More

    VIDEO: ಪಾಂಡ್ಯ ಸಹೋದರರ ಸಂಗೀತ ಪ್ರೇಮ

    ಬೆಂಗಳೂರು: ಭಾರತೀಯ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಹೊಸದೇನಲ್ಲ. ಅದರಲ್ಲೂ ಲಾಕ್‌ಡೌನ್ ಜಾರಿಯಾದ ಮೇಲಂತೂ ಇನ್‌ಸ್ಟಾಗ್ರಾಂ ಎಲ್ಲರಿಗೂ ನೆಚ್ಚಿನ ಸಾಧನವಾಗಿದೆ. ಫಿಟ್ನೆಸ್, ಲೈವ್ ಸಂವಾದವೇ ಅವರ ಭಾಗವಾಗಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಆಲ್ರೌಂಡರ್‌ಗಳಾದ ಪಾಂಡ್ಯ ಬ್ರದರ್ಸ್‌ ಹಿಂದಿ ಚಿತ್ರವೊಂದರ ಹಾಡು ಹೇಳುವ ಮೂಲಕ ಗಮನಸೆಳೆದಿದ್ದಾರೆ. ಬಾಲಿವುಡ್ ‘ಕೇಸರಿ’ ಚಿತ್ರದ ‘ತೇರಿ ಮಿಟ್ಟಿ’ ಹಾಡಿಗೆ ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಧ್ವನಿಗೂಡಿಸಿದ್ದಾರೆ.

    ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳ ನೆಚ್ಚಿನ ಸಂಗಾತಿ ಯಾರು ಗೊತ್ತೇ?

    ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಲಾಕ್‌ಡೌನ್ ವೇಳೆ ತಮ್ಮಭಾವಿ ಪತ್ನಿ ನತಾಶ, ಸಹೋದರ ಕೃನಾಲ್ ಹಾಗೂ ಅತ್ತಿಗೆ ಪಂಕುರಿ ಜತೆಗೆ ಸಮಯ ಕಳೆಯುತ್ತಿದ್ದಾರೆ. ಕುಟುಂಬ ಜತೆಗಿರುವ ವಿಡಿಯೋ, ೆಟೋಗಳನ್ನು ಈ ಸಹೋದರರು ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ಪ್ರಕಟಿಸುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ನತಾಶ ‘ಭಾನುವಾರ ನ್‌ಡೇ’ ನಾಯಿ ಮರಿಗಳೊಂದಿಗೆ ಆಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.

    ಲಾಕ್‌ಡೌನ್ ವಿಶೇಷ ಎಂದು ಕರೋಕೆ ಸಂಗೀತದ ಸಹಾಯದೊಂದಿಗೆ ಪಾಂಡ್ಯ ಸಹೋದರರು ಹಾಡಿರುವ ಹಾಡು ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಸಹೋದರರ ಬಹುಮುಖ ಪ್ರತಿಭೆ ಕುರಿತು ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ನತಾಶ ಹಾಗೂ ಪಂಕುರಿ ರೆಡ್ ಹಾರ್ಟ್ ಎಮೊಜಿ ಹಾಕಿ ಪ್ರತಿಕ್ರಿಯಿಸಿದ್ದಾರೆ. ಪಾಂಡ್ಯ ಸಹೋದರರು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಮಾರ್ಚ್ 29 ರಂದು ಆರಂಭಗೊಳ್ಳಬೇಕಿದ್ದ ಐಪಿಎಲ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts