More

  ಹೆಚ್ಚಿನ ಸಾಮರ್ಥ್ಯದ ಟಿಸಿ ಅಳವಡಿಕೆಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಅನುಕೂಲ

  ಪರಶುರಾಮಪುರ: ಹೋಬಳಿ ಕೇಂದ್ರದ ಬೆಸ್ಕಾಂ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ ಪರಿವರ್ತಕ ಅಳವಡಿಕೆಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಅನುಕೂಲವಾಗಲಿದೆ ಎಂದು ಕಾರ್ಯಪಾಲಕ ಇಂಜಿನಯರ್ ಎಸ್.ಲಕ್ಷ್ಮಿ ಹೇಳಿದರು.

  ಗ್ರಾಮದ ಪಾವಗಡ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಹಿಂಭಾಗದ ಬೆಸ್ಕಾಂ ಇಲಾಖೆಯ ಪವರ್ ಸ್ಟೇಷನ್ ಆವರಣದಲ್ಲಿ 20 ಕೆವಿಎ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

  ಹೋಬಳಿ ವ್ಯಾಪ್ತಿಯ ರೈತರ ಬೇಡಿಕೆಯಂತೆ 20 ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಇನ್ನು ಮುಂದೆ ವಿದ್ಯುತ್ ವೋಲ್ಟೇಜ್, ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ ಎಂದರು.

  ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಹತ್ತಾರು ವರ್ಷಗಳ ರೈತರ ಬೇಡಿಕೆ ಈಗ ಈಡೇರಿದೆ. ಸರ್ಕಾರ ಬಯಲು ಸೀಮೆಯಲ್ಲಿ ಕೊಳವೆಬಾವಿಯ ನೀರು ಪಡೆಯಲು ತೊಂದರೆ ಆಗುತ್ತಿತ್ತು. ಹೆಚ್ಚಿನ ಸಾಮರ್ಥ್ಯದ ಅಳವಡಿಕೆಯಿಂದ ಸತತ ಏಳು ಗಂಟೆ ತ್ರಿಪೇಸ್ ವಿದ್ಯುತ್ ಸಿಗಲಿದೆ ಎಂದು ಹೇಳಿದರು.

  ಸರ್ಕಾರ ಕೂಡಲೇ ಪಿ.ಮಹದೇವಪುರ ಮತ್ತು ದೊಡ್ಡಬೀರನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ಆರಂಭಿಸಲು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

  ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಣ್ಣ, ಟಿಎಲ್ ವಿನಾಯಕ, ಜೆಇ ಶಿವಕುಮಾರ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ರೈತರಾದ ಬಾಷ, ಪರಶುರಾಮ, ಜಂಪಣ್ಣ, ರುದ್ರಣ್ಣ, ಕರಿಯಣ್ಣ, ಚಿತ್ತಯ್ಯ, ಹನುಮಂತರಾಯ, ಪರಮೇಶಣ್ಣ, ನವೀನ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts