More

    ಮಾಲ್ಡೀವ್ಸ್​​ನಲ್ಲಿ ಎಂಜಾಯ್ ಮಾಡುತ್ತಿರುವ ಪರಿಣಿತಿ; ಇದು ಹನಿಮೂನ್​​ ಫೋಟೋ ಅಲ್ಲ ಎಂದು ಕ್ಯಾಪ್ಶನ್​​​..!

    ಬಾಲಿವುಡ್​ ಬ್ಯೂಟಿ ಪರಿಣಿತಿ ಚೋಪ್ರಾ ಕೊಂಚ ರಿಲ್ಯಾಕ್ಸ್​ ಆದಂತಿದೆ. ಸಿನಿಮಾಗಳಿಂದ ಪುಟ್ಟ ಬ್ರೇಕ್​ ಪಡೆದು ಮಾಲ್ಡೀವ್ಸ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ ಪರಿಣಿತಿ. ಇತ್ತೀಚೆಗಷ್ಟೆ ಪರಿಣಿತಿ, ರಾಘವ್ ಚಡ್ಡಾ ಅವರನ್ನ ಮದುವೆಯಾಗಿದ್ದು, ಮದುವೆ ಬಳಿಕ ಮಾಲ್​ಡೀವ್ಸ್​​ಗೆ ತೆರಳಿದ್ದಾರೆ.


    ಪರಿಣಿತಿ ಕೆಲ ದಿನಗಳ ಹಿಂದೆ ಮಾಲ್ಡೀವ್ಸ್‌ಗೆ ತೆರಳಿ ಎಂಜಾಯ್​ ಮಾಡುತ್ತಿರುವ ಫೋಟೋಗಳನ್ನ ಹಂಚಿಕೊಂಡಿದ್ದು, ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ಪರಿಣಿತಿ ಹಾಲಿಡೇ ಮೂಡ್​​ನಲ್ಲಿದ್ದು, ಮಾಲ್ಡೀವ್ಸ್​​​ನಲ್ಲಿ ಎಂಜಾಯ್​​ ಮಾಡುತ್ತಿದ್ದಾರೆ.


    ಅಕ್ಟೋಬರ್​​ 16 ರಂದು ಪರಿಣಿತಿ-ರಾಘವ್ ಚಡ್ಡಾ ಮದುವೆಯಾಗಿದ್ದು, ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಪರಿಣಿತಿ ಹಂಚಿಕೊಂಡ ಮಾಲ್​ಡೀವ್ಸ್​ ಫೋಟೋಗಳನ್ನ ನೋಡಿದ ನೆಟ್ಟಿಗರು ಇದು ರಾಘವ್​ ಮತ್ತು ನಿಮ್ಮ ಹನಿಮೂನ್​​ ಫೋಟೋಸ್​​​​ ಅಲ್ವಾ ಅಂತ ಕಾಮೆಂಟ್​​ ಮಾಡಿದ್ದಾರೆ.

    ಮಾಲ್ಡೀವ್ಸ್​​ನಲ್ಲಿ ಎಂಜಾಯ್ ಮಾಡುತ್ತಿರುವ ಪರಿಣಿತಿ; ಇದು ಹನಿಮೂನ್​​ ಫೋಟೋ ಅಲ್ಲ ಎಂದು ಕ್ಯಾಪ್ಶನ್​​​..!


    ಈ ರೀತಿಯಾಗಿ ನೆಟ್ಟಿಗರು ಕಾಮೆಂಟ್​​ ಮಾಡೋದು ಪಕ್ಕಾ ಅನ್ನೋದನ್ನ ತಿಳಿದ ಪರಿಣಿತಿ, ಇದು ನಮ್ಮ ಹನಿಮೂನ್​ ಫೋಟೊ ಅಲ್ಲ ಎಂದು ತಾವು ಹಂಚಿಕೊಂಡ ಇನ್ಸ್​ಟಾಗ್ರಾಮ ಸ್ಟೋರಿಯ ಫೋಟೋ ಮೇಲೆ ಬರೆದಿದ್ದಾರೆ.


    ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಸೆ.24ರಂದು ರಾಜಸ್ಥಾನದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಸಿಖ್‌ ಪದ್ಧತಿಯಂತೆ ಮದುವೆಯಾಗಿದ್ದಾರು. ಈ ಹಿಂದೆ ಪರಿಣಿತಿ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿತ್ತು.


    ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಸಾನಿಯಾ ಮಿರ್ಜಾ ಮತ್ತು ಹರ್ಭಜನ್ ಸಿಂಗ್ ಅವರಂತಹ ಗಣ್ಯ ವ್ಯಕ್ತಿಗಳು ಮದುವೆಯಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts