More

    ಆಫ್ರಿಕಾ ಖಂಡದಲ್ಲಿ ಬೆಣ್ಣೆನಗರಿ ಗಿಳಿಗಳು

    ದಾವಣಗೆರೆ: ಬೆಣ್ಣೆನಗರಿಯಲ್ಲಿನ ಪಕ್ಷಿ ಸಂಕುಲ, ಆಫ್ರಿಕಾ ಖಂಡದ ಕೆಲ ಭಾಗದಲ್ಲಿ ಕಾಣಸಿಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಶಿಶುಪಾಲ್ ಹೇಳಿದರು.

    ನಗರದ ಜನತಾ ಬಜಾರ್‌ನಲ್ಲಿ ಸೋಮವಾರ ವಿಶ್ವ ಪರಿಸರ ದಿನದ ಅಂಗವಾಗಿ ಗಿಳಿವಿಂಡು ಬಳಗ ಹಮ್ಮಿಕೊಂಡಿದ್ದ ‘ಗಿಳಿವಿಂಡು ನೋಡೋಣ ಬನ್ನಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯ ಇಲಾಖೆ ದಾವಣಗೆರೆಯಲ್ಲಿ ಕೇವಲ 20 ಪ್ರಬೇಧದ ಪಕ್ಷಿಗಳಿವೆ ಎನ್ನುತ್ತಿದೆ.

    ಆದರೆ ಇಲ್ಲಿ ಕಾಗೆ, ಗುಬ್ಬಿ, ಕೋಗಿಲೆ, ಗಿಳಿ ಸೇರಿ 262 ಪ್ರಬೇಧದ ಪಕ್ಷಿಗಳಿವೆ ಎಂದರು.

    ಒಟ್ಟು ನಾಲ್ಕು ತರಹದ ಗಿಳಿಗಳಿವೆ. ಅದರಲ್ಲಿ ದಾವಣಗೆರೆಯಲ್ಲಿ ರಿಂಗ್‌ನೆಕೆಡ್ ಪ್ಯಾರಾಕಿಟ್, ಪ್ಲಮ್‌ಮೊಪೆಡ್ ಪ್ಯಾರಾಕಿಟ್, ಚನ್ನಗಿರಿಯಲ್ಲಿ ಅಲೆಗ್ಸಾಂಡ್ರಿನ್ ಪ್ಯಾರಾಕಿಟ್, ಮಾವಿನಹಳ್ಳಿ ಬಳಿ ಮಲಬಾರ್ ಪ್ಯಾರಾಕಿಟ್‌ಗಳಿವೆ.

    ಇಲ್ಲಿರುವ ಗಿಳಿಗಳು ದೇಶದ ಇತರೆಡೆಯೂ ಕಂಡು ಬಂದಿವೆ. ಪಂಜರದಲ್ಲಿ ಗಿಳಿಗಳನ್ನು ಸಾಕುತ್ತಿರುವ ಪರಿಣಾಮ, ವಾಸಸ್ಥಾನ ಹುಡುಕಿಕೊಂಡು ಇಲ್ಲಿಗೆ ಬಂದಿವೆ ಎಂದರು.

    ಕಳೆದ ನಾಲ್ಕು ದಶಕಗಳಿಂದ ಇಲ್ಲಿನ ಜನತಾ ಬಜಾರ್ ಬಳಿಯ ಮರಗಳಲ್ಲಿ ಗಿಳಿಗಳು ವಾಸಿಸುತ್ತಿವೆ.

    ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪಾಲಿಕೆ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವಾಗ ಮರಗಳಿಗೆ ಧಕ್ಕೆ ಬಾರದಂತೆ ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

    ಮೇಯರ್ ವಿನಾಯಕ ಪೈಲ್ವಾನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಕ್ಷಿ ಸಂತತಿ ಕ್ಷೀಣಿಸುತ್ತಿದೆ. ಆದ್ದರಿಂದ ಪಕ್ಷಿಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್ ಮಾತನಾಡಿ, ಗಿಳಿಗಳು ವಾಸವಾಗಿರುವ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು.

    ಈ ಸ್ಥಳ ಗಿಳಿ ವೀಕ್ಷಣಾ ಸ್ಥಳವಾಗಿ ಅಭಿವೃದ್ಧಿಯಾಗಲಿ ಎಂದು ಆಶಿಸಿದರು.

    ಎಸ್‌ಬಿಎಂ ನಿವೃತ್ತ ಅಧಿಕಾರಿ ಅಜಿತ್‌ಕುಮಾರ್, ಹಿರಿಯ ಪತ್ರಕರ್ತ ಕೆ. ಚಂದ್ರಣ್ಣ, ಜನತಾ ಬಜಾರ್ ಅಧ್ಯಕ್ಷ ಗುರುಸ್ವಾಮಿ, ಪತ್ರಕರ್ತ ಸದಾನಂದ ಹೆಗಡೆ, ಬಳಗದ ಎಂ.ಜಿ. ಶ್ರೀಕಾಂತ್, ರಾಜಶೇಖರ ಸಕ್ಕಟ್ಟು, ಅಶೋಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts