More

    ಸಿಹಿ ಹಂಚಿ, ಹೊಸ ಬಟ್ಟೆ ಧರಿಸಿ ಹಬ್ಬ ಆಚರಿಸಿ

    ಕಿಕ್ಕೇರಿ: ಪರಿಸರಕ್ಕೆ ವಿಷಾನಿಲ ಸೂಸಿ ಆರೋಗ್ಯ, ಮನಸ್ಸು, ಹಣ ಎಲ್ಲವನ್ನೂ ಹಾಳು ಮಾಡುವ ಪಟಾಕಿಯನ್ನು ಸುಡದೆ ಸಿಹಿ ಹಂಚಿ, ಹೊಸ ಉಡುಗೆ ತೊಟ್ಟು ಸಂಭ್ರಮಿಸುವುದು ಒಳಿತು ಎಂದು ಸ್ಪಂದನ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ತಿಳಿಸಿದರು.

    ಪಟ್ಟಣದಲ್ಲಿ ಸ್ಪಂದನ ಫೌಂಡೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ಪಟಾಕಿ ಬಿಡಿ ಪರಿಸರ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀಪಾವಳಿ ಎಂದರೆ ಪಟಾಕಿ ಸುಟ್ಟು ಗಾಯಾಳು ಆಗುವುದು ಎನ್ನುವಂತಾಗಿದೆ. ಪಟಾಕಿ ಅಂಗಡಿ, ಗೋದಾಮುಗಳಿಂದ ಈ ಬಾರಿ ಸಾಕಷ್ಟು ಪ್ರಾಣ ಹಾನಿಯಾಗಿವೆ. ಅಮಾಯಕರು ಬಲಿಯಾಗಿದ್ದು, ಇನ್ನಾದರೂ ಎಚ್ಚೆತ್ತು ಕೊಳ್ಳಬೇಕಿದೆ ಎಂದರು.

    ಪಟಾಕಿ ಸುಡುವುದರಿಂದ ಹಾನಿಕಾರಕ ಗಂಧಕ, ನೈಟ್ರಸ್ ಆಕ್ಸೈಡ್, ಪಾದರಸ, ಸೀಸ, ಕ್ಯಾಡಮಿಯಂ, ಲಿಥಿಯಂ, ಬೇರಿಯಂ, ಆರ್ಸೆನಿಕ್, ಸೀಸ ಪರಿಸರಕ್ಕೆ ಸೇರಲಿದೆ. ಕಿವುಡು, ಅಂಗ ಊನತೆ, ಚರ್ಮವ್ಯಾದಿ, ಶ್ವಾಸಕೋಶ, ಹೃದಯ ಸಂಬಂಧಿ, ಕ್ಯಾನ್ಸರ್‌ನಂತಹ ಹಲವು ರೋಗಗಳು ಬರಲಿವೆ. ಸಾಕು ಪ್ರಾಣಿ, ಪ್ರಾಣಿ ಪಕ್ಷಿಗಳು ಪಾಕಿ ಶಬ್ದಕ್ಕೆ ವಿಚಿತ್ರವಾಗಿ ವರ್ತಿಸಲಿವೆ. ಇದನ್ನು ಬಿಟ್ಟು ಮಣ್ಣಿನ ದೀಪ ಹಚ್ಚಿ, ಸಿಹಿ ಹಂಚಿ ಹಬ್ಬವನ್ನು ಸಂಭ್ರಮಿಸಿ ಎಂದು ಮಕ್ಕಳಿಗೆ ತಿಳಿ ಹೇಳಿದರು.

    ಹಬ್ಬದ ನೆನಪಿನಲ್ಲಿ ಗಿಡ ನೆಡುತ್ತೇವೆ. ಹೊಸ ಬಟ್ಟೆ ಧರಿಸಿ, ಸಿಹಿ ಊಟ ಸವಿಯುವುದಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕವಿತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts