More

    ಎಸ್​​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ಪಿಯು ಪ್ರವೇಶ ! ಪಾಲಕರಿಂದ ತೀವ್ರ ವಿರೋಧ

    ಬೆಂಗಳೂರು : ರಾಜ್ಯದಲ್ಲಿ ಎಸ್​​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ಹಲವು ಖಾಸಗಿ ಕಾಲೇಜುಗಳು ಪಿಯು ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ಪ್ರತಿಷ್ಠಿತ ಕಾಲೇಜುಗಳು ಸೀಟು ಭರ್ತಿ ಮಾಡುತ್ತಿವೆ ಎಂದು ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕೋವಿಡ್‌ನಿಂದ 2021ರ ಎಸ್​​ಎಸ್​ಎಲ್​ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ. ಪರೀಕ್ಷೆ ನಡೆಯುತ್ತೋ.. ನಡೆಯಲ್ವೋ ಅನ್ನೋ ಅನುಮಾನ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಪಿಯು ಕಾಲೇಜುಗಳು ಪಿಯು ದಾಖಲಾತಿ ಪ್ರಕ್ರಿಯೆ ‌ಪ್ರಾರಂಭಿಸಿಕೊಂಡಿವೆ. ಎಷ್ಟೋ ಪಾಲಕರು ಅರ್ಧ ಶುಲ್ಕ ಪಾವತಿಸಿ ಸೀಟು ಬ್ಲಾಕ್ ಮಾಡುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಕಾಡಲಿದೆ!: ಇದೆಷ್ಟು ಸತ್ಯ?

    ಸಧ್ಯ ಲಾಕ್ಡೌನ್​​ನಿಂದ ಕಾಲೇಜುಗಳು ಬಂದ್ ಆಗಿವೆ. ಆದರೆ ಆನ್​​ಲೈನ್​​ನಲ್ಲಿ ಪಿಯು ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ ಕೆಲವು ಕಾಲೇಜುಗಳು ಆನ್ಲೈನ್ ಪ್ರವೇಶ ಪರೀಕ್ಷೆ ಕೂಡ ನಡೆಸುತ್ತಿವೆ. ಹೀಗಾಗಿ ಹಲವು ಪಾಲಕರು ತಮ್ಮ ಮಕ್ಕಳಿಗೆ ಸೀಟು ಸಿಗುತ್ತೋ ಸಿಗಲ್ವೋ ಅನ್ನೋ ಆತಂಕದಲ್ಲಿದ್ದಾರೆ ಎನ್ನಲಾಗಿದೆ.

    ಮತ್ತೊಂದು ಕಡೆ, ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಇನ್ನೊಂದು ವಾರದಲ್ಲಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಅದರ ಫಲಿತಾಂಶ ಬರುವ ನಿರೀಕ್ಷೆ ಇದೆ. ಆದರೆ ರಾಜ್ಯ ಪಠ್ಯಕ್ರಮದ ಹತ್ತನೇ ತರಗತಿ ಪರೀಕ್ಷೆ ಬಗೆಗಿನ ನಿರ್ಧಾರ ಇನ್ನೂ ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ ಎಂದು ಪಾಲಕರು ಕಳವಳ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ; ಕರೊನಾ ಗುಣಮುಖರಿಗೆ ಇಎನ್​ಟಿ ತಪಾಸಣೆಗೆ ಸೂಚನೆ

    ಸರ್ಕಾರ ಇನ್ನೂ 2021-22 ನೇ ಸಾಲಿನ ಪಿಯು ಪ್ರವೇಶ ಪ್ರಕ್ರಿಯೆ ಮಾರ್ಗಸೂಚಿ ಹೊರಡಿಸಿಲ್ಲ. ಹೀಗಿದ್ದರೂ ಕೆಲವು ಪ್ರತಿಷ್ಠಿತ ಖಾಸಗಿ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ಇಂತಹ ಕಾಲೇಜುಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.

    ಮಾಸ್ಕ್​ ಧರಿಸದೆ ಮುಂಬೈ ಜನ ಎಷ್ಟು ಕೋಟಿ ದಂಡ ಕಟ್ಟಿದ್ದಾರೆ ಗೊತ್ತ ?!

    ಗುಡ್​ ನ್ಯೂಸ್​ : ಲಸಿಕೆ ಪಡೆಯಲು 18 ಮೇಲ್ಪಟ್ಟವರಿಗೆ ವಾಕ್​-ಇನ್ ಸೌಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts