More

    ಬಸ್ ಸೌಲಭ್ಯ ಇಲ್ಲದೆ ಭಕ್ತರ ಪರದಾಟ

    ಹನೂರು: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಚಿಕ್ಕಲ್ಲೂರು ಜಾತ್ರೆಗೆ ಹನೂರಿನಿಂದ ಬಸ್ ಸೌಕರ್ಯ ಕಲ್ಪಿಸದ ಪರಿಣಾಮ ಭಾನುವಾರ ಭಕ್ತರು ಪಟ್ಟಣದಲ್ಲಿ ತೊಂದರೆ ಅನುಭವಿಸಿದರು.
    ಕಳೆದ ಮೂರು ದಿನಗಳಿಂದ ಜಾತ್ರೆಗೆ ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ. ಕೊಳ್ಳೇಗಾಲದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಹನೂರಿನಿಂದ ಬಂಡಳ್ಳಿ ಮಾರ್ಗವಾಗಿ ಬಸ್ ಸೌಕರ್ಯ ಕಲ್ಪಿಸಿಲ್ಲ. ಭಾನುವಾರ ಜಾತ್ರೆಯಲ್ಲಿ ನಡೆಯುವ ಪಂಕ್ತಿಸೇವೆಯ ಹಿನ್ನೆಲೆಯಲ್ಲಿ ಹನೂರು ಸೇರಿದಂತೆ ಒಡೆಯರಪಾಳ್ಯ, ಮಾರ್ಟಳ್ಳಿ, ಲೊಕ್ಕನಹಳ್ಳಿ, ಪೊನ್ನಾಚಿ, ಕೌದಳ್ಳಿ, ರಾಮಾಪುರ, ಕುರಟ್ಟಿಹೊಸೂರು, ದಂಟಳ್ಳಿ ಇನ್ನಿತರ ಗ್ರಾಮದ ಜನತೆ ತಂಡೋಪತಂಡವಾಗಿ ಹನೂರು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಹನೂರಿನಿಂದ ಚಿಕ್ಕಲ್ಲೂರಿಗೆ ಬಸ್ ಸೌಕರ್ಯ ಇರಲಿಲ್ಲ. ಇದರಿಂದ ಭಕ್ತರು ಬಸ್ಸಿಲ್ಲದೆ ತೊಂದರೆ ಅನುಭವಿಸಬೇಕಾಯಿತು.

    ಕೆಲ ಭಕ್ತರು ದೊಡ್ಡಿಂದುವಾಡಿ ಮಾರ್ಗವಾಗಿ ಸುತ್ತಿ ಬಳಸಿ ಚಿಕ್ಕಲ್ಲೂರಿಗೆ ತೆರಳಿದರೆ, ಈ ಭಾಗದ ಬಹುತೇಕ ಭಕ್ತರು ಹೆಚ್ಚಿನ ಹಣ ನೀಡಿ ಆಟೋ, ಗೂಡ್ಸ್ ಆಟೋ ಹಾಗೂ ಇನ್ನಿತರ ವಾಹನಗಳ ಮೂಲಕ ನಿಂತುಕೊಂಡೇ ಪ್ರಯಾಣ ಬೆಳೆಸಿದರು. ಇದರಿಂದ ಜಾತ್ರೆಗೆ ತೆರಳುವ ಜನತೆ ತೊಂದರೆ ಪಡುವಂತಾಯಿತು. ಈ ಬಗ್ಗೆ ಸಾರ್ವಜನಿಕರಿಂದ ಸಾರಿಗೆ ಇಲಾಖೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts