More

    ಕೂರ್ಮಗಡ ಜಾತ್ರೆಗೆ ತೆರಳಲು ಎಲ್ಲರಿಗೂ ಪಾಸ್

    ಕಾರವಾರ: ಜನವರಿ 25ರಂದು ನಡೆಯುವ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆಗೆ ತೆರಳಲು ಪ್ರತಿಯೊಬ್ಬರಿಗೂ ಪಾಸ್ ನೀಡಲು ಸಭೆಯಲ್ಲಿ ತೀರ್ವನಿಸಲಾಯಿತು.


    ಕಾರವಾರ ಎಸಿ ಕನಿಷ್ಕ್ ಅವರ ಅಧ್ಯಕ್ಷತೆಯಲ್ಲಿ ಎಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರ ಕೈಗೊಳ್ಳಲಾಯಿತು.
    ಅಂದು ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಭಕ್ತರು ದ್ವೀಪಕ್ಕೆ ತೆರಳಲು ಅವಕಾಶ ನೀಡಬೇಕು. ಪ್ರತಿ ಪ್ರಯಾಣಿಕನ ಹೆಸರು, ಮೊಬೈಲ್ ನಂಬರ್, ವಿಳಾಸ ನಮೂದಿಸಿ ಪಾಸ್ ನೀಡಬೇಕು. 10 ವರ್ಷ ಕೆಳಗಿನ ಮಕ್ಕಳಿಗೆ, 70 ವರ್ಷ ಮೇಲ್ಪಟ್ಟ ವೃದ್ಧರಿಗೆ ದ್ವೀಪಕ್ಕೆ ತೆರಳಲು ಅವಕಾಶವಿಲ್ಲ. ದ್ವೀಪಕ್ಕೆ ತೆರಳುವ ಪ್ರತಿಯೊಬ್ಬರಿಗೂ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕು ಎಂದು ಎಸಿ ಕನಿಷ್ಕ್ ಸೂಚನೆ ನೀಡಿದರು.


    ಬೈತಖೋಲ್​ನಿಂದ ಮಾತ್ರ ದೋಣಿಗಳು ತೆರಳಲು ಅವಕಾಶವಿದೆ. ಪಟಾಕಿಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಮದ್ಯ ಸೇವಿಸಿದವರಿಗೆ ತೆರಳಲು ಅವಕಾಶವಿಲ್ಲ ಎಂದು ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜಾ ತಿಳಿಸಿದರು. ತಹಸೀಲ್ದಾರ್ ನಿಶ್ಚಲ ನರೋನಾ, ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts