More

    ಪ್ರಮುಖ ಪಕ್ಷದ ಚಿಹ್ನೆ, ಪ್ರಭಾವಿಗಳ ಭಾವಚಿತ್ರ ಬಳಕೆ

    ರಾಣೆಬೆನ್ನೂರ: ಗ್ರಾಪಂ ಚುನಾವಣೆ ಯಾವುದೇ ಪಕ್ಷ ಆಧಾರಿತವಲ್ಲ. ಆದರೆ, ತಾಲೂಕಿನಲ್ಲಿ ಕೆಲ ಅಭ್ಯರ್ಥಿಗಳು ಪಕ್ಷದ ಚಿಹ್ನೆ ಹಾಗೂ ಮುಖಂಡರ ಭಾವಚಿತ್ರ ಬಳಸಿಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ವಾಟ್ಸ್​ಆಪ್ ಸ್ಟೇಟಸ್​ಗಳಲ್ಲಿ ಅಭ್ಯರ್ಥಿಗಳು ತಾವು ಬೆಂಬಲಿಸುವ ಪಕ್ಷದ ಚಿಹ್ನೆ ಹಾಗೂ ಮಂತ್ರಿ, ಶಾಸಕರ ಭಾವಚಿತ್ರಗಳನ್ನು ಬಳಸಿ ಮತ ಕೇಳುತ್ತಿದ್ದಾರೆ.

    ನಿಯಮ ಪ್ರಕಾರ, ಯಾವುದೇ ಅಭ್ಯರ್ಥಿಗಳು ಪ್ರಚಾರದ ಸಮಯದಲ್ಲಿ ಯಾವುದೇ ಪಕ್ಷದ ಚಿಹ್ನೆ ಹಾಗೂ ಮಂತ್ರಿ, ಶಾಸಕರ ಭಾವಚಿತ್ರ ಬಳಸಿಕೊಳ್ಳಬಾರದು. ಆದರೆ, ತಾಲೂಕಿನ ಹೊಳೇಆನ್ವೇರಿ, ಮುದೇನೂರ, ನಿಟ್ಟೂರು ಗ್ರಾಪಂನ ಕೆಲ ಅಭ್ಯರ್ಥಿಗಳು ಬಿಜೆಪಿ ಚಿಹ್ನೆ ಹಾಗೂ ಸಚಿವರು, ಶಾಸಕರ ಭಾವಚಿತ್ರಗಳನ್ನು ಕರಪತ್ರಗಳಲ್ಲಿ ಮುದ್ರಿಸಿ ಹಂಚುವ ಮೂಲಕ ಮತಯಾಚಿಸುತ್ತಿದ್ದಾರೆ.

    ಕೆಲವೆಡೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ತಮ್ಮ ಬೆಂಬಲಿತ ಅಭ್ಯರ್ಥಿಗಳ ಭಾವಚಿತ್ರದ ಜತೆಗೆ ಪಕ್ಷದ ಚಿಹ್ನೆ ಹಾಕಿಕೊಂಡು ಮತ ನೀಡುವಂತೆ ಮನವಿ ಮಾಡುತ್ತಿರುವ ಪೋಸ್ಟರ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ತಾಲೂಕಿನ ನಿಟ್ಟೂರು ಗ್ರಾಪಂ ಚುನಾವಣೆಗೂ ಮುನ್ನವೇ ‘ಬಿಜೆಪಿ ಮಡಿಲಿಗೆ’ ಎಂಬ ಬರಹಗಳನ್ನು ಪಕ್ಷದ ಕಾರ್ಯಕರ್ತರು ವಾಟ್ಸ್​ಆಪ್ ಸ್ಟೇಟಸ್ ಇಟ್ಟುಕೊಂಡಿದ್ದಾರೆ. ಆದರೆ, ಈ ಬಗ್ಗೆ ಚುನಾವಣಾಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಗ್ರಾಮೀಣ ಭಾಗದ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಗ್ರಾಪಂ ಚುನಾವಣೆ ಪಕ್ಷ ಆಧಾರಿತಲ್ಲ. ಆದ್ದರಿಂದ ಯಾವ ಅಭ್ಯರ್ಥಿಗಳು ಯಾವ ಹಂತದಲ್ಲೂ ಪಕ್ಷದ ಚಿಹ್ನೆ ಬಳಸಿ ಪ್ರಚಾರ ಮಾಡುವಂತಿಲ್ಲ. ರಾಣೆಬೆನ್ನೂರಿನಲ್ಲಿ ಮಾಡುತ್ತಿರುವ ಬಗ್ಗೆ ಕೂಡಲೆ ಎಂಸಿಸಿ ಟೀಮ್ೆ ತಿಳಿಸಿ, ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
    | ಬಸನಗೌಡ ಕೋಟೂರ, ಚುನಾವಣಾಧಿಕಾರಿ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts