More

    ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಇಟಗಿವರೆಗೆ ಸಣಾಪುರ ಬಸ್ ಓಡಿಸಿ

    ಕಂಪ್ಲಿ: ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಬಸ್‌ನಲ್ಲಿ ವಿದ್ಯಾರ್ಥಿಗಳು ನಿಲ್ಲಲ್ಲೂ ಸಮಸ್ಯೆಯಾಗಿದೆ. ಇಟಗಿ ಮತ್ತು ಸಣಾಪುರ ಗ್ರಾಮಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಶಾಲಾ-ಕಾಲೇಜಿಗೆ ಬರುತ್ತಾರೆ.

    ಬೆಳಗ್ಗೆ 9ಗಂಟೆಗೆ ಸಣಾಪುರದಿಂದ ಬಸ್ ಹೊರಟು ಕಂಪ್ಲಿಗೆ ಬರುತ್ತಿದ್ದು, ಇದೇ ಬಸ್ ಇಟಗಿವರೆಗೆ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು. ಇಟಗಿಯಿಂದ ನಿತ್ಯ ಬೆಳಗ್ಗೆ 9ಗಂಟೆಗೆ, ಸಂಜೆ ಕಂಪ್ಲಿಯಿಂದ 6 ಗಂಟೆಗೆ ಬಸ್ ಬಿಡಬೇಕು.


    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಯುತ್ತಿರುವುದರಿಂದ ಸಂಜೆ 6 ಗಂಟೆ ನಂತರ ಕಂಪ್ಲಿಯಿಂದ ಸಣಾಪುರ-ಇಟಗಿವರೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಹಸೇನ್‌ಸಾಬ್, ದುರ್ಗಪ್ಪ, ನಿರಂಜನ, ಪ್ರವೀಣ, ಶೈಲಜಾ, ವಾಣಿ, ಯಮುನಾ, ಲಕ್ಷ್ಮೀ ಒತ್ತಾಯಿಸಿದರು.

    ಸಂಚಾರಿ ನಿಯಂತ್ರಕ ತಿಮ್ಮಪ್ಪ ಯಾದವ ಮಾತನಾಡಿ, ಕಂಪ್ಲಿಯಿಂದ ಬೆಳಗ್ಗೆ 6.15ಕ್ಕೆ ಸಣಾಪುರ ಮೂಲಕ ಇಟಗಿಗೆ, ಸಣಾಪುರಕ್ಕೆ 7.30ಕ್ಕೆ ಮತ್ತು 8.30ಕ್ಕೆ ಬಸ್ ಸೌಲಭ್ಯವಿದೆ. ಬೆಳಗ್ಗೆ 8.30ಕ್ಕೆ ಸಣಾಪುರಕ್ಕೆ ತೆರಳುವ ಬಸ್ ಇಟಗಿಗೆ ತೆರಳಲು, ಸಂಜೆ 6ಗಂಟೆಗೆ ಕಂಪ್ಲಿಯಿಂದ ಇಟಗಿಗೆ ಓಡಿಸಲು ಹೆಚ್ಚುವರಿ ಬಸ್‌ಗಾಗಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts