More

    ಅಪೌಷ್ಟಿಕತೆ ನಿವಾರಣೆ ಸರ್ಕಾರ ಮುಖ್ಯ ಉದ್ದೇಶ

    ಪರಶುರಾಮಪುರ: ಮಹಿಳೆಯರು ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಣೆ ಸರ್ಕಾರದ ಉದ್ದೇಶವಾಗಿದೆ ಎಂದು ಟಿ.ಎನ್. ಕೋಟೆ ಗ್ರಾಪಂ ಅಧ್ಯಕ್ಷ ಓ. ಬೈಲಪ್ಪ ತಿಳಿಸಿದರು.

    ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ಸ್ಥಳೀಯ ಆಡಳಿತ, ಶಿಶು ಅಭಿವೃದ್ಧಿ, ಆರೋಗ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಆರೋಗ್ಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

    ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹಿಮಬಿಂದು ಮಾತನಾಡಿ, ಮಕ್ಕಳು ಮತ್ತು ಮಹಿಳೆಯರನ್ನು ದೈಹಿಕ-ಮಾನಸಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಅಂಗನವಾಡಿ ಕೇಂದ್ರ, ಆಸ್ಪತ್ರೆ, ಶಾಲೆಗಳ ಮೂಲಕ ಪೌಷ್ಟಿಕ ಆಹಾರ, ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡುತ್ತಿದೆ ಎಂದು ತಿಳಿಸಿದರು.

    ತಾಪಂ ಸದಸ್ಯ ಕರಡಪ್ಪ ಮಾತನಾಡಿ, ಗ್ರಾಮೀಣ ಪ್ರದೇಶ ಮಹಿಳೆಯರು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದು ಅವುಗಳ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

    ಇದೇ ವೇಳೆ ಹಣ್ಣು, ತರಕಾರಿ, ದ್ವಿದಳ ಧಾನ್ಯ ಸೇವನೆ ಉಪಯೋಗ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಗ್ರಾಮದಲ್ಲಿ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

    ಮುಖ್ಯಶಿಕ್ಷಕ ವೈ. ತಿಪ್ಪೇಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ, ರಂಗಮ್ಮ, ರಾಧಾ, ಭಾಗ್ಯಾ, ಅಶ್ವಿನಿ, ಸುಮಾ, ಹನುಮಕ್ಕ, ಆಶಾ ಕಾರ್ಯಕರ್ತೆ ಕವಿತಾ, ಶಿಕ್ಷಕರಾದ ಜಯಮ್ಮ, ಕಾಂತಾಮಣಿ, ಪಿ. ಗೋವಿಂದರಾಜು, ಪ್ರದೀಪ, ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts