಿಕ್ರಿಯಿಸಿದ್ದಾರೆ.
    ಉಪ ತಹಸೀಲ್ದಾರ್ ಕೆ.ಟಿ.ವೆಂಕಟೇಶಯ್ಯ, ಕಂದಾಯ ನಿರೀಕ್ಷಕ ಉಮೇಶ್, ನರೇಶ್, ವಿಮಾ ಕಂಪನಿಯ ರವಿಕುಮಾರ್ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts