More

    ಕುಡಿವ ನೀರಿನ ಸಮಸ್ಯೆ ಪರಿಹಾರ

    ಪರಶುರಾಮಪುರ: ಸತತ ಕುಡಿವ ನೀರಿನ ಅಭಾವ ಅನುಭವಿಸಿದ್ದ ಚಳ್ಳಕೆರೆ ತಾಲೂಕಿನ ಜನರ ಸಮಸ್ಯೆ ಪರಿಹಾರವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ಗ್ರಾಮದ ಹೊರವಲಯದ ಕೋಟೆಕೆರೆಯ ಬಳಿ ನಿರ್ಮಿಸಿದ್ದ ಬ್ಯಾರೇಜ್‌ಗೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಶನಿವಾರ ಭೇಟಿ ನೀಡಿ ಮಾತನಾಡಿದರು.

    ವಿವಿ ಸಾಗರದಿಂದ ಬಂದ ನೀರಿನಿಂದ ಬೊಂಬೇರಹಳ್ಳಿ, ಚೌಳೂರು, ಪರಶುರಾಮಪುರ ಬ್ಯಾರೇಜ್‌ಗಳು ಭರ್ತಿಯಾಗಿವೆ. ಚಳ್ಳಕೆರೆ ತಾಲೂಕು ವ್ಯಾಪ್ತಿಯ ಹಾಲಗೊಂಡನಹಳ್ಳಿ, ಪಗಡಲಬಂಡೆ, ಜಾಜೂರು ಬಳಿಯ ಸೇತುವೆ ಪ್ರದೇಶಗಳು ತುಂಬಿಕೊಂಡು ಗಡಿಪ್ರದೇಶಗಳನ್ನು ನೀರು ತಲುಪಬೇಕಿದೆ ಎಂದರು

    ನೀರು ಜೀವರಕ್ಷಕ ವಸ್ತು. ರಾಜ್ಯ ಸರ್ಕಾರ ಬಯಲುಸೀಮೆಯ ರೈತರ ಸಮಸ್ಯೆಗೆ ಸ್ಪಂದಿಸಿ ವಿವಿ ಸಾಗರದ ನೀರನ್ನು ವೇದಾವತಿ ನದಿಗೆ ಹರಿಸಿದ್ದು, ಈ ಭಾಗದ ಜನ-ಜಾನುವಾರುಗಳಿಗೆ ಕುಡಿವ ನೀರು, ಅಂತರ್ಜಲ ವೃದ್ಧಿಗೆ ನೆರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಸೂರನಹಳ್ಳಿ, ಚೌಳೂರು, ಪರಶುರಾಮಪುರ, ಜುಂಜರಗುಂಟೆ, ಚಟ್ಟೇಕಂಬ, ಪಗಡಲಬಂಡೆ, ಹಾಲಗೊಂಡನಹಳ್ಳಿ ಗ್ರಾಮಗಳಿಗೆ ತೆರಳಿ ನೀರಿನ ಹರಿವಿನ ಪ್ರಮಾಣ ವೀಕ್ಷಿಸಿದರು.

    ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಸದಸ್ಯರಾದ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಗುಜ್ಜಾರಪ್ಪ, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ರೈತ ಮುಖಂಡ ಕೆ.ಪಿ.ಭೂತಯ್ಯ, ಗ್ರಾಪಂ ಮಾಜಿ ಅಧ್ಯಕ್ಷರಾದ ಕಾಟಯ್ಯ, ಮಾರುತಿ, ಗ್ರಾಮದ ಮುಖಂಡರಾದ ನಾಗಭೂಷಣ, ಚಿತ್ತಪ್ಪ, ಜಯವೀರಾಚಾರಿ ಆಂಜನೇಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts