More

    ಬಾಳೆ ಗ್ರಾಪಂ ಗ್ರಾಮಸಭೆ ಬಹಿಷ್ಕಾರ

     ಎನ್.ಆರ್.ಪುರ: 2008 ರ ಮೇ 30 ರಂದು ನಡೆದ ಬಾಳೆ ಗ್ರಾಪಂ ಸಭೆಯಲ್ಲಿ ಹುಲಿ ಯೋಜನೆ ಬಫರ್​ಜೋನ್​ಗೆ ಒಪ್ಪಿಗೆ ನೀಡಿ ನಿರ್ಣಯ ಕೈಗೊಂಡ ಪಿಡಿಒ, ಅಧ್ಯಕ್ಷರು, ಸದಸ್ಯರು ಹಾಗೂ ಅರಣ್ಯಾಧಿಕಾರಿಗಳನ್ನು ಸಭೆಗೆ ಕರೆಸಬೇಕು ಎಂದು ಒತ್ತಾಯಿಸಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸಭೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದರು.

    ಈ ಸಭೆಯ ನಿರ್ಣಯವು ನಕಲಿಯೋ, ಅಸಲಿಯೋ ಎಂಬುದರ ಬಗ್ಗೆ ತನಿಖೆಯಾಗಬೇಕು. ಭದ್ರಾ ಹುಲಿ ಯೋಜನೆ, ಅರಣ್ಯಕಾಯ್ದೆಯಿಂದ ಭೂಮಿ, ಮನೆ ಕಳೆದು ಕೊಂಡಿದ್ದೇವೆ. ಇಷ್ಟು ವರ್ಷವಾದರೂ ನಮಗೆ ಬದಲಿ ಜಾಗಕ್ಕೆ ಹಕ್ಕು ಪತ್ರ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. 2008ರಲ್ಲಿ ಅಧಿಕಾರದಲ್ಲಿದ್ದ ಪಿಡಿಒ, ಅಧ್ಯಕ್ಷರು, ಸದಸ್ಯರು ಹಾಗೂ ಅರಣ್ಯಾಧಿಕಾರಿಗಳನ್ನು ಸಭೆಗೆ ಕರೆಸಿದ ನಂತರ ಗ್ರಾಮ ಸಭೆ ಮಾಡಬೇಕು. ಈಗ ಗ್ರಾಮ ಸಭೆ ಮುಂದೂಡಬೇಕು ಗ್ರಾಮಸ್ಥರು ಆಗ್ರಹಿಸಿದರು.

    ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಭದ್ರಾ ಆಣೆಕಟ್ಟಿ ನಿಂದ ಶೇ. ಹುಲಿಯೋಜನೆಯಿಂದ ಶೇ.18 ರಷ್ಟು ಭೂಮಿ ಕಳೆದುಕೊಂಡಿದ್ದೇವೆ. 2008ರ ಗ್ರಾಪಂ ನಿರ್ಣಯದ ಬಗ್ಗೆ ಅನುಮಾನಗಳಿವೆ. 2017ರಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ ಗ್ರಾಪಂಗಳು ನಿರ್ಣಯ ಕೈಗೊಂಡಿದ್ದವು ಅದನ್ನು ಪರಿಗಣಿಸಿ ಯೋಜನೆ ಕೈ ಬಿಡಬೇಕು ಎಂದು ಆಗ್ರಹಿಸಿದರು.

    ಗ್ರಾಪಂ ಮಾಜಿ ಸದಸ್ಯರಾದ ರಘು, ರಾಯಪ್ಪಗೌಡ, ಗ್ರಾಪಂ ನೋಡೆಲ್ ಅಧಿಕಾರಿ ಬಿಇಒ ದುಗಪ್ಪ, ಪಿಡಿಒ ಗಿರಿಯಪ್ಪಗೌಡ, ಗ್ರಾಮಸ್ಥರಾದ ಹೆನ್ನಂಗಿಯ ಮಂಜೇಶ್,ಶ್ರೀಕಾಂತ್,ಚಂದ್ರಶೇಖರ, ಬೆಳ್ಳಂಗಿಯ ಶೇಖರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts