More

  ಗೋಮಾಳ ಮತ್ತೆ ಸಾಗುವಳಿ ಮಾಡಿದ್ರೆ ಹುಷಾರ್; ರೈತರಿಗೆ ಎಚ್ಚರಿಕೆ ನೀಡಿದ ತಹಸೀಲ್ದಾರ್

  ಪರಶುರಾಮಪುರ: ಸಮೀಪದ ಮೋದೂರು ಗ್ರಾಮದ 72 ಎಕರೆ ಗೋಮಾಳದಲ್ಲಿ ಸಾಗುವಳಿ ಒತ್ತುವರಿಯನ್ನು ತಹಸೀಲ್ದಾರ್ ಎನ್.ರಘುಮೂರ್ತಿ ಮಂಗಳವಾರ ತೆರವುಗೊಳಿಸಿ, ಅಕ್ರಮವಾಗಿ ಪ್ರವೇಶ ಮಾಡಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

  ಗ್ರಾಮದ 8 ಮಂದಿ ಗೋಮಾಳದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದರು. ಕಳೆದ ವರ್ಷವೂ ಈ ಭೂಮಿ ಒತ್ತುವರಿ ಮಾಡಿದವರಿಗೆ ತಿಳಿವಳಿಕೆ ನೀಡಲಾಗಿತ್ತು. ಟ್ರಂಚ್ ಹೊಡೆಸಿ ಬಂದೋಬಸ್ತ್ ಸಹ ಮಾಡಲಾಗಿತ್ತು. ಆದರೂ, ಕೆಲವರು ಮತ್ತೆ ಅತಿಕ್ರಮಣ ಮಾಡಿ ಒತ್ತುವರಿಗೆ ಮುಂದಾಗಿದ್ದರು. ಈ ಬಗ್ಗೆ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದರು.

  ಮಂಗಳವಾರ ಭೂಮಾಪನ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್, ಸರ್ವೇ ಕೈಗೊಂಡು ಒತ್ತುವರಿ ತೆರವುಗೊಳಿಸಿ ಅತಿಕ್ರಮಣ ಮಾಡಿದವರ ವಿರುದ್ಧ ಭೂ ಕಂದಾಯ ಕಾಯ್ದೆ 192 ಎ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದರು.

  ಬಳಿಕ ಇನ್ನು ಮುಂದೆ ಗೋಮಾಳವನ್ನು ಅಕ್ರಮವಾಗಿ ಪ್ರವೇಶ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಎಚ್ಚರಿಕೆ ಸಹ ನೀಡಿದರು.

  ಜಾಜೂರು ಗ್ರಾಪಂ ಅಧ್ಯಕ್ಷೆ ಗೌರಮ್ಮ ರಂಗಪ್ಪ, ಉಪಾಧ್ಯಕ್ಷ ಹೇಮಂತ ರಾಜ್, ಗ್ರಾಪಂ ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ಅಂಜಿನಪ್ಪ, ಆರ್‌ಐ ಎಎಂ ಟಿ.ಮೋಹನಕುಮಾರ, ಭೂಮಾಪನಾಧಿಕಾರಿ ಪ್ರಸನ್ನಕುಮಾರ, ಗ್ರಾಮಸ್ಥರಾದ ಹನುಮಂತರಾಯ, ತಿಪ್ಪೇಸ್ವಾಮಿ, ರಾಮಣ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts