More

    ಸಾಂಕ್ರಾಮಿಕ ರೋಗ ಪ್ರಮಾಣ ಇಳಿಕೆ

    ಅವಿನ್ ಶೆಟ್ಟಿ ಉಡುಪಿ
    ಕರೊನಾ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಲಾದ ಲಾಕ್‌ಡೌನ್, ಸೋಶಿಯಲ್ ಡಿಸ್ಟೆನ್ಸ್ ಕ್ರಮಗಳು ಹಲವು ಬದಲಾವಣೆ ಕಾರಣವಾಗುತ್ತಿದ್ದು , ಇತರ ಸಾಂಕ್ರಾಮಿಕ ರೋಗಗಳ ಪ್ರಮಾಣ ಕುಸಿಯಲು ಪರೋಕ್ಷವಾಗಿ ಕಾರಣವಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಲೇರಿಯ, ಇಲಿಜ್ವರ ಇತ್ಯಾದಿ ಸಾಂಕ್ರಾಮಿಕ ರೋಗ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾ ಗಿದೆ. ಪ್ರತಿವರ್ಷ ಈ ಅವಧಿಯಲ್ಲಿ ವೈರಲ್ ಜ್ವರಗಳ ಪ್ರಕರಣ ಹೆಚ್ಚುತ್ತಿತ್ತು. ಜ್ವರ, ಶೀತ, ಕೆಮ್ಮು ಸಾಮಾನ್ಯವಾಗಿರುತ್ತಿತ್ತು. ಆದರೆ ಈ ವರ್ಷ ಲಾಕ್‌ಡೌನ್ ಬಳಿಕ ವೈರಲ್ ಫಿವರ್ ಪ್ರಮಾಣ ಕಡಿಮೆಯಾಗಿದೆ.

    ಲಾಕ್‌ಡೌನ್ ಅವಧಿಯಲ್ಲಿ ಜನರು ಮನೆಯಲ್ಲೇ ಇರುವುದು. ಸಾಮಾಜಿಕ ಅಂತರ, ಜನ ಸಂಪರ್ಕ ಕಡಿಮೆ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಹೆಚ್ಚಳ, ಪರಿಸರ, ದೇಹದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಸಾಂಕ್ರಾಮಿಕ ರೋಗ ಕಡಿಮೆಯಾಗಲು ಪ್ರಮುಖ ಕಾರಣಗಳು ಎನ್ನುತ್ತಾರೆ ವೈದ್ಯರು .

    ಈ ಬಾರಿ ಬೆರಳೆಣಿಕೆಯಷ್ಟೇ ರೋಗಿಗಳು: ಕಳೆದ ವರ್ಷ ಈ ಸಮಯದಲ್ಲಿ 150 ರಿಂದ 200 ಎಚ್1ಎನ್1 ಪ್ರಕರಣಗಳಿದ್ದವು. ಈ ಬಾರಿ ಜನವರಿಯಿಂದ ಇಲ್ಲಿವರೆಗೆ 114 ಪ್ರಕರಣಗಳು ದಾಖಲಾಗಿವೆ. ಲಾಕ್‌ಡೌನ್ ಅವಧಿಯಲ್ಲಿ ಈ ಸಂಖ್ಯೆ ಬೆರಳಣಿಕೆಯಷ್ಟೇ ಇದೆ. ಕಳೆದ ವರ್ಷ ಈ ಸಮಯದಲ್ಲಿ 20ರಷ್ಟಿದ್ದ ಮಲೇರಿಯ ಪ್ರಕರಣ ಈ ಬಾರಿ 7ಕ್ಕಿಳಿದಿದೆ. 50ರಷ್ಟಿದ್ದ ಡೆಂೆ ಪ್ರಕರಣ ಈ ಬಾರಿ 33 ಮಾತ್ರವಾಗಿದೆ. ಲಾಕ್‌ಡೌನ್ ಹೊರತಾಗಿಯೂ ವರ್ಷ ಕಳೆದಂತೆ ಜಿಲ್ಲೆಯಲ್ಲಿ ಸಾಂಕ್ರಮಿಕ ರೋಗ ಸಂಖ್ಯೆ ಇಳಿಮುಖವಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. 2018ರಲ್ಲಿ ಎಚ್1ಎನ್1 117, ಡೆಂೆ 228, ಮಲೇರಿಯಾ 221, ಇಲಿ ಜ್ವರ 330 ಪ್ರಕರಣಗಳು ದಾಖಲಾಗಿದ್ದವು. 

    50 ಇಲಿ ಜ್ವರ ಪ್ರಕರಣ: ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಇಲಿ ಜ್ವರ ಪ್ರಕರಣಗಳು ಹೆಚ್ಚು ಕಂಡುಬರುತಿದ್ದು, ಪ್ರತೀ ವರ್ಷ 280 ರಿಂದ 300 ಪ್ರಕರಣಗಳು ವರದಿಯಾಗುತ್ತಿದ್ದವು. ನಿರ್ದಿಷ್ಟ ಔಷಧಿ ಮತ್ತು ಚಿಕಿತ್ಸಾ ವಿಧಾನ ಲಭ್ಯತೆ, ವಿಶೇಷ ಕಾರ್ಯಕ್ರಮ, ಜಾಗೃತಿ ಅಭಿಯಾನ ಕೈಗೊಂಡ ಹಿನ್ನೆಲೆಯಲ್ಲಿ ಸದ್ಯ ಇಲಿ ಜ್ವರ ಪ್ರಕರಣಗಳ ಸಂಖ್ಯೆ ಕಳೆದ ಎರಡು ವರ್ಷಗಳಿಂದ ಕಡಿಮೆಯಾಗುತ್ತಿದೆ. ಕಳೆದ ವರ್ಷ ಈ ಸಮಯದಲ್ಲಿ 120 ರಷ್ಟಿದ್ದ ಇಲಿಜ್ವರ ಪ್ರಕರಣ ಈ ಬಾರಿ 50 ಮಂದಿಯಲ್ಲಷ್ಟೇ ಪತ್ತೆಯಾಗಿದೆ. 

    ಎಲ್ಲರೂ ಗುಣಮುಖ: ಇಲ್ಲಿವರೆಗೆ ಪತ್ತೆಯಾಗಿರುವ ಮಲೇರಿಯ, ಡೆಂೆ, ಇಲಿಜ್ವರ, ಎಚ್1ಎನ್1 ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ. ಇದುವರೆಗೆ ಸಾಂಕ್ರಮಿಕ ರೋಗ ಪ್ರಕರಣಗಳಲ್ಲಿ ಒಂದು ಸಾವು ಕೂಡ ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಕರೊನಾ ಒತ್ತಡದ ನಡುವೆಯೂ ಇನ್ನಿತರೆ ಸಾಂಕ್ರಾಮಿಕ ರೋಗಗಳನ್ನು ನಿರ್ವಹಿಸಲು, ಅದನ್ನು ತಡೆಗಟ್ಟುವ ಬಗ್ಗೆ ಆಯಾ ವಿಭಾಗದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ಪ್ರಸ್ತುತ ಕಾರ್ಕಳ, ಕುಂದಾಪುರ ತಾಲೂಕು ಆಸ್ಪತ್ರೆ ತಲಾ ಒಂದು, ಇನ್ನೊಂದು ಜಿಲ್ಲಾಸ್ಪತ್ರೆಯಲ್ಲಿ ಸೇರಿದಂತೆ 3 ಫಿವರ್ ಕ್ಲೀನಿಕ್ ತೆರೆಯಲಾಗಿದ್ದು, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಫಿವರ್ ಕ್ಲಿನಿಕ್ ತೆರೆಯಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾ ಹೋರಾಟದ ಜೊತೆಯಲ್ಲಿ ಇನ್ನಿತರೆ ಸಾಂಕ್ರಮಿಕ ರೋಗಗಳ ಬಗ್ಗೆಯೂ ವಿಶೇಷ ನಿಗಾ ವಹಿಸುವಂತೆ ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಾಕ್‌ಡೌನ್ ಇರುವುದರಿಂದ ಜನರ ಓಡಾಟ ಇಲ್ಲ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ, ಇತರ ಸಾಂಕ್ರಮಿಕ ರೋಗಗಳ ಸಂಖ್ಯೆಯೂ ನಿಯಂತ್ರಣದಲ್ಲಿದೆ. ಸಾರ್ವಜನಿಕರು ಸಾಂಕ್ರಮಿಕ ರೋಗ ಲಕ್ಷಣ ಕಂಡುಬಂದಲ್ಲಿ ನಿರ್ಲ್ಯಕ್ಷ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
    -ಡಾ.ಸುಧೀರ್ ಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ

     ಕಡು ಬೇಸಿಗೆ ಇರುವುದರಿಂದ ಡೆಂೆ ಪ್ರಕರಣಗಳು ಕಡಿಮೆಯಾಗಿವೆ. ಆದರೂ ಆಶಾ ಕಾರ್ಯಕರ್ತರು ಮನೆ ಮನೆಗಳಿಗೆ ಭೇಟಿ ನೀಡುವ ವೇಳೆ ಡೆಂೆ ಜಾಗೃತಿಯನೂ ್ನ ಮೂಡಿಸುತ್ತಿದ್ದಾರೆ. ಕಳೆದ ವರ್ಷ ತೀವ್ರವಾಗಿ ಕಾಡಿದ್ದ ಎಚ್1ಎನ್1 ಪ್ರಕರಣಗಳೂ ಈ ಬಾರಿ ವರದಿಯಾಗಿಲ್ಲ. ಇತರ ಸಾಂಕ್ರಾಮಿಕ ರೋಗಗಳೂ ಕಡಿಮೆಯಾಗಿವೆ.
    -ಡಾ.ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts