More

    ಶಕ್ತಿ ಸೌಧದ ಅಂದ ಹೆಚ್ಚಿಸಲಿವೆ ಸಸ್ಯ ಮಾದರಿಯ ಗಂಡಭೇರುಂಡ ಹಾಗೂ ನವಿಲುಗಳು

    • 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
    • ಹೊಸ ವರ್ಷಕ್ಕೆ ಲೋಕಾರ್ಪಣೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ತನ್ನ ವಾಸ್ತುಶಿಲ್ಪದ ಸೊಬಗಿನಿಂದ ದೇಶವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಈ ಐತಿಹಾಸಿಕ ಕಟ್ಟಡದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ರಾಜ್ಯ ತೋಟಗಾರಿಕಾ ಇಲಾಖೆಯು ಮುಂದಾಗಿದೆ.
    ವಿಧಾನಸೌಧ ಮುಂಭಾಗದ ಉದ್ಯಾನದಲ್ಲಿ ವಿವಿಧ ಬಗೆಯ ಸಸ್ಯಗಳು ಹಾಗೂ ಹೂ ಗಿಡಗಳನ್ನು ಬಳಸಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರದ ಲಾಂಛನ ಗಂಡಭೇರುಂಡ ಹಾಗೂ ರಾಷ್ಟ್ರಪಕ್ಷಿ ನವಿಲುಗಳ ಮಾದರಿಯನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದೆ.
    ಬೆಂಗಳೂರಿನ ಡಾಟ್ ಆರ್ಟ್ ಸ್ಟುಡಿಯೋ ಈ ಕುರಿತು ಫೋಟೋ ಶಾಪ್‌ನಲ್ಲಿ ವಿನ್ಯಾಸ ಸಿದ್ಧಪಡಿಸಿದ್ದು, ನಂತರ ಫೈಬರ್ ಮೆಟೀರಿಯಲ್ ಬಳಸಿ ಮಾದರಿಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ಬಲಬದಿಗೆ 50 ಅಡಿ ಉದ್ದ ಹಾಗೂ 9 ಅಡಿ ಎತ್ತರವಿರುವ ಎರಡು ನವಿಲುಗಳು ಹಾಗೂ ಎಡಬದಿಗೆ 1 ಅಡಿ ಎತ್ತರ, 35 ಅಡಿ ಉತ್ತ ಹಾಗೂ 45 ಅಡಿ ಅಗಲವಿರುವ ಗಂಡಭೇರುಂಡ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಹೊಸ ವರ್ಷಕ್ಕೆ ಲೋಕಾರ್ಪಣೆಗೊಳ್ಳಲಿದೆ.
    ತೋಟಗಾರಿಕೆ ಇಲಾಖೆ ಸಚಿವರು ಚೈನಾದ ಶಾಂಘೈ ವೃತ್ತದಲ್ಲಿ ಹೂದಾನಿಗಳಿಂದ ನಿರ್ಮಿಸಿದ್ದ ನವಿಲುಗಳ ವಿನ್ಯಾಸಗಳನ್ನು ಕಂಡು ಅದೇ ಮಾದರಿಯಲ್ಲಿ ವಿಧಾನಸೌಧದ ಮುಂಭಾಗದ ಉದ್ಯಾನದಲ್ಲಿ ನಿರ್ಮಿಸುವಂತೆ ಸೂಚಿಸಿದ್ದರು. ಅದರಂತೆ ಈ ಮಾದರಿಗಳ ವಿನ್ಯಾಸ ರಚಿಸಿ, ಫೈಬರ್ ಮೆಟೀರಿಯಲ್‌ನಲ್ಲಿ ಅವುಗಳಿಗೆ ಆಕಾರ ನೀಡಲು ಮೂರು ತಿಂಗಳು ಸಮಯ ತೆಗೆದುಕೊಂಡಿತು. ಫೈಬರ್ ಬಳಸಿ ಮಾಡಿರುವ ಈ ಮಾದರಿ 25-30 ವರ್ಷ ಕಾಲ ಬಾಳಿಕೆ ಬರಲಿದ್ದು, ಅವುಗಳ ಅಲಂಕಾರಕ್ಕೆ ಬಳಸುವ ಗಿಡಗಳಿಗೆ ಕಾಲಕಾಲಕ್ಕೆ ನೀರು, ಗೊಬ್ಬರ ಹಾಕಿ ನಿರ್ವಹಣೆ ಮಾಡಬೇಕಾಗುತ್ತದೆ. ಈ ಎರಡೂ ಸಸ್ಯಗಳ ಕಲಾಕೃತಿಯಿಂದ ವಿಧಾನಸೌಧ ಅಂದ ಮತ್ತಷ್ಟು ಹೆಚ್ಚಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು.
    ಕೋಟ್
    ‘‘ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಗಂಡಭೇರುಂಡ ಹಾಗೂ ನವಿಗಳ ಸಸ್ಯ ಮಾದರಿಗಳನ್ನು ನಿರ್ಮಿಸಲಾಗುತ್ತಿದ್ದು, ಲ್ಯಾಂಡ್ ಸಸ್ಯಗಳ ಅಳವಡಿಕೆ ಹಾಗೂ ಲ್ಯಾಂಡ್ ಸ್ಕೇಪ್ ವಿನ್ಯಾಸದ ಕಾರ್ಯ ಸಾಗುತ್ತಿದ್ದು, ಹೊಸ ವರ್ಷದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. –
    ಡಾ. ಎಂ. ಜಗದೀಶ್, ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts